ಶಾರುಖ್ ಖಾನ್ ಗುಣಮುಖ.. ಮತ್ತೆ ಹ್ಯಾಪಿ ನ್ಯೂ ಇಯರ್ ಕಡೆಗೆ !
, ಬುಧವಾರ, 5 ಫೆಬ್ರವರಿ 2014 (10:32 IST)
ಹ್ಯಾಪಿ ನ್ಯೂ ಇಯರ್ ಚಿತ್ರದ ಚಿತ್ರೀಕರಣ ಸಮಯದಲ್ಲಿ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಹಣೆಗೆ ತಗುಲಿ ಗಾಯವಾಯಿತು. ಆ ಸಮಯದಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಈಗ ಅವರು ಮತ್ತೆ ತಮ್ಮ ಕೆಲಸ ಆರಂಭಿಸಿದ್ದಾರೆ, ಅನೇಕ ದಿನಗಳ ವಿಶ್ರಾಂತಿ ಬಳಿಕ. ಫರಾಖಾನ್ ಅವರು ನಿರ್ದೇಶಿಸುತ್ತಿರುವ ಚಿತ್ರ ಹ್ಯಾಪಿ ನ್ಯೂ ಇಯರ್ ನಲ್ಲಿ ನಟ ಶಾರುಖ್ ಮತ್ತು ದೀಪಿಕ ಪಡುಕೋಣೆ ನಟಿಸುತ್ತಿದ್ದಾರೆ. ಶಾರುಖ್ ಫೆಬ್ರವರಿ 4ರಂದು ಮತ್ತೆ ಸೆಟ್ ಗೆ ಹಿಂತಿರುಗಿದ್ದಾರೆ. ತಮ್ಮ ಎಂದಿನ ಶೂಟಿಂಗ್ ನಲ್ಲಿ ಭಾಗಿಯಾದರೆಂದು ಮೂಲಗಳು ಹೇಳಿವೆ. ಈ ಅವಘಡ ನಡೆದದ್ದು ಜನವರಿ 23 ರಂದು. ಆಗ ಅವರನ್ನು ಡಾ. ಬಲಭೈ ನಾನಾವತಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರಿಗೆ ಭುಜಕ್ಕು ಏಟು ಬಿದ್ದಿತ್ತು. ಮೊಣಕಾಲಿಗು ಗಾಯ ಆಗಿತ್ತು. ವೈದ್ಯರು ಸಂಪೂರ್ಣವಾಗಿ ಎರಡು ವಾರಗಳ ಕಾಲ ರೆಸ್ಟ್ ತೆಗೆದುಕೊಳ್ಳ ಬೇಕು ಎನ್ನುವ ಸಲಹೆ ನೀಡಿದ್ದರಿಂದ ಶಾರುಖ್ ತಮ್ಮ ಎಲ್ಲ ಕೆಲಸಕ್ಕೂ ರೆಸ್ಟ್ ನೀಡಿ ವಿಶ್ರಾಂತಿ ಪಡೆದಿದ್ದರು. ಭಾರಿ ಗಾತ್ರದ ಬಾಗಿಲು ತಗುಲಿ ಈ ಅನಾಹುತ ಉಂಟಾಗಿತ್ತು. ಹ್ಯಾಪಿ ನೋ ಇಯರ್ ಚಿತ್ರದಲ್ಲಿ ಶಾರುಖ್ ಜೊತೆ ಅಭಿಷೇಕ್ ಬಚ್ಚನ್ , ಸೋನು ಸೂದ್ ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರವೂ ದೀಪಾವಳಿ ಸಮಯದಲ್ಲಿ ಬಿಡುಗಡೆ ಆಗುತ್ತದೆ.