Article Bollywood Gossips %e0%b2%b5%e0%b3%86%e0%b2%b2%e0%b3%8d%e0%b2%95%e0%b2%ae%e0%b3%8d %e0%b2%ac%e0%b3%8d%e0%b2%af%e0%b2%be%e0%b2%95%e0%b3%8d%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%ac%e0%b2%bf%e0%b2%97%e0%b3%8d%e0%b2%ac%e0%b2%bf %e0%b2%85%e0%b2%ae%e0%b2%bf%e0%b2%a4%e0%b2%be%e0%b2%ad%e0%b3%8d 113083000033_1.htm

Daily Horoscope

Select Your Language

Notifications

webdunia
webdunia
webdunia
webdunia

ವೆಲ್ಕಮ್ ಬ್ಯಾಕ್ನಲ್ಲಿ ಬಿಗ್ಬಿ ಅಮಿತಾಭ್?

ವೆಲ್ಕಮ್ ಬ್ಯಾಕ್
PR
ಬಿಗ್ಬಿ ಅಮಿತಾಭ್ ಮತ್ತೆ ಬಣ್ಣ ಹಚ್ಚುವುದು ಬಹುತೇಕ ಖಚಿತವಾಗಿದೆ. ವೆಲ್ಕಮ್ ಬ್ಯಾಕ್ ಚಿತ್ರದಲ್ಲಿ ಫಿರೋಜ್ ಖಾನ್ ಪಾತ್ರದ ಜಾಗಕ್ಕೆ ಅಮಿತಾಭ್ ಬರುವುದು ಬಹುತೇಕ ಪಕ್ಕಾ ಆಗಿದೆ. ವೆಲ್ಕಮ್ ಚಿತ್ರದ ಮೊದಲ ಭಾಗದಲ್ಲಿ ಫಿರೋಜ್ ಖಾನ್ ಪ್ರಮುಖ ಪಾತ್ರದಲ್ಲಿ ಅಂದರೆ ಡಾನ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಈ ಪಾತ್ರಕ್ಕಾಗಿ ಅಮಿತಾಭ್ ಬಚ್ಚನ್ ಅವರನ್ನು ಕೇಳಿಕೊಂಡಿದ್ದು, ಪಾತ್ರದ ಬಗ್ಗೆ ಅವರಿನ್ನೂ ಕನ್ಫರ್ಮ್ ಮಾಡಿಲ್ಲ ಎಂದು ತಿಳಿದುಬಂದಿದೆ.

ಹಳೆಯ ವೆಲ್ಕಮ್ ಚಿತ್ರದಲ್ಲಿ ಫಿರೋಜ್ ಖಾನ್ ಪಾತ್ರದಿಂದ ಚಿತ್ರದ ತೂಕ ಹೆಚ್ಚಾಗಿತ್ತು. ಹಾಗೂ ಅವರ ಅಭಿನಯದಿಂದ ಚಿತ್ರಕ್ಕೆ ಡಿಫರೆಂಟ್ ಲುಕ್ ಬಂದಿತ್ತು. ಈ ಚಿತ್ರದ ಸೀಕ್ವೆಲ್ ಪಾತ್ರ ಸಂಪೂರ್ಣ ವಿಭಿನ್ನವಾಗಿದೆ. ಆದರೆ ಇದಕ್ಕಿನ್ನೂ ಬಿಗ್ಬಿ ಗ್ರೀನ್ ಸಿಗ್ನಲ್ ತೋರಿಲ್ಲ. ಒಪ್ಪಿಗೆ ನೀಡಿದ ಬಳಿಕವೇ ಕನ್ಫಮರ್್ ಮಾಡುತ್ತೇವೆ ಎಂದಿದ್ದಾರೆ ಚಿತ್ರದ ನಿರ್ದೇಶಕರು. ನಾನಾ ಪಾಟೇಕರ್, ಅನಿಲ್ ಕಪೂರ್ ಹಾಗೂ ಪರೇಶ್ ರಾವಲ್ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಜಾನ್ ಅಬ್ರಾಹಂ ಮತ್ತು ಶ್ರುತಿ ಹಾಸನ್ ಕೂಡಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರದಲ್ಲಿ ಪ್ರತಿಯೊಂದು ಪಾತ್ರಗಳು ಮುಖ್ಯವಾಗಿವೆ. ಹಳೆಯ ವೆಲ್ಕಮ್ ಚಿತ್ರದಲ್ಲಿನ ಸ್ಟಾರ್ಕಾಸ್ಟ್ ಇಲ್ಲೂ ಮುಂದುವರೆಯಲಿದೆ. ಅವರೆಲ್ಲರೂ ಈ ಚಿತ್ರದಲ್ಲೂ ನಟಿಸುವ ಬಗ್ಗೆ ಖುಷಿಯಿಂದಿದ್ದಾರೆ ಎಂದಿದ್ದಾರೆ ನಿರ್ದೇಶಕ ಅನೀಸ್ ಬಾಜ್ಮಿ.

Share this Story:

Follow Webdunia kannada