ವಿಶ್ವದ ನಾಲ್ಕನೇ ಸುಂದರಿ ಅಂತ ಐಶ್ವರ್ಯ ರೈ ಬಚ್ಚನ್ !
, ಶನಿವಾರ, 1 ಫೆಬ್ರವರಿ 2014 (10:14 IST)
ವಿಶ್ವಮಟ್ಟದ ಅತಿ ಸುಂದರಿಯರಲ್ಲಿ ಐಶ್ವರ್ಯ ರೈ ಬಚ್ಚನ್ ನಾಲ್ಕನೇ ಸ್ಥಾನವನ್ನು ಗಳಿಸಿ ಕೊಂಡಿದ್ದಾರೆ. ಇತ್ತೀಚಿಗೆ ಈ ಬಗ್ಗೆ ನಡೆಸಿಸ್ದ ಪೋಲ್ ನಲ್ಲಿ ಐಶ್ ಗೆ ನಾಲ್ಕನೆ ಸ್ಥಾನ ದೊರಕಿದೆ. ಹಾಲಿವುಡ್ ಬಜ್ ಇದನ್ನು ಆಯೋಜಿಸಿತ್ತು. ಈ ಸರ್ವೆಯಲ್ಲಿ ಸುಮಾರು ನಾಲ್ಕು ಮಿಲಿಯನ್ ಮಂದಿ ಭಾಗವಹಿಸಿದ್ದರು. ಇದರಲ್ಲಿ ಅತ್ಯಂತ ಬುದ್ಧಿವಂತೆ, ಯಶಸ್ವಿ ಮಹಿಳೆ ಹೀಗೆ ಅನೇಕ ಅಂಶಗಳನ್ನು ಅಳವಡಿಸಲಾಗಿತ್ತು. 2013 -14ರಯಶಸ್ವಿ ಸಾಧಕರಿಗೆ ಆಯೋಜನೆ ಮಾಡಿತ್ತು.ಇದರಲ್ಲಿ ಐಶ್ವರ್ಯ ಹೆಸರು ರಾಯ್ ಮೋನಿಕ ಬೆಲ್ಲುಕಿ, ಕೇಟ್ ಅಪ್ಟೋನ್ ಮತ್ತು ಎಂಜಲಿನಾ ಜೊಲಿಯ ಜೊತೆ ಅಂತಿಮ ಹಣಾಹಣಿಯಲ್ಲಿ ಇತ್ತು. ಇದರ ಬಗ್ಗೆ ಪ್ರತಿಕ್ರಿಯಿಸುತ್ತಾ ಐಶ್ವರ್ಯ ರೈ ಬಚ್ಚನ್ ಇಡೀ ವಿಶ್ವದ ನಾಲ್ಕು ಮಿಲಿಯನ್ ಮಂದಿ ತಮ್ಮ ಆಸಕ್ತ ನಟಿಯರ ಬಗ್ಗೆ ವೋಟ್ ಹಾಕಿ ಗೆಲ್ಲಿಸಿದ ಸಂಗತಿ ನನಗೆ ವಾಟ್ಸ್ ಅಪ್ ಮುಖಾಂತರ ತಿಳಿಯಿತು ಎನ್ನುವುದನ್ನು ಖುಷಿಯಿಂದ ಹಂಚಿಕೊಂಡಿದ್ದಾರೆ.