ವಿಶ್ವರೂಪಂ-2 ಮೊದಲ ಪ್ರತಿ ಸಿದ್ಧ
Publish Date: Tue, 09 Jul 2013 (13:18 IST)
Updated Date: Tue, 09 Jul 2013 (13:17 IST)
ವಿಶ್ವರೂಪಂ-2 ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅದಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳ ಕುತೂಹಲವನ್ನು ಅದು ಇನ್ನೂ ಹೆಚ್ಚು ಮಾಡಿದೆ.ಕಮಲಹಾಸನ್ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯೊಂದಿಗೆ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶ್ವರೂಪಂ ಮೊದಲ ಚಿತ್ರ ಮೇಕಿಂಗ್ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಅದರೊಂದಿಗೆ ಸಾಕಷ್ಟು ವಿವಾದಗಳನ್ನೂ ಹುಟ್ಟಿ ಹಾಕಿತ್ತು. ಬಿಡುಗಡೆಯಾದ ನಾಲ್ಕೇ ದಿನದಲ್ಲಿ 120 ಕೋಟಿ ಗಳಿಸಿ ನಿರ್ಮಿಸಿದ ಪೈಸಾ ವಸೂಲು ಮಾಡಿತ್ತು.ಚಿತ್ರಕ್ಕಾಗಿ ಅವರು ಮಾಡಿದ ಖರ್ಚು ಸುಮಾರು 96 ಕೋಟಿ ರೂಪಾಯಿ. ತಮ್ಮ ಮನೆಯನ್ನೂ ಅಡವಿಟ್ಟು ಅವರು ವಿಶ್ವರೂಪಂ ಚಿತ್ರ ತಯಾರಿಸಿದ್ದು ಬಹುತೇಕರಿಗೆ ಗೊತ್ತಿರುವ ಸಂಗತಿಯೇ. ಈ ಬಾರಿ ಕಮಲ್ಹಾಸನ್ ಚಿತ್ರ ನಿರ್ದೇಶಿಸಿದರೆ ನಿರ್ಮಾಣದ ಜವಾಬ್ದಾರಿ ಆಸ್ಕರ್ ವಿ.ರವಿಚಂದ್ರನ್ ಅವರದ್ದು. ಇಲ್ಲೂ ಭಯೋತ್ಪಾದನೆ, ಉಗ್ರತ್ವವೇ ಕಥಾವಸ್ತು. ತಾಯಿ ಮಕ್ಕಳ ಅನುಬಂಧ, ಯುದ್ಧದ ಸನ್ನಿವೇಶಗಳೂ ಸಮಾನವಾಗಿವೆಯಂತೆ. ಇದರ ಬಜೆಟ್ 95 ಕೋಟಿ ಎನ್ನುತ್ತವೆ ಮೂಲಗಳು. ಈಗಾಗಲೇ ಥಾಯ್ಲೆಂಡ್, ಬ್ಯಾಂಕಾಕ್ ವಾಯುನೆಲೆಗಳಲ್ಲಿ ಚಿತ್ರೀಕರಿಸಲಾಗಿದ್ದು ಚಿತ್ರವನ್ನು ಎರಡು ಗಂಟೆಗೆ ಸೀಮಿತಗೊಳಿಸಲಾಗಿದೆಯಂತೆ.