Publish Date: Sat, 03 Nov 2007 (18:48 IST)Updated Date: Sat, 03 Nov 2007 (18:36 IST)
IFM
ಶಾರುಕ್ ಖಾನ್ ಮತ್ತು ಮಹೇಂದ್ರ ಸಿಂಗ್ ಧೋನಿ ಒಂದೇ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಆದರೆ ಚಲನಚಿತ್ರದಲ್ಲಲ್ಲ. ವಿಡಿಯೋಕಾನ್ ಜಾಹೀರಾತಿನಲ್ಲಿ ಪರಸ್ಪರರ ವೃತ್ತಿಉಡುಪನ್ನು ಬದಲಿಸಿಕೊಂಡು ಒಟ್ಟಿಗೆ ಸೇರಲಿದ್ದಾರೆ.
ಜಾಹೀರಾತಿನಲ್ಲಿ ಶಾರುಕ್ ಖಾನ್ ಅವರನ್ನು ಕ್ರಿಕೆಟ್ ಆಟಗಾರನಂತೆ ಚಿತ್ರಿಸಿದ್ದರೆ ಧೋನಿ ಅವರು ಓಂ ಶಾಂತಿ ಓಂನ ಶಾರುಕ್ ಖಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧೋನಿ ಚಿನ್ನದ ಜಾಕೆಟ್ ಮತ್ತು ಗುಂಗುರು ಕೇಶದ ವಿಗ್ ಧರಿಸಿದ್ದು, ಓಂ ಶಾಂತಿ ಓಂ ದೃಶ್ಯದಂತೆ ಕಾಣುತ್ತದೆ.
ಈ ಚಿತ್ರೀಕರಣವು ಮನೆಯ ಗೃಹೋಪಕರಣಕ್ಕೆ ಸಂಬಂಧಿಸಿದ್ದಾದ್ದರಿಂದ ಅದಕ್ಕೆ "'ಹೋಂ ಶಾಂತಿ ಹೋಂ"ಎಂಬ ಶಿರೋನಾಮೆ ನೀಡಲಾಗಿದೆ. ಶಾರುಕ್ ಕ್ರಿಕೆಟ್ ಆಟಗಾರನಾಗಿ ಮತ್ತು ಧೋನಿ ನಟನಾಗಿದ್ದನ್ನು ನೀವು ಯಾವತ್ತಾದರೂ ಊಹಿಸಿದ್ದೀರಾ?ಹಾಗಾದರೆ ಈ ಜಾಹೀರಾತು ನೋಡಲು ಮರೆಯದಿರಿ.