Article Bollywood Gossips %e0%b2%b6%e0%b2%b9%e0%b2%9c%e0%b2%b9%e0%b2%be%e0%b2%a8%e0%b3%8d %e0%b2%aa%e0%b2%be%e0%b2%a4%e0%b3%8d%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf %e0%b2%ac%e0%b3%86%e0%b2%a8%e0%b3%8d %e0%b2%95%e0%b2%bf%e0%b2%a8%e0%b3%8d%e0%b2%b8%e0%b3%8d%e2%80%8c%e0%b2%b2%e0%b3%86 107092700022_1.htm

Daily Horoscope

Select Your Language

Notifications

webdunia
webdunia
webdunia
webdunia

ಶಹಜಹಾನ್ ಪಾತ್ರದಲ್ಲಿ ಬೆನ್ ಕಿನ್ಸ್‌ಲೆ

ಮಮ್ತಾಜ್
IFM
ಬಾಲಿವುಡ್ ತಾರೆ ಐಶ್ವರ್ಯ ರೈ ಅಮರ ಪ್ರೇಮದ ಕಥಾವಸ್ತುವಿನಲ್ಲಿ ಅಭಿನಯಿಸಲು ಹಿಂದೆಯೇ ಗೊತ್ತಾಗಿತ್ತು, ಭರತ್ ಬಾಲಾ ನಿರ್ಮಾಣದ ಚಿತ್ರದಲ್ಲಿ ಮಮ್ತಾಜ್ ಮಹಲ್ ಪಾತ್ಪದಲ್ಲಿ ಅವಳು ಆಯ್ಕೆಯಾಗಿದ್ದಳು. ಆದರೆ ಯೋಜನೆ ಮೂಲೆಗೆ ಸರಿದು ಮತ್ತೆ ಕೇಳಿಬರಲೇ ಇಲ್ಲ.

ಆದರೆ ಈಗ ಬೆನ್ ಕಿನ್ಸ್‌ಲೆ ಶಹಜಹಾನ್ ಪಾತ್ರದ ವಿರುದ್ಧ ಐಶ್ವರ್ಯ ರೈ ಅಮರ ಪ್ರೇಮದ ಸಂಕೇತವಾದ ಮಮ್ತಾಜಳ ಪಾತ್ರದಲ್ಲಿ ನಟಿಸಲಿದ್ದಾರೆ. ಆಗ್ರಾ ಮತ್ತು ಫತೇಪುರ್ ಸಿಕ್ರಿ ಸುತ್ತಮುತ್ತಲ ಹೊರಾಂಗಣ ಚಿತ್ರೀಕರಣದ ಈ ಚಿತ್ರವನ್ನು ಸರ್ ಬೆನ್ಸ್ ಕಂಪನಿಯ ಎಸ್‌ಬಿಕೆ ಕಂಪನಿ ನಿರ್ಮಿಸಲಿದೆ.

ಈ ವಿಷಯವನ್ನು ಲಂಡನ್‌ನಿಂದ ಖಚಿತಪಡಿಸಿದ ಬೆನ್ ಕಿ ಸ್ಲೆ " ನಾವು ಲಾಸ್ಟ್ ಲೀಜನ್ ಚಿತ್ರೀಕರಣದಲ್ಲಿ ತೊಡಗಿದ್ದಾಗ ಐಶ್ವರ್ಯಳಿಗೆ ಈ ವಿಷಯ ಪ್ರಸ್ತಾಪಿಸಿದೆ. ಅವಳು ಉದಾರ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದಳು. ಕಾರಾಗೃಹ ಕೋಣೆಯಲ್ಲಿ ಶಹಹಾನ್ ಅನೇಕ ವರ್ಷಗಳ ಕಾಲ ಒಂಟಿತನ ಅನುಭವಿಸುವುದು ಕೂಡ ರೋಮಾನ್ಸ್‌ ಚಿತ್ರದಲ್ಲಿ ಸೇರಿದೆ ಎಂದು ಬೆನ್ ಹೇಳಿದರು.

ಶಹಜಹಾನ್ ಪಾತ್ರ ನಿರ್ವಹಿಸಿದರೆ ಗಾಂಧಿಯಾಗಿ ಜನರು ನಿಮ್ಮನ್ನು ಮರೆಯಬಹುದೆಂಬ ಶಂಕೆಗೆ ಉತ್ತರಿಸಿದ ಅವರು, ಸ್ವಲ್ಪ ಕಾಲ ಅವರು ಮರೆಯಬಹುದು. ಆದರೆ ಗಾಂಧಿಯಾಗಿಯೇ ನೆನಪಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ ಅವರು, ಭಾರತ ಮತ್ತು ಅಲ್ಲಿನ ಜನರ ಜತೆ ಭಾವನಾತ್ಮಕ ಸಂಬಂಧ ಹೊಂದಿರುವುದಾಗಿ ತಿಳಿಸಿದರು.

Share this Story:

Follow Webdunia kannada