ಶಾರುಖ್ ಖಾನ್ ಬೆಂಗಾಲಿ ಪ್ರೀತಿ
Publish Date: Mon, 11 Nov 2013 (09:15 IST)
Updated Date: Mon, 11 Nov 2013 (09:15 IST)
ತಾನು ಪಕ್ಕ ಬೆಂಗಾಲಿ ಎಂದು ಹೇಳಿಸಿ ಕೊಳ್ತೀನಿ ಎಂದು ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಹೇಳಿದ್ದಾರೆ. ಅವರು ಜಯಾ ಬಚ್ಚನ್ ಅವರ ಬಳಿ ಬೆಂಗಾಲಿ ಕಲಿತು ಕೊಳ್ತೀನಿ ಎಂದು ಹೇಳಿದ್ದಾರೆ. 19ರಂದು ಕೊಲ್ಕತ್ತಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ (ಕೆ ಐ ಎಫ್ ಎಫ್ )ದ ಆರ೦ಭೋತ್ಸವದಲ್ಲಿ ಭಾಗವಹಿಸಲೆಂದು ಶಾರುಖ್ ಹಾಜರಾಗಿದ್ದಾರೆ. ಈ ಸಮಯದಲ್ಲಿ ಮಾಧ್ಯಮಿಗಳ ಜೊತೆ ಮಾತನಾಡುವಾಗ ತನ್ನನ್ನು ಪ್ರೀತಿಸಿ ಆದರಿಸಿದ ಬೆಂಗಾಲಿ ನಿವಾಸಿಗಳಿಗೆ ಧನ್ಯವಾದ ಅರ್ಪಿಸಿದರು. ನೀವು ನನ್ನನ್ನು ನಿಮ್ಮವನಂತೆ ಅಕ್ಕರೆ ಪ್ರೀತಿ ತೋರಿದ್ದಕ್ಕೆ ಧನ್ಯವಾದಗಳು. ಕಳೆದ ಮೂರು ವರ್ಷಗಳಿಂದ ಕೆ ಐ ಎಫ್ ಎಫ್ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದೇನೆ. ಮುಂದೆ ಭೇಟಿ ಆದಾಗ ತಪ್ಪದೆ ನಾನು ಬೆಂಗಾಲಿ ಕಲಿತು ಮಾತನಾಡುತ್ತೇನೆ. ಜಯಾ ಬಚ್ಚನ್ ಹತ್ರ ಬೆಂಗಾಲಿ ಕಲಿತು ಪೂರ್ಣ ಬೆಂಗಾಲಿ ಆಗ್ತೀನಿ ಎಂದು ಅಂದಿದ್ದಾರೆ ಕಿಂಗ್ ಖಾನ್ .