Article Bollywood Gossips %e0%b2%b6%e0%b2%be%e0%b2%b0%e0%b3%81%e0%b2%96%e0%b3%8d %e0%b2%87%e0%b2%ae%e0%b3%8d%e0%b2%b0%e0%b2%be%e0%b2%a8%e0%b3%8d %e0%b2%9c%e0%b3%81%e0%b2%97%e0%b2%b2%e0%b3%8d%e2%80%8c%e0%b2%ac%e0%b2%82%e0%b2%a6%e0%b2%bf 108072100030_1.htm

Select Your Language

Notifications

webdunia
webdunia
webdunia
webdunia

ಶಾರುಖ್-ಇಮ್ರಾನ್ ಜುಗಲ್‌ಬಂದಿ..?

ಕರಣ್ ಜೋಹರ್‌
ಖ್ಯಾತ ಚಿತ್ರ ನಿರ್ಮಾಪಕ ಕರಣ್ ಜೋಹರ್‌ರ ಮುಂಬರುವ ಚಿತ್ರದಲ್ಲಿ ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ಬಾಲಿವುಡ್ ದುನಿಯಾದ ಹೊಸ ಹುಡುಗ ಇಮ್ರಾನ್ ಖಾನ್‌ರ ಜುಗಲ್‌ಬಂದಿ ಇದ್ದರೆ ಹೇಗಿರುತ್ತದೆ ಯೋಚಿಸಿ! ಸೊಗಸಾಗಿರುತ್ತದೆ ಅಲ್ಲವೇ ? ಬಾಲಿವುಡ್‌ನಲ್ಲಿ ಎದ್ದಿರುವ ಹೊಸ (ಗಾಳಿ)ಸುದ್ದಿಯನ್ನು ನಂಬುವುದಾದರೆ, ಕರಣ್ ಜೋಹರ್ ತಮ್ಮ ಮುಂದಿನ ಚಿತ್ರ 'ಮೈ ನೇಮ್ ಈಸ್ ಖಾನ್'ನಲ್ಲಿ ಉಗ್ರವಾದಿಯ ಪಾತ್ರ ವಹಿಸುವಂತೆ ಇಮ್ರಾನ್ ಖಾನ್‌ನನ್ನು ಕೇಳಿದ್ದಾರಂತೆ.
IFMIFM


ಮೊದಲ ಚಿತ್ರ 'ಜಾನೆ ತೂ ಜಾನೆ ನಾ'ದಲ್ಲಿ ವಿಸ್ಮಯಕಾರಿ ಅಭಿನಯ ನೀಡಿರುವ ಇಮ್ರಾನ್‌ ಪ್ರಸಕ್ತ ಸಮಯದ ಭರವಸೆಯ ಅಭಿನಯ ಪ್ರತಿಭೆಯಾಗಿ ಹೊರಹೊಮ್ಮಿದ್ದಾನೆ. ಇಮ್ರಾನ್‌ನ ಅದ್ಭುತ ಅಭಿನಯದಿಂದ ಪ್ರಭಾವಿತಗೊಂಡಿರುವ ಕರಣ್ ಜೋಹರ್ ತನ್ನ ಚಿತ್ರದಲ್ಲಿ ಪಾತ್ರವೊಂದಕ್ಕೆ ಇಮ್ರಾನ್‌ನನ್ನು ಆರಿಸಿದ್ದಾರೆ.

ಈ ಚಿತ್ರದಲ್ಲಿ ಬಹು ಸಮಯದ ನಂತರ ಕಾಜೋಲ್ ಮತ್ತು ಶಾರುಖ್‌ರ ಪ್ರಸಿದ್ಧ ಜೋಡಿ ಮತ್ತೆ ಜೊತೆಯಾಗಲಿದೆ. ಶಾರುಖ್ ಖಾನ್ ಚಿತ್ರದಲ್ಲಿ ಶಂಕಿತ ಉಗ್ರಗಾಮಿಯ ಪಾತ್ರ ವಹಿಸಲಿದ್ದಾರೆ.

ಇಮ್ರಾನ್‌ ಪಾತ್ರವನ್ನು ಈ ಮೊದಲು ಇನ್ನೊಬ್ಬ ನವ, ಯುವ ನಟ ರಣ್‌ಬೀರ್ ಕಪೂರ್‌ಗೆ ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ಚಿತ್ರವನ್ನು ರಣ್‌ಬೀರ್ ನಿರಾಕರಿಸಿದ್ದ. ಇಮ್ರಾನ್ ಕೂಡ ಪಾತ್ರವನ್ನು ಒಪ್ಪಿಕೊಳ್ಳುತ್ತಾನೆಯೇ ಎಂದು ಕಾದು ನೋಡಬೇಕಷ್ಟೆ.

ಈ ಪಾತ್ರವನ್ನು ಒಪ್ಪಿಕೊಳ್ಳುವ ಮೊದಲು ಚಾಕಲೇಟ್ ಬಾಯ್ ಇಮ್ರಾನ್ ವಿಚಾರಮಾಡಬೇಕಾದ್ದು ಸಮ್ಮತ. ಏಕೆಂದರೆ ಈ ಬಾರಿ ಅವನು ಸ್ಪರ್ಧಿಸಬೇಕಾಗಿರುವುದು ಬಾಲಿವುಡ್ ಬಾದಶಾ, ಕಿಂಗ್ ಖಾನ್‌ರೊಡನೆ. ಪುಣ್ಯಕ್ಕೆ ಇಮ್ರಾನ್‌ಗೆ ಸರಿಯಾದ ಸಲಹೆ ನೀಡಲು 'ಮಾಮು' ಅಮೀರ್ ಖಾನ್ ಇದ್ದಾರಲ್ಲ!

Share this Story:

Follow Webdunia kannada