ವಿದೇಶದಲ್ಲಿ ರೆಹಮಾನ್ ರೋಡ್ !
Publish Date: Wed, 06 Nov 2013 (11:23 IST)
Updated Date: Wed, 06 Nov 2013 (11:23 IST)
ವಿದೇಶಿಯರು ನಮ್ಮ ಬಗ್ಗೆ ಒಂದೊಳ್ಳೆ ಅಭಿಪ್ರಾಯ ಹೊಂದುವುದೇ ಕಷ್ಟದ ಕೆಲಸ ಆಗಿರುವಾಗ ನಮ್ಮ ದೇಶದ ಸಾಧಕರೊಬ್ಬರ ಹೆಸರನ್ನು ವಿದೇಶದ ರಸ್ತೆಯೊಂದಕ್ಕೆ ಇಡುವುದು ಅಂದ್ರೆ ನಿಜಕ್ಕೂ ಹೆಮ್ಮೆ ತರುವ ಸಂಗತಿ. ಇದು ಆಸ್ಕರ್ ಪ್ರಶಸ್ತಿಗಿಂತ ಹೆಚ್ಚಿನ ಮಹತ್ವ ಪಡೆದಿದೆ. ಅಂತಹ ಸೌಭಾಗ್ಯ ತಮ್ಮದಾಗಿಸಿಕೊಂಡವರು ನಮ್ಮ ಎ.ಆರ್. ರೆಹಮಾನ್. ಕೆನಡ ದೇಶದ ಒಂತಾರಿಯಾದ ಮರ್ಖಂ ನಗರದ ಒಂದು ರಸ್ತೆಗೆ ಅಲ್ಲಾ-ರಖಾ-ರೆಹಮಾನ್ ಎನ್ನುವ ಹೆಸರನ್ನು ಇಡಲಾಗಿದೆ. ಇದು ರೆಹಮಾನ್ ಅವರ ಪೂರ್ತಿ ಹೆಸರು ಎಂಬುದು ನಮಗೆ ತಿಳಿದೇ ಇದೆ. ಭಾರತೀಯ ಕಲಾವಿದರೊಬ್ಬರಿಗೆ ಇಂತಹ ಗೌರವ ವಿದೇಶದಲ್ಲಿ ಸಂದಿದೆ ಎಂದರೆ ಎಲ್ಲರೂ ಹೆಮ್ಮೆ ಪಡುವ ಸಂಗತಿ. ವೆಲ್ ಕಂ ಟುಮೈ ಸ್ಟ್ರೀಟ್ ಅನ್ನುತ್ತ ಆ ಬೀದಿಯ ಹೆಸರಿರುವ ಬೋರ್ಡ್ ಹಿಡಿದು ತೆಗೆಸಿಕೊಂಡ ಫೋಟೋ ಈಗ ರೆಹಮಾನ್ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಮುಖ್ಯವಾಗಿ ಅಲ್ಲಿಗ್ಯಾಕೆ ರಹಮಾನ್ ಹೋಗಿದ್ದಾರೆ ಅಂದ್ರೆ ಕೆನಡಾದ ಟೊರೊಂಟೊ ದಲ್ಲಿ ನೂರುವರ್ಷದ ಭಾರತೀಯ ಸಿನಿಮಾ ಹಬ್ಬ ನಡಿತಾ ಇದೆ. ಅದರ ಭಾಗವಾಗಿ ಅಲ್ಲಿದ್ದಾರೆ.