Publish Date: Sat, 17 Nov 2007 (18:43 IST)
Updated Date: Sat, 17 Nov 2007 (16:28 IST)
ತನ್ನ ಬಗ್ಗೆ ವಿಡಂಬನೆ ಮಾಡಿದ್ದಕ್ಕಾಗಿ ಓಂ ಶಾಂತಿ ಓಂ ಕುರಿತು ಹಿರಿಯ ನಟ ಮನೋಜ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ ಬಳಿಕ, ನಟ ಶಾರೂಖ್ ಖಾನ್ ಬೇಷರತ್ ಕ್ಷಮೆ ಯಾಚಿಸಿದ್ದಾರೆ.ಭಾರತೀಯ ಪ್ರೇಕ್ಷಕರು ಮನೋಜ್ ಕುಮಾರ್ ಅವರಿಗೆ ವಿಶೇಷ ಸ್ಥಾನ ಮಾನ ನೀಡಿದ್ದಾರೆ. ಈಗ ಗೌರವಕ್ಕೆ ಚ್ಯುತಿ ಬಂದಿದೆ ಎಂದು ಮನೋಜ್ ಕುಮಾರ್ ಹೇಳಿದ್ದರು. ಚಿತ್ರದಲ್ಲಿರುವ ಕೆಲವು ದೃಶ್ಯಗಳು ಮನೋಜ್ ಕುಮಾರ್ ಅವರಿಗೆ ತುಂಬಾ ನೋವನ್ನುಂಟುಮಾಡಿದ್ದು, ಇದರ ವಿರುದ್ಧ ಯಾವುದಾದರೂ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿದೆಯಾ ಎಂಬುದಾಗಿ ಕೇಳಿದ್ದಾರೆ ಎಂದು ಕುಮಾರ್ ಅವರ ವಕೀಲ ಮುಕೇಶ್ ವಾಶಿ ಹೇಳಿದ್ದಾರೆ.ಚಿತ್ರಮಂದಿರದ ಹೊರಗೆ ತಾನು ಪೊಲೀಸರಿಂದ ಒದೆ ತಿನ್ನುವ ದೃಶ್ಯವನ್ನು ಓಂ ಶಾಂತಿ ಓಂ ಚಿತ್ರವು ಪ್ರದರ್ಶಿಸಿದ್ದರಿಂದ ಈ ಹಿರಿಯನಟ ಕೋಪಗೊಂಡಿದ್ದಾರೆ.ಕುಮಾರ್ ಅವರ ನೋವಿನ ಭಾವನೆಗಳಿಗೆ ಪ್ರತಿಕ್ರಯಿಸಿದ ನಟ ಶಾರುಕ್, ಸುದ್ದಿಗೋಷ್ಠಿಯನ್ನು ಕರೆದು, ಚಿತ್ರದಲ್ಲಿ ನೀಡಿದ ದೃಶ್ಯಕ್ಕಾಗಿ ಹಿರಿಯ ನಟನಲ್ಲಿ ಬೇಷರತ್ತು ಕ್ಷಮೆ ಯಾಚಿಸಿದ್ದಾರೆ.
ನಾವು ಕೇವಲ ಅಣಕವನ್ನು ಮಾಡುತ್ತಿದ್ದೇವೆಯೇ ಹೊರತು ಕುಮಾರ್ ಅವರ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಓಂ ಶಾಂತಿ ಓಂ ನಿರ್ದೇಶಕಿ ಫರಾ ಖಾನ್ ಮತ್ತು ನಟ ಶಾರುಕ್ ಖಾನ್ ಹೇಳಿದ್ದಾರೆ.
ನಾನು ಮನೋಜ್ ಅವರಿಗೆ ಕರೆ ಮಾಡಿದಾಗ, ಅದೇನು ದೊಡ್ಡ ವಿಷಯವಲ್ಲ ಎಂಬುದಾಗಿ ಹೇಳಿದ್ದಾರೆ ಎಂದು ಶಾರುಕ್ ಹೇಳಿದ್ದಾರೆ.