Publish Date: Tue, 26 Jun 2007 (09:58 IST)Updated Date: Tue, 26 Jun 2007 (09:58 IST)
IFM
ಜುಲೈ 7ರಿಂದು ಲಂಡನ್‌ನ ಬೆನ್ಫಿಕಾ ಕ್ರೀಡಾಂಗಣದಲ್ಲಿ ಜರುಗಲಿರುವ ಅತಿ ನಿರೀಕ್ಷೆಯ ಆಧುನಿಕ ಜಗತ್ತಿನ'ಸಪ್ತ ವಿಸ್ಮಯ'ಗಳ ಆಯ್ಕೆ ಶೊದಲ್ಲಿ ಬಾಲಿವುಡ್ ಬೆಡಗಿ ಬಿಪಾಶಾ ಆತಿಥೇಯರಾಗಿದ್ದಾರೆ.
ಆಸ್ಕರ್ ವಿಜೇತರಾದ ಬೆನ್ ಕಿಂಗ್ಸ್ಲೇ ಹಾಗೂ ಹಿಲೆರಿ ಸ್ವಾಂಕ್ ಇವರ ಸಂಗಡ ಬಿಪಾಶಾ ವೇದಿಕೆ ಹಂಚಿಕೊಳ್ಳಲಿರುವರು.
ಪ್ರಸ್ತುತ ವೇದಿಕೆಯಲ್ಲಿ ಸಪ್ತವಿಸ್ಮಯಗಳನ್ನು ಘೋಷಿಸಲಾಗುವುದು. ಇವುಗಳ ಆಯ್ಕೆಗಾಗಿ ಜಾಗತಿಕವಾಗಿ ಎಸ್ಎಂಎಸ್,ಆನ್ ಲೈನ್ ಮತದಾನ ಕಾರ್ಯಕ್ರಮ ಈಗ ಪ್ರಗತಿಯಲಲಿದೆ.
ಪ್ರಸ್ತುತ ಆನ್‌ಲೈನ್ ಮತದಾನದಲ್ಲಿ ಆಯ್ಕೆಯಾದ ವಿಸ್ಮಯ ಗಳ ಘೋಷಣೆ ಮಾಡುವ ಮೂರು ಮಂದಿಯಲ್ಲಿ ಬಿಪಾಶಾ ಕೂಡ ಇರುವುದು ವಿಶೇಷ. ವಿಶ್ವ ವಿಸ್ಮಯಗಳನ್ನು ಆನ್‌ಲೈನ್ ಅಭಿಪ್ರಾಯ ಸಂಗ್ರಹದಿಂದ ಆರಿಸುವ ವಿಧಾನ ಇದೇ ಪ್ರಥಮ.
ಬಿಪಾಶಾ ಹೇಳುವಂತೆ ಈ ಐತಿಹಾಸಿಕ ಘಟನೆಯಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿರುವುದು ತನಗೆ ಲಭಿಸಿದ ಗೌರವ ಎಂದಿದ್ದಾರಲ್ಲದೆ, ಆಕೆಯ ದೃಷ್ಟಿದೋಷಕ್ಕಾಗಿ ಕಾಂಟಾಕ್ಟ್ ಲೆನ್ಸ್‌ಗಳನ್ನು ಕಣ್ಣಿಗೆ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ವಿಸ್ಮಯಗಳಲ್ಲಿ ಭಾರತದ ತಾಜ್‌ಮಹಲ್ ಕೂಡ ಸ್ಪರ್ಧೆಯಲ್ಲಿದ್ದು, ಇದು ಕೂಡ ಆಯ್ಕೆಯಾಗಬಹುದು ಎಂಬ ನಿರೀಕ್ಷೆ ಬಿಪಾಶಾ ಸೇರಿದಂತೆ ಎಲ್ಲರಲ್ಲಿದೆ.