ತನ್ನ ಭಾವಿ ಪತಿ ತನಗೆ ಉಂಗುರ ತೊಡಿಸುತ್ತಿರುವ ಫೋಟೋಗಳನ್ನು ವೀಣಾ ಮಲ್ಲಿಕ್ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದಾಳೆ. ಇಷ್ಟು ದಿನಗಳ ಕಾಲ ಆಕೆಯ ಮದುವೆಯ ಬಗೆಗೆ ಇದ್ದ ಊಹಾಪೋಹಗಳಿಗೆ ಒಂದು ಅರ್ಥ ಸಿಕ್ಕಿದೆ. ಪಾಕಿಸ್ತಾನ್ ಮಾಡೆಲ್, ನಟಿ ವೀಣಾ ಮಲ್ಲಿಕ್ ಎಂಗೇಜ್ ಆಗಿರುವ ಸುದ್ದಿ ಯನ್ನು ಈ ಫೋಟೋ ಹಾಕುವುದರ ಮೂಲಕ ಈ ಸುದ್ದಿ ನಿಜ ಎಂಬುದನ್ನು ಸ್ಪಷ್ಟ ಪಡಿಸಿದ್ದಾಳೆ ಆಕೆ.
ಅಷ್ಟೇ ಅಲ್ಲದೆ ಮೈ ಫ್ರೆಂಡ್ ಮೈ ಸೋಲ್ ಮೇಟ್, ಮೈ ಪಾರ್ಟ್ನರ್ ಎಂದು ಟ್ವೀಟ್ ಮಾಡಿದ್ದಾಳೆ ವೀಣಾ. ದುಬೈ ಗೆ ಸೇರಿರುವ ಬ್ಯುಸಿನೆಸ್ ಮ್ಯಾನ್ ಜೊತೆ ಆಕೆ ನಿಖಾ ಆದಳೆಂಬ ಸಂಗತಿ ಸಹ ಸ್ಪಷ್ಟವಾಗಿದೆ. ಇವರಿಬ್ಬರು ದುಬೈ ಗೆ ಸೇರಿದ ಎಮಿರೇಟ್ಸ್ ಕೋರ್ಟ್ ನಲ್ಲಿ ಮದುವೆ ಆದ ಬಗ್ಗೆ ವರದಿ. ತನ್ನ ತಂದೆಯ ಸ್ನೇಹಿತನ ಮಗನೆ ಅಂತೆ ವೀಣಾಳ ಪತಿ. ಸದ್ಯದಲ್ಲಿ ಎಲ್ಲರಿಗೂ ಮದುವೆ ರಿಸಪ್ಶನ್ ಏರ್ಪಡಿಸುತ್ತಿದ್ದಾರಂತೆ. ಇಷ್ಟೆಲ್ಲಾ ಸುದ್ದಿಗಳು ಹರಡಿದ್ದರೂ ವೀಣಾ ಮಲ್ಲಿಕ್ ಮಾತ್ರ ಯಾವ ವಿಷದ ಬಗ್ಗೆಯೂ ಮೀದಿಯಾಗಲ ಮುಂದೆ ಹೇಳಿಲ್ಲ.. ಆಶ್ಚರ್ಯ ಆದರೂ ಸತ್ಯ!!