Article Bollywood Gossips %e0%b2%b5%e0%b2%bf%e0%b2%b6%e0%b3%8d%e0%b2%b5%e0%b2%a6 %e0%b2%85%e0%b2%97%e0%b3%8d%e0%b2%b0 10 %e0%b2%b8%e0%b3%81%e0%b2%82%e0%b2%a6%e0%b2%b0%e0%b2%bf%e0%b2%af%e0%b2%b0%e0%b2%b2%e0%b3%8d%e0%b2%b2%e0%b2%bf %e0%b2%90%e0%b2%b6%e0%b3%8d 107071200011_1.htm

Daily Horoscope

Select Your Language

Notifications

webdunia
webdunia
webdunia
webdunia

ವಿಶ್ವದ ಅಗ್ರ 10 ಸುಂದರಿಯರಲ್ಲಿ ಐಶ್

ವಿಶ್ವಸುಂದರಿ
WDND
ವಿಶ್ವ ಸುಂದರಿಯರ ಪಟ್ಟದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತೆ ಹೆಸರು ಮಾಡತೊಡಗಿದ್ದಾರೆ. ಹಾರ್ಪರ್ಸ್ ಆಂಡ್ ಕ್ವೀನ್ ಪತ್ರಿಕೆಯು ತನ್ನ ಜುಲೈ ತಿಂಗಳ ಸಂಚಿಕೆಯಲ್ಲಿ, ವಿಶ್ವದ 10 ಶ್ರೇಷ್ಠ ಸುಂದರಿಯರ ಪಟ್ಟಿಯಲ್ಲಿ ಐಶ್‌ಗೆ 9ನೇ ಸ್ಥಾನ ನೀಡಿದೆ.

ಎರಡು ವರ್ಷದ ಹಿಂದೆಯೂ ಐಶ್ವರ್ಯಾ ಇದೇ ಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಇದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. ವಿಶ್ವದ ಅತ್ಯಂತ ಸುಂದರಿ ಎಂಬ ಪಟ್ಟ ದೊರೆತಿರುವುದು ಹಾಲಿವುಡ್ ಬ್ಯೂಟಿ ಏಂಜೆಲಿನಾ ಜೂಲಿಗೆ.

ಇತ್ತೀಚೆಗಷ್ಟೇ ಬಾಲಿವುಡ್ ಬಾದ್‌ಶಾ ಅಮಿತಾಭ್ ಬಚ್ಚನ್‌ರ ಸೊಸೆಯಾಗಿ ಬಚ್ಚನ್ ಮನೆಗೆ ಪಾದಾರ್ಪಣೆ ಮಾಡಿದ್ದ ಐಶ್ವರ್ಯಾ, ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದು "ಇಟ್ಸ್ ವಂಡರ್‌ಫುಲ್!". ಈ ಸಂತಸದ ಸುದ್ದಿಯಿಂದ ಉಲ್ಲಸಿತರಾಗಿರುವ ಐಶ್ವರ್ಯಾ ಅವರ ಪತಿ ಅಭಿಷೇಕ್ ಬಚ್ಚನ್ ಕೂಡ, ನನ್ನ ಪತ್ನಿ ವಿಶ್ವದ ಶ್ರೇಷ್ಠ ಸುಂದರಿಯಲ್ಲೊಬ್ಬಳು ಎಂದು ಹರ್ಷಚಿತ್ತರಾಗಿ ಪ್ರತಿಕ್ರಿಯಿಸಿದ್ದಾರೆ.

ಪಟ್ಟಿಯಲ್ಲಿ ನಟಿ ಸ್ಕಾರ್ಲೆಟ್ ಜಾನ್ಸನ್, ಗಾಯಕಿ ಬೇಯಾನ್ಸ್ ನೋಲೆಸ್ ಮತ್ತು ಸೂಪರ್ ಮಾಡೆಲ್ ಗಿಸ್ಲೆ ಬಂಚೆನ್ ಅವರನ್ನು ಐಶ್ವರ್ಯಾ ಹಿಂದಿಕ್ಕಿದ್ದಾರೆ.

ಮೊದಲ ಸ್ಥಾನದಲ್ಲಿ ಏಂಜೆಲಿನಾ ಜ್ಯೂಲಿ, ಬಳಿಕ ಕ್ರಮವಾಗಿ ಮಾಡೆಲ್ ಕ್ರಿಸ್ಟೀ ತುರ್ಲಿಗರಾನ್, ಜೋರ್ಡನ್ ರಾಣಿ ರಾನಿಯಾ, ನಿರ್ದೇಶಕಿ ಸೋಫಿಯಾ ಕೊಪೋಲಾ ಮತ್ತು ಐದನೇ ಸ್ಥಾನದಲ್ಲಿ ಸೆಲೆಬ್ರಿಟಿ ಶೆಫ್ ನೈಜೆಲಾ ಲಾಸನ್ ಹೆಸರುಗಳಿವೆ.

Share this Story:

Follow Webdunia kannada