ವಿಸ್ತರಣೆಯಾದ ನಟ ಸಂಜಯ್ ದತ್ ರ ಪೆರೋಲ್
ಮುಂಬೈ , ಮಂಗಳವಾರ, 18 ಫೆಬ್ರವರಿ 2014 (18:23 IST)
ಬಾಲಿವುಡ್ ನಟ ಸಂಜಯ್ ದತ್ ತನ್ನ ಪತ್ನಿ ಮಾನ್ಯತಾ ದತ್ ಅವರ ಅನಾರೋಗ್ಯದ ಹಿನ್ನಲೆಯಲ್ಲಿ ಪೆರೋಲ್ ಅವಧಿಯನ್ನು ವಿಸ್ತರಿಸುವಂತೆ ಮಾಡಿದ್ದ ಮನವಿಗೆ ನ್ಯಾಯಾಲಯ ಅಸ್ತು ಎಂದಿದೆ. ಮೂರನೇ ಬಾರಿಗೆ ದತ್ ಪೆರೋಲ್ ಪಡೆದುಕೊಂಡಿದ್ದು, ಮಾರ್ಚ್ 21 ರವರೆಗೆ ಪೆರೋಲ್ ಅವಧಿಯನ್ನು ಹೆಚ್ಚಿಸಲಾಗಿದೆ.ಮುಂಬೈ ಸರಣಿ ಬಾಂಬ್ ಸ್ಫೋಟ-1993 ಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಒಳಗಾಗಿರುವ ಸಂಜಯ್ ದತ್ ಅವರು ತಮ್ಮ ಪೆರೋಲ್ ಅವಧಿ ವಿಸ್ತರಿಸುವಂತೆ ಅರ್ಜಿ ಸಲ್ಲಿಸಿದ್ದರು.ಕಳೆದ ಡಿಸೆಂಬರ್‌ನಲ್ಲಿ 1 ತಿಂಗಳ ಕಾಲ ಪೆರೋಲ್ ಮೇಲೆ ಜೈಲಿನ ಹೊರಗಿದ್ದ ಸಂಜಯ್ ಮನವಿ ಮೇರೆಗೆ ಫೆಬ್ರವರಿ 21ರವರೆಗೆ 2ನೇ ಬಾರಿ ಪೆರೋಲ್ ನ್ನು ವಿಸ್ತರಿಸಲಾಗಿತ್ತು. ಆದರೆ ಈಗ ಮತ್ತೆ ಮಾರ್ಚ್ 21 ಸಂಜಯ್‌ಗೆ ಪೆರೋಲ್ ವಿಸ್ತರಣೆ ಮಾಡಲಾಗಿದೆ. ಇದು ಈ ವರ್ಷ ಆತನಿಗೆ ಸಿಗುತ್ತಿರುವ ಕೊನೆಯ ರಜೆ, ಇನ್ನು 1 ವರ್ಷಗಳವರೆಗೆ ನಟನಿಗೆ ಯಾವ ರಜೆಯೂ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.