Article Bollywood Gossips %e0%b2%b6%e0%b2%a4%e0%b3%8d%e0%b2%b0%e0%b3%81%e0%b2%97%e0%b2%b3%e0%b2%be%e0%b2%a6 %e0%b2%ac%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d%e0%b2%a1%e0%b2%bf%e0%b2%a8 %e0%b2%a8%e0%b2%9f%e0%b3%80%e0%b2%ae%e0%b2%a3%e0%b2%bf%e0%b2%af%e0%b2%b0 %e0%b2%95%e0%b2%a5%e0%b3%86 109042800087_1.htm

Daily Horoscope

Select Your Language

Notifications

webdunia
webdunia
webdunia
webdunia

ಶತ್ರುಗಳಾದ ಬಾಲಿವುಡ್ಡಿನ ನಟೀಮಣಿಯರ ಕಥೆ

ಪ್ರಿಯಾಂಕಾ
ಬಾಲಿವುಡ್ಡಿನ ನಟನಟೀಮಣಿಯರಲ್ಲೂ ಇಂಟರೆಸ್ಟಿಂಗ್ ಕಥೆಯಿದೆ. ಅಮರ ಪ್ರೇಮಿಗಳಂತಿದ್ದವರು ಕೆಲವೇ ತಿಂಗಳುಗಳಲ್ಲಿ ಹಾವು ಮುಂಗುಸಿಗಳಂತಾಗುವುದು ನಿತ್ಯವೂ ಕಾಣುವ ಸುದ್ದಿ. ಆದರೆ ನಟರ ನಡುವಿನ ಹಾಗೂ ನಟಿಯರ ನಡುವಿನ ಗೆಳೆತನವೂ ಶತ್ರುತ್ವದ ರೂಪಕ್ಕೆ ತಿರುಗುತ್ತಿರುವುದು ಬಾಲಿವುಡ್ಡಿನ ಕುತೂಹಲಕರ ವಿಷಯ. ಶಾರುಖ್- ಸಲ್ಮಾನ್, ಶಾರುಖ್- ಅಮೀರ್ ಹೀಗೆ ಹೆಸರು ನಟರ ಪೈಕಿಯಾದರೆ ಈಗ ನಟಿಯರ ಸಾಲಿನಲ್ಲಿ ಪ್ರಿಯಾಂಕಾ- ಕರೀನಾ, ರಾಣಿ ಮುಖರ್ಜಿ- ಪ್ರೀತಿ ಜಿಂಟಾ, ರಾಣಿ ಮುಖರ್ಜಿ- ಐಶ್ವರ್ಯಾ ರೈ ಹೆಸರುಗಳೂ ಸೇರುತ್ತವೆ!

IFM
ಪ್ರಿಯಾಂಕಾ ಛೋಪ್ರಾ- ಕರೀನಾ ಕಪೂರ್: ಒಂದಾನೊಂದು ಕಾಲದಲ್ಲಿ ಕರೀನಾ ಕಪೂರ್ ಹಾಗೂ ಪ್ರಿಯಾಂಕಾ ಛೋಪ್ರಾ ಗಳಸ್ಯ ಕಂಠಸ್ಯ ಎಂಬಂತಿದ್ದರು. ಅವರಿಬ್ಬರಿಗೆ ಎಷ್ಟು ಹೊತ್ತು ಜತೆಗಿದ್ದರೂ ಸಾಲುತ್ತಿರಲಿಲ್ಲ. ಏತ್ರಾಜ್, ಡಾನ್ ಚಿತ್ರದಲ್ಲಿ ಈ ಇಬ್ಬರೂ ಜತೆಯಾಗಿ ನಟಿಸಿದ್ದರು. ಆದರೆ ಪೆಪ್ಸಿ ಜಾಹಿರಾತಿನ ಸಂದರ್ಭ ಈ ಇಬ್ಬರ ಅಜರಾಮರ ಗೆಳೆತನಕ್ಕೆ ಬೆಂಕಿ ಬಿತ್ತು. ಅಲ್ಲದೆ ಏತ್ರಾಜ್ ಚಿತ್ರದ ಸಂದರ್ಭವೇ ಈ ಇಬ್ಬರು ನಟಿಯಲ್ಲಿ ಒಬ್ಬರಿಗೆ ಮೆಲ್ಲನೆ ಅಸೂಯೆಯೂ ಹುಟ್ಟಿತ್ತೋ ಏನೋ.. ಆದರೂ, ಗೆಳೆತನ ಚೆನ್ನಾಗೇ ಇತ್ತು. ಏತ್ರಾಜ್ ಚಿತ್ರದಲ್ಲಿ ಕರೀನಾಗೆ ಅಂತಹ ಪ್ರಶಂಸೆ ಸಿಕ್ಕಲಿಲ್ಲ. ಪ್ರಿಯಾಂಕಾ ನಟನೆ ಕರೀನಾಳ ನಟನೆಯನ್ನು ಮರೆಸುವಂತೆ ಇದ್ದ ಕಾರಣ ಸಹಜವಾಗಿಯೇ ಪ್ರಿಯಾಂಕಾಗೆ ಹೆಚ್ಚು ಹೆಸರು ಬಂತು. ನಂತರ ಡಾನ್ ಚಿತ್ರದಲ್ಲೂ ಕರೀನಾಳ ಏ ಮೇರಾ ದಿಲ್ ಪ್ಯಾರ್ ಕೀ ದೀವಾನಾ.. ಹಾಡು ಹಿಟ್ ಆದರೂ, ಅದೇ ಚಿತ್ರದ ಪ್ರಿಯಾಂಕಾಳ ಹಾಡು ಆಜ್ ಕೀ ರಾತ್.. ಹೋನಾ ಹಿ ತಾ..ದಷ್ಟು ಕೆಲಸ ಮಾಡಲಲ್ಲ. ಆಜ್ ಕೀ ನಲ್ಲಿ ಪ್ರಿಯಾಂಕಾ ಕರೀನಾಳಿಗಿಂತಲೂ ಸೆಕ್ಸೀಯಾಗಿ ಕಂಡಳು. ಇಷ್ಟು ಸಾಕಿತ್ತು ಗೆಳೆತನ ಮುರಿದು ಬೀಳಲು.

ಅಂದ ಹಾಗೆ ಈಗ ಈ ಇಬ್ಬರೂ ಒಬ್ಬರನ್ನು ಒಳಗೊಳಗೇ ಕಂಡರೆ ಮತ್ತೊಬ್ಬರಿಗೆ ಒಳಗೊಳಗೇ ಆಗದಿದ್ದರೂ ಸಾರ್ವಜನಿಕವಾಗಿ ತೋರಿಸವುದಿಲ್ಲ. ಆದರೆ, ಅವರು ಈಗ ಗೆಳತಿಯರೇ ಅಲ್ಲವೆಂದು ಮತ್ತೆ ಹೇಳಬೇಕಾಗಿಲ್ಲ. ಇನ್ನೂ ಇಂಟರೆಸ್ಟಿಂಗ್ ಅಂದ್ರೆ, ಕರೀನಾಳ ಮಾಜಿ ಪ್ರೇಮಿ ಶಾಹಿದ್ ಈಗ ಪ್ರಿಯಾಂಕಾ ಪ್ರೇಮಿ ಕೂಡಾ!

webdunia
IFM
ರಾಣಿ ಮುಖರ್ಜಿ- ಪ್ರೀತಿ ಝಿಂಟಾ: ತೆರೆಯ ಮೇಲೆ ಇಬ್ಬರು ನಟಿಯರು ಜತೆಯಾಗಿ ಮಿಂಚಿದ್ದರೆ ಅದಕ್ಕೆ ಏಕೈಕ ಉದಾಹರಣೆ ಪ್ರೀತಿ ಝಿಂಟಾ ಹಾಗೂ ರಾಣಿ ಮುಖರ್ಜಿ. ಒಂದು ಕಾಲದಲ್ಲಿ ಬಾಲಿವುಡ್ಡನ್ನೇ ಆಳಿದ ಈ ಇಬ್ಬರು ನಾಯಕಿಯರು ತೆರೆಯ ಮೇಲಷ್ಟೇ ಅಲ್ಲ. ತೆರೆಯ ಹಿಂದೆಯೂ ಪರಮ ಮಿತ್ರೆಯರು. ಹಲವು ಚಿತ್ರಗಳಲ್ಲಿ ಜತೆಯಾಗಿ ನಟಿಸಿ ಥೇಟ್ ಅವಳಿಗಳಂತೆಯೇ ಕಾಣುತ್ತಿದ್ದ ಈ ಜೋಡಿ ಕಭಿ ಅಲ್ವಿದ ನಾ ಕೆಹೆನಾ ಚಿತ್ರದ ಸಂದರ್ಭ ಗಳೆತನಕ್ಕೆ ಎಳ್ಳುನೀರು ಬಿಟ್ಟರು. ಅಲ್ವಿದ ನಾ ಕೆಹೆನಾ ಅನ್ನುತ್ತಲೇ ಅಲ್ವಿದಾ ಹೇಳಿದರು. ಹೇಗೋ ಚಿತ್ರವನ್ನು ಒಲ್ಲದ ಮನಸ್ಸಿನಲ್ಲೇ ಪೂರ್ಣಗೊಳಿಸಿದರು. ಮತ್ತೆ ಎಂದಿಗೂ ಜತೆಯಾಗಲಿಲ್ಲ. ಪ್ರೀತಿ ಆಮೇಲೆಯೂ ತನ್ನ- ರಾಣಿಯ ನಡುವಿನ ಫ್ರೆಂಡ್‌ಶಿಪ್ ಒಡೆಯಲು ಕಾರಣವನ್ನು ಎಲ್ಲೂ ಬಿಚ್ಚಲಿಲ್ಲ. ರಾಣಿಯೂ ಸುಮ್ಮನಾಗಿಬಿಟ್ಟಳು. ಆಮೇಲೆ ಈ ಇಬ್ಬರು ಎಂದಿಗೂ ಜತೆಯಾಗಿ ತೆರೆಯ ಹಿಂದೆ ಹಾಗೂ ಮುಂದೆ ಕಾಣಸಿಗಲಿಲ್ಲ. ಅವರಿಬ್ಬರು ಶತ್ರುಗಳಾಗಲು ಕಾರಣ ಇನ್ನೂ ನಿಗೂಢ!

webdunia
IFM
ಐಶ್ವರ್ಯ ರೈ- ರಾಣಿ ಮುಖರ್ಜಿ: ಐಶ್ವರ್ಯಾ ರೈಗೆ ನಟಿಯರ ಪೈಕಿ ಇದ್ದ ಉತ್ತಮ ಗೆಳತಿ ಎಂದರೆ ರಾಣಿ ಮುಖರ್ಜಿ. ಒಂದು ಕಾಲದಲ್ಲಿ ಈ ಇಬ್ಬರೂ ಉತ್ತಮ ಗೆಳತಿಯರು. ಆದರೆ ಇವರಿಬ್ಬರು ಜತೆಯಾಗಿ ನಟಿಸಿರಲಿಲ್ಲ. ರಾಣಿಗೆ ಐಶ್ ಜತೆಗೆ ಎಷ್ಟು ಸಲುಗೆಯಿತ್ತೆಂದರೆ, ರಾಣಿ ಮಾತ್ರ ಐಶ್‌ಳನ್ನು ಅಶುಮಾ ಅಂತ ಪ್ರೀತಿಯಿಂದ ಕರೆಯುತ್ತಿದ್ದಳು. ಅದು ಐಶ್‌ಗೂ ಸಲ್ಮಾನ್‌ಗೂ ಅಫೇರ್ ಇದ್ದ ಕಾಲ. ಚಲ್ತೇ ಚಲ್ತೇ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಐಸ್ ಹಾಗೂ ಶಾರುಖ್ ನಟನೆಯಲ್ಲಿ ಬ್ಯುಸಿಯಾಗಿದ್ದರು. ಎಲ್ಲಿಂದಲೋ ಬಂದ ಸಲ್ಮಾನ್ ಕೋಪದಿಂದ ಸೆಟ್ಟಿಗೆ ದಾಳಿಯಿಟ್ಟ. ತನ್ನ ಪ್ರೇಮಿ ಐಶ್ ಶಾರುಖ್ ಜತೆ ನಟಿಸಿದ್ದಕ್ಕೆ ಆತನಿಗೆ ಕೋಪ. ಈ ಗಲಾಟೆಯಲ್ಲಿ ಐಶ್ ಚಲ್ತೇ ಚಲ್ತೇ ತಂಡದಿಂದ ಹೊರಬಿದ್ದಳು. ನಂತರ ಐಶ್ ಜಾಗಕ್ಕೆ ಬಂದ ನಟಿ ಐಶ್ ಗೆಳತಿ ರಾಣಿ. ಆಗಲೇ ಈ ಇಬ್ಬರ ಗೆಳೆತನದ ಹೋಮಕ್ಕೆ ತುಪ್ಪವೆರೆದಂತಾಯಿತು. ಗೆಳೆತನ ಹೊತ್ತಿ ಉರಿಯಿತು.

ಇಷ್ಟೇ ಅಲ್ಲ, ರಾಣಿ ಬಗೆಗಿನ ಐಶ್ ಕೋಪಕ್ಕೆ ಇನ್ನೂ ಕಾರಣವಿದೆ. ನಂತರ ಸ್ವಲ್ಪದಿನ ಐಶ್ ವಿವೇಕ್ ಒಬೆರಾಯ್ ಜತೆಗೆ ಆಟವಾಡಿ ನಂತರ ಬಚ್ಚನ್ ಬಹೂ ಆದಳು. ಐಶ್ ಗಂಡ ಅಭಿಷೇಕ್ ಬಚ್ಚನ್ ಬಂಟಿ ಔರ್ ಬಬ್ಲಿ, ಯುವ ಚಿತ್ರಗಳಲ್ಲಿ ರಾಣಿ ಜತೆಗೆ ಸಲುಗೆಯಿಂದಿದ್ದ. ಇದನ್ನು ನೋಡಿ ಐಶ್ ಕಣ್ಣು ಕೆಂಪಗಾಗಿತ್ತಷ್ಟೇ ಅಲ್ಲ, ರಾಣಿ ಸಹವಾಸದಿಂದ ದೂರವಿದ್ದರೆ ಸರಿ. ಇಲ್ಲವಾದರೆ... ಅಂತ ಎಚ್ಚರಿಕೆಯನ್ನೂ ನೀಡಿದ್ದಾಳೆ ಐಶ್. ಅಭಿಷೇಕ್ ಸುಮ್ಮನಾಗಿದ್ದಾನೆ.

ಇವೆಲ್ಲ ಅಜರಾಮರ ಗೆಳತಿಯರು ಶತ್ರುಗಳಾದ ಕಥೆ. ಬಾಲಿವುಡ್ಡಿನ ಅಂಗಳದಲ್ಲಿ ಇನ್ನೂ ಇಂಥ ಅನೇಕ ದಂತಕಥೆಗಳು ಮುರಕ್ಕೊಂಡು ಬಿದ್ದಿವೆ. ಇನ್ನೊಮ್ಮೆ ಹೇಳೋಣ ಬಿಡಿ.
webdunia
IFM

Share this Story:

Follow Webdunia kannada