Article Bollywood Gossips %e0%b2%b5%e0%b3%86%e0%b2%b2%e0%b3%86%e0%b2%82%e0%b2%9f%e0%b3%88%e0%b2%a8%e0%b3%8d%e0%b2%b8%e0%b3%8d %e0%b2%a1%e0%b3%87 %e0%b2%b5%e0%b2%bf%e0%b2%b0%e0%b3%8b%e0%b2%a7%e0%b2%bf %e0%b2%a8%e0%b3%87%e0%b2%b9%e0%b2%be %e0%b2%a6%e0%b3%81%e0%b2%aa%e0%b2%bf%e0%b2%af%e0%b2%be 109020200086_1.htm

Daily Horoscope

Select Your Language

Notifications

webdunia
webdunia
webdunia
webdunia

ವೆಲೆಂಟೈನ್ಸ್ ಡೇ ವಿರೋಧಿ ನೇಹಾ ದುಪಿಯಾ

ನೇಹಾ ದುಪಿಯಾ
ಎಲ್ಲರೂ ಪೇಮಿಗಳ ದಿನವೆಂದು ವೆಲೆಂಟೈನ್ಸ್ ಡೇಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ ಇದೇನಪ್ಪ ನೇಹಾ ದುಪಿಯಾ ಎಂಬ ತುಂಡು ಬಟ್ಟೆಗಳ ಚೆಲುವೆ ಹೀಗಂತಾಳೆ ಎನ್ನುವುದು ಆಶ್ಚರ್ಯವೇ. ಆದರೆ ನಿಜ. ಆಕೆಗೆ ವೆಲೆಂಟೈನ್ಸ್ ಡೇ ಅಂದರೆ ಇಷ್ಟವಿಲ್ಲವಂತೆ. ಅದಕ್ಕೂ ಮಿಗಿಲಾಗಿ ದ್ವೇಷಿಸುತ್ತಾಳಂತೆ..!

ಸರಿ, ಯಾಕೆ ನಿಮ‌್ಗೂ ವೆಲೆಂಟೈನ್ಸ್ ಡೇಗೂ ಕೂಡಿ ಬರ್ತಿಲ್ವಾ ಅಂತ ಕೇಳಿದ್ರೆ, "ನನ್ನ ಪ್ರಕಾರ ಇದೊಂದು ಕೆಟ್ಟ ಕಲ್ಪನೆ. ಅದಕ್ಕೊಂದು ದಿನ ಬೇಕೆ. ಅದೊಂದು ಹಬ್ಬವಾ? ಅದರ ಅಗತ್ಯವೇನಿದೆ?" ಅಂತ ಪೆಕರು ಪೆಕರಾಗಿ ಪ್ರಶ್ನಿಸಿದ್ದಾಳೆ.

"ವೆಲೆಂಟೈನ್ಸ್ ಡೇ ಅಂದರೆ ಯಾರಿಗೂ ಗೊತ್ತಿಲ್ಲ. ವೆಲೆಂಟೈನ್ ಎನ್ನುವಾತ ಮನುಷ್ಯನಾ, ದೇವರಾ ಎಂಬುದನ್ನು ತಿಳಿಯದವರು ಸಹ ಕಣ್ಮುಚ್ಚಿ ಸಂಭ್ರಮಿಸುತ್ತಾರೆ. ನಾನಂತೂ ಹಾಗೆ ಮಾಡಲ್ಲಪ್ಪಾ. ಶಾಲಾ ದಿನಗಳಲ್ಲಿಯೇ ನಾನು ವಿರೋಧಿಸುತ್ತಿದ್ದೆ. ಆಗೆಲ್ಲ ನನ್ನ ಗೆಳತಿಯರಿಗೆ ಚಾಕೊಲೇಟ್‌ಗಳು ಸಿಗುತ್ತಿದ್ದವು. ಆದರೆ ನಾನು ಸ್ವೀಕರಿಸುತ್ತಿರಲಿಲ್ಲ" ಅಂದಿದ್ದಾಳೆ.

ಹಾಗಾಗಿ ಫೆಬ್ರವರಿ 14ರಂದು ನನ್ನ ಸುತ್ತ ಗುಲಾಬಿ, ಚಾಕೊಲೇಟ್ ಹಿಡಿದುಕೊಂಡು ಯಾರೂ ಓಡಾಡಬೇಡಿ ಅಂತ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾಳೆ. ಆದರೆ ಈಕೆ ಪ್ರೀತಿಯ ವಿರೋಧಿಯಲ್ಲ. ಸ್ಕ್ವಾಷ್ ಆಟಗಾರ ಋತ್ವಿಕ್ ಭಟ್ಟಾಚಾರ್ಯ ಜತೆ ಡೇಟಿಂಗ್ ಮಾಡುತ್ತಿದ್ದಾಳೆ. ಮನೆಯವರಿಗೂ ಗೊತ್ತಂತೆ. ನಿಧಾನಕ್ಕೆ ಮದುವೆಯಾಗುವ ಯೋಚನೆಯಿದೆ ಅಂತಾಳೆ. ಅಂದ ಹಾಗೆ ಸದ್ಯ ಮದುವೆಯನ್ನು ವಿರೋಧಿಸುತ್ತಿಲ್ಲವಂತೆ..!
IFM

Share this Story:

Follow Webdunia kannada