ಕಾಮಸೂತ್ರದ ಹೀರೋಯಿನ್ ಶರ್ಲಿನ್ ಚೋಪ್ರ ಟೈಮ್ ಸರಿಯಿಲ್ಲ ಪಾಪ. ಅದರಲ್ಲೂ ಆಕೆಯು ಕಾಮಸೂತ್ರ ತ್ರಿಡಿ ಚಿತ್ರದಲ್ಲಿ ನಟನೆ ಮಾಡಿದ ದಿನದಿಂದಲೂ ಆಕೆಯ ಲೈಫಲ್ಲಿ ತೊಂದರೆಗಳು ಕಾಣುತ್ತಿದೆ. ಅಂದಂಗೆ ಆರಂಭದಲ್ಲಿ ಈ ಚಿತ್ರಕ್ಕೆ ಸಂಬಂಧಿಸಿದಂತೆ ಆಕೆಯ ಚಿತ್ರಗಳನ್ನು ಆರಂಭದಲ್ಲಿ ಸೋಶಿಯಲ್ ನೆಟ್ ವರ್ಕ್ ನಲ್ಲಿ ಹರಿ ಬಿಟ್ಟಿದ್ದಳು . ಆ ರಹಸ್ಯವಾಗಿ ಶೂಟ್ ಮಾಡಿದ್ದ ಚಿತ್ರಗಳನ್ನು ಆಕೆ ಸೋಶಿಯಲ್ ಸೈಟ್ ನಲ್ಲಿ ಹಾಕಿದ್ದ ಕಾರಣ ಅವಳ ಮೇಲೆ ಸಿಟ್ಟಾಗಿದ್ದರು ನಿರ್ಮಾಪಕರು.
ಆಗ ಆಕೆಯನ್ನು ಚಿತ್ರದಿಂದಲೇ ಎತ್ತಂಗಡಿ ಮಾಡುವ ಆಶಯ ಹೊಂದಿದರಂತೆ ನಿರ್ಮಾಪಕರು. ಅಂತಿಮವಾಗಿ ಆಕೆಯ ಬಳಿ ರಾಜಿ ಆಗಿ ಚಿತ್ರದ ಕೆಲಸ ಪೂರೈಸಿದರು. ಈಗ ಆಗಿರುವ ಸಂಗತಿ ಏನೆಂದರೆ ಈ ಬಾರಿ ಸಿನಿಮಾಗೆ ಸಂಬಂಧಿಸಿದ ರಹಸ್ಯಗಳನ್ನು, ಫೋಟೋಗಳನ್ನು ಜಗತ್ತಿಗೆ ತೋರಿಸಿದ್ದಾಳೆ. ಇದರಿಂದ ಕುಪಿತಗೊಂಡ ಆಟ ಈ ವಿಷಯಕ್ಕೆ ಸಂಬಂಧಪಟ್ಟಂತೆ ಗಂಭೀರವಾಗಿ ನಿರ್ಧಾರ ಕೈಗೊಳ್ಳುವತ್ತ ಗಮನ ಹರಿಸಿದ್ದಾರೆ.
ಸದ್ಯದಲ್ಲೇ ಬಿಡುಗಡೆಯ ಭಾಗ್ಯ ಕಾಣುತ್ತಿರುವ ಕಾಮಸೂತ್ರ ತ್ರಿಡಿ ಚಿತ್ರದ ಪ್ರಮೋಶನ್ ಗಾಗಿ ಆಕೆಯನ್ನು ಬಳಸಿಕೊಳ್ಳುವ ಉದ್ದೇಶ ಹೊಂದಿರುವ ಆತ, ಜೊತೆಗೆ ಶರ್ಲಿನ್ ತನ್ನ ಅಧಿಕಾರವನ್ನು ದುರ್ವಿನಿಯೊಗ ಮಾಡಿಕೊಂಡಿದ್ದಾಳೆ ಎಂದು ಹೇಳಿ ಮುಂಬೈ ಪೊಲೀಸ್ ಗೆ ದೂರು ಸಲ್ಲಿಸಿದ್ದಾರೆ. ಇದರ ನಷ್ಟಕ್ಕೆ ಪರಿಹಾರವಾಗಿ ಆಕೆ ತನಗೆ ಇಪ್ಪತೈದು ಕೋಟಿ ರೂಪಾಯಿಗಳಷ್ಟು ನೀಡಬೇಕು ಎಂದು ಕೇಸ್ ಹಾಕಿದ್ದಾರಂತೆ . ಪಾಪ ಶರ್ಲಿನ್ ಇರಲಾರದೆ ತನ್ನ ಬೆತ್ತಲೆ ಮೈ ಮೇಲೆ ಇರುವೆ ಬಿಟ್ಟು ಕೊಂಡಿದ್ದಾಳೆ!