Publish Date: Fri, 21 Dec 2007 (12:11 IST)
Updated Date: Fri, 21 Dec 2007 (12:10 IST)
ನಿಮ್ಮ ಪ್ರಿಯ 'ಸೆಲೆಬ್ರೆಟಿ'ಗಳು ನಿಮ್ಮ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಬಂದಿರುವ ಅತಿಥಿಗಳ ಕೈಕುಲುಕಬೇಕಾ? ನೀವು ಮಾಡಬೇಕಾಗಿರುವುದು ಇಷ್ಟೇ. ಸುಮಾರು 1 ಕೋಟಿ ರೂಪಾಯಿ ತೆತ್ತಲು ನೀವು ನಿಮ್ಮ ಕಿಸೆ ಸುಟ್ಟುಕೊಂಡರೆ ಸಾಕು.
ಜಿಗ್ ನೃತ್ಯ ಮಾಡಲು ಶಾರುಖ್ ಖಾನ್ ಒಪ್ಪದೇ ಇರಬಹುದು ಆದರೆ ಒಂದು ಕೋಟಿ ರೂಪಾಯಿಗೆ ಇವರು ಸಂತೋಷವಾಗಿ ಅತಿಥಿಯಾಗಿ ಬರಬಲ್ಲರು.
ಸೆಲಿನಾ ಜೈಟ್ಲೀ, ಮಲೈಕಾ ಅರೋರಾ, ದಿಯಾ ಮಿರ್ಜಾ, ಕಾಱಿ ಸಾವಂತ್, ಇಶಾ ಕೊಪ್ಪಿಕಾರ್ ಮುಂತಾದ ಐಟಂ ಹುಡುಗಿಯರು ಮತ್ತು ಬಾಲಿವುಡ್ ನಟರು ತಮ್ಮ ಪ್ರತಿ ನಿರ್ವಹಣೆಗೂ ಒಂದು ಮಿಲಿಯನ್ ಬೇಡಿಕೆಯೊಡ್ಡುತ್ತಾರೆ.
ದಶಕಗಳ ಹಿಂದೆ ಇಂತಹವುಗಳೆಲ್ಲಾ ಕೇಳಲು ಕೂಡಾ ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಎಲ್ಲವೂ ವಿಭಿನ್ನವಾಗಿವೆ ಯಾಕೆಂದರೆ ಜನರಲ್ಲಿ ಈಗ ಹಣ ಇದೆ ಎಂಬುದು ಈವೆಂಟ್ ಮ್ಯಾನೇಜ್‌ಮೆಂಟ್ ಫರ್ಮ್ ಟಚ್‌ವುಡ್ ಎಂಟರ್ಟೈನ್‌ಮೆಂಟ್‌ನ ನಿರ್ವಹಣಾಕಾರ ರಾಹುಲ್ ನಾಗ್ಪಾಲ್ ಅವರ ಅಭಿಪ್ರಾಯವಾಗಿದೆ.
ಗಾಯಕ ಸೋನುನಿಗಂ 3 ಮಿಲಿಯನ್ ಬೇಡಿಕೆಯೊಡ್ಡಿದ್ದರೆ, ಶಾನ್ 2.5 ಲಕ್ಷ ಕೇಳುತ್ತಾರೆ. ಕೈಲಾಶ್ ಕೇರ್ 1.5 ಮಿಲಿಯನ್ ಡಿಮ್ಯಾಂಡ್ ಮಾಡಿದರೆ, ಡೇಲರ್ ಮೆಹೆಂದಿ ಅತಿಥಿಗಳನ್ನು ರಂಜಿಸಲು 1.2 ಮಿಲಿಯನ್ ಸಾಕೆನ್ನುತ್ತಾರೆ. ಇವರಿಗೆಲ್ಲಾ ಪಂಜಾಬ್ ಮದುವೆ ಸಮಾರಂಭಗಳಲ್ಲಿ ತುಂಬಾ ಬೇಡಿಕೆಯಿದೆ.
ಮದುವೆಯನ್ನು ವಿಶಿಷ್ಟವಾಗಿ ನಿರ್ವಹಿಸುವುದರೊಂದಿಗೆ ,ನಟರನ್ನು ಮದುವೆಗೆ ಆಮಂತ್ರಿಸುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸಲು ಜನ ಬಯಸುತ್ತಾರೆ ಎಂಬುದು ದುಬಾರಿ ಮದುವೆ ಯೋಜನೆ ಪ್ರಕ್ರಿಯೆ ಮುಖ್ಯಸ್ಥೆ ಪ್ರಣೀತಾ ಅವರ ಅಂಬೋಣ.
ಪ್ರತಿವರ್ಷ ಶೇಕಡಾ 50ಕ್ಕಿಂತಲೂ ಹೆಚ್ಚು ಗ್ರಾಹಕರು ತಮ್ಮ ಮದುವೆ ಸಮಾರಂಭಕ್ಕಾಗಿ ಸೆಲೆಬ್ರೆಟಿಗಳನ್ನು ಆಮಂತ್ರಿಸುತ್ತಿದ್ದು, , ಉತ್ತರ ಭಾರತ ನಗರಗಳಾದ ದೆಹಲಿ, ಛಂದೀಗರ್, ಲುಧಿಯಾನಾ ಮುಂತಾದ ನಗರಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದು ಪ್ರಣೀತಾ ಹೇಳುತ್ತಾರೆ.