ಶಬಾನಾ ಅಜ್ಮಿ ಇನ್ನು ಡಾಕ್ಟರ್
Publish Date: Thu, 07 Jun 2007 (16:02 IST)
Updated Date: Thu, 07 Jun 2007 (16:01 IST)
ಬಾಲಿವುಡ್ ಅಭಿನೇತ್ರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಬಾನಾ ಆಜ್ಮಿಗೆ ಬ್ರಿಟನ್‌ನ ಲೀಡ್ಸ್ ವಿಶ್ವ ವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಲು ನಿರ್ಧರಿಸಿದೆ.ಜೂನ್ 9ರಂದು ನಡೆಯುವ ಸಮಾರಂಭದಲ್ಲಿ ಶಬಾನಾ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು. ಇದೊಂದು ಭಾವನಾತ್ಮಕ ಕ್ಷಣ, ಅದನ್ನು ವಿವರಿಸಲು , ವರ್ಣಿಸಲಾಗುತ್ತಿಲ್ಲ ಎಂಬುದಾಗಿ ಶಬಾನಾ ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.ಬಾಲಿವುಡ್ ತಾರೆ ಸಿನಿಮಾ ಪ್ರಶಸ್ತಿ ಪುರಸ್ಕಾರಗಳ ಮಳೆಯಲ್ಲಿ ನನೆಯುತ್ತಿರುವಂತೆಯೇ, ಪ್ರಸ್ತುತ ಡಾಕ್ಟರೇಟ್ ಇವರಿಗೇನೂ ಹೊಸತಲ್ಲ, ಕೆಲವರ್ಷಗಳ ಹಿಂದೆ ಜಾಧವ್‌ಪುರ ವಿಶ್ವ ವಿದ್ಯಾನಿಲಯ ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದೆ.ಇದರಂತೆಯೇ ಆನ್ ಆರ್ಬರ್ ವಿವಿಯಿಂದ ಮಾರ್ಟಿನ್ ಲೂಥರ್ ಕಿಂಗ್ ಪ್ರಶಸ್ತಿ,ಮಿಚಿಗನ್ ವಿವಿಯಿಂದ ಅತಿಥಿ ಪ್ರಾಧ್ಯಾಪಕಿ ಗೌರವಗಳು ಆಕೆಗೆ ಲಭಿಸಿದೆ.