Article Bollywood Gossips %e0%b2%b5%e0%b3%87%e0%b2%b6%e0%b3%8d%e0%b2%af%e0%b3%86%e0%b2%af%e0%b2%be%e0%b2%97%e0%b2%b2%e0%b2%bf%e0%b2%b0%e0%b3%81%e0%b2%b5 %e0%b2%b0%e0%b2%be%e0%b2%a3%e0%b2%bf%e0%b2%ae%e0%b3%81%e0%b2%96%e0%b2%b0%e0%b3%8d%e0%b2%9c%e0%b2%bf 107062800012_1.htm

Daily Horoscope

Select Your Language

Notifications

webdunia
webdunia
webdunia
webdunia

ವೇಶ್ಯೆಯಾಗಲಿರುವ ರಾಣಿಮುಖರ್ಜಿ

'ಲಗಾ ಚುನಾರಿ ಮೆ ದಾಗ್'
ಬಾಲಿವುಡ್‌ನ ಮಿನುಗುಕಂಗಳ ಹಸನ್ಮುಖಿ ಚೆಲುವೆ ರಾಣಿ ಮುಖರ್ಜಿ ಇದೀಗ ಹೊಸತೊಂದು ಸಾಹಸಕ್ಕೆ ಕೈಹಾಕಲಿದ್ದಾರೆ. ಮುಂದಿನ ಚಿತ್ರಗಳಲ್ಲಿ ಆಕೆ ವೇಶ್ಯೆಯಾಗಲಿದ್ದಾಳೆ.

ತಾನು ತೊಟ್ಟ ವೇಷಗಳಿಗೆಲ್ಲಾ ನ್ಯಾಯವೊದಗಿಸಿ ಪ್ರೇಕ್ಷಕರಿಂದ ಸೈ ಎನಿಸಿರುವ ರಾಣಿ ಸಾಮಾಜಿಕವಾಗಿ ತುಳಿತಕ್ಕೊಳಗಾಗಿರುವ ಲೈಂಗಿಕ ಕಾರ್ಯಕರ್ತೆಯರ ವೇಷ ತೊಡಲಿದ್ದಾಳೆ. ಪಾತ್ರಕ್ಕೆ ಜೀವತುಂಬಲಿದ್ದಾಳೆ.

ರಾಣಿಯ ಮುಂದಿನ ಎರಡು ಚಿತ್ರಗಳಲ್ಲಿ ಆಕೆಗೆ ಇದೇ ಪಾತ್ರ, ವ್ಯತ್ಯಸ್ತ ರೂಪ. ಅಂತಹ ಸಿನಿಮಾಗಳಲ್ಲೊಂದು 'ಲಗಾ ಚುನಾರಿ ಮೆ ದಾಗ್'. ಇನ್ನೊಂದು 'ಸಾವರಿಯಾ'.

ಮಧ್ಯಮ ವರ್ಗದ ಹುಡುಗಿಯೊಬ್ಬಳು ಲೈಂಗಿಕ ಕಾರ್ಯಕರ್ತೆಯಾಗುವ ಚಿತ್ರಣ 'ಲಗಾ ಚುನಾರಿ ಮೆ ದಾಗ್' ಚಿತ್ರದಲ್ಲಿರುತ್ತದೆ.

ಶ್‌ರಾಜ್ ಅವರ 'ಲಗಾ ಚುನಾರಿ ಮೆ ದಾಗ್' ರಾಣಿಯಲ್ಲಿರುವ ಅಭಿನೇತ್ರಿಯನ್ನು ಒರೆಗೆ ಹಚ್ಚಲಿದೆ. ಚಿತ್ರವನ್ನು ಪ್ರದೀಪ್ ಸರ್ಕಾರ್ ನಿರ್ದೇಶಿಸುತ್ತಿದ್ದಾರೆ. ಸಾವರಿಯಾ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ಮಿಸುತ್ತಿದ್ದು, ರಾಣಿ ಅದರಲ್ಲಿ ಗುಲಾಬ್ ಹೆಸರಲ್ಲಿ ಕಾಣಿಸಿಕೊಳ್ಳಲಿದ್ದಾಳೆ.

ಕಂಕಣ ಭಾಗ್ಯದ ಹೊಸ್ತಿಲಲ್ಲಿರುವ ರಾಣಿ ಮುಖರ್ಜಿ ಇಂತಹ ಪಾತ್ರಗಳಿಗೆ ಒಪ್ಪಿರುವುದು ವಿಶೇಷ. ಆದರೆ ಓರ್ವ ಅಭಿನೇತ್ರಿ ಇಂತಹ ಕ್ಲಿಷ್ಟ ಪಾತ್ರಗಳನ್ನು ಸಹಜವಾಗಿಯೇ ಅಭಿನಯಿಸಿ ವೀಕ್ಷಕರಲ್ಲಿ ಅಚ್ಚರಿಮೂಡಿಸುವುದಂತೂ ನಿಜ.

Share this Story:

Follow Webdunia kannada