'ವೆಲ್‌ಕಂ' 2007ರ ಕೊನೆಯ ಹಾಸ್ಯಚಿತ್ರ:ಅಕ್ಷಯ್
ನಮಸ್ತೇ ಲಂಡನ್, ಹೇ ಬೇಬಿ, ಭೂಲ್ ಭುಲೈಯಾ ಮುಂತಾದ ಚಿತ್ರಗಳಲ್ಲಿ ಯಶಸ್ಸನ್ನು ಗಳಿಸಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್, ಮುಂಬರುವ 'ವೆಲ್‌ಕಂ' ಈ ವರ್ಷದ ತನ್ನ ಕೊನೆಯ ಹಾಸ್ಯ ಚಿತ್ರವಾಗಿದೆ ಎಂದು ಹೇಳಿದ್ದಾರೆ.ಅನೀಸ್ ಬಾಜ್ಮಿ ನಿರ್ದೇಶಿಸುತ್ತಿರುವ ಬಹುತಾರಾಗಣದ 'ವೆಲ್‌ಕಂ' ಹಾಸ್ಯಚಿತ್ರವು ಈದ್ ಮತ್ತು ಕ್ರಿಸ್‌ಮಸ್ ಪೂರ್ವಭಾವಿಯಾಗಿ ಡಿಸೆಂಬರ್ 20ರಂದು ಬಿಡುಗಡೆಗೊಳ್ಳಲಿದೆ.ಪರೇಶ್ ರಾವಲ್, ಅನಿಲ್ ಕಪೂರ್, ಫಿರೋಜ್ ಖಾನ್, ನಾನಾ ಪಾಟೇಕರ್ ಮತ್ತು ಮಲ್ಲಿಕಾ ಶೆರಾವತ್ ಮುಂತಾದ ಸಮಗ್ರ ತಾರಾಗಣದ ಕೂಡುವಿಕೆಯ ಜೊತೆಗೆ ಅಕ್ಷಯ್ ಮತ್ತು ಕತ್ರೀನಾ ಮೂರನೇ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ.ಈ ಮೊದಲು ನಾನು ಅಭಿನಯವು ಅಭಿನ್ನವಾಗಿತ್ತು ಎಂದು ಎಲ್ಲರೂ ಹೇಳಿದ್ದರು, ಯಶಸ್ಸು ಪಡೆದ ಹಲವು ಹಾಸ್ಯ ಚಿತ್ರಗಳ ನಂತರ ನಾನು ಹಾಸ್ಯದೊಂದಿಗೆ ಅಭಿನ್ನನಾಗಿದ್ದೇನೆ ಎಂದು ಪ್ರಸಕ್ತ 'ಸಿಂಗ್ ಈಸ್ ಕಿಂಗ್' ಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ ಅಕ್ಷಯ್ ಹೇಳಿದ್ದಾರೆ. ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ನನ್ನ ಚಿತ್ರಗಳ ನಿರ್ವಹಣೆಯು ನನಗೆ ತೃಪ್ತಿಯನ್ನು ನೀಡಿದೆ. ವೆಲ್‌ಕಂ ನನ್ನ 2007ರ ಕೊನೆಯ ಹಾಸ್ಯ ಚಿತ್ರವಾಗಿದ್ದು, ಹಬ್ಬದ ಸಮಯದಲ್ಲಿ ನನ್ನ ಅಭಿಮಾನಿಗಳು ಈ ಚಿತ್ರವನ್ನು ನೋಡಿ ಸಂತೋಷಪಡುತ್ತಾರೆ ಎಂದು ಅಕ್ಷಯ್ ಹೇಳಿದ್ದಾರೆ.