Select Your Language

Notifications

webdunia
webdunia
webdunia
webdunia

ವಿಜಯ್ ಜಿಲ್ಲಾ ಅವರ ಹಳೆಯ ದಾಖಲೆಯನ್ನು ಮುರಿದಿದೆ !

ಇಳಯತಲಪತಿ ವಿಜಯ್
, ಗುರುವಾರ, 16 ಜನವರಿ 2014 (12:19 IST)
PR
ಕಾಲಿವುಡ್ ಸೂಪರ್ ಸ್ಟಾರ್ ಇಳಯತಳಪತಿ ವಿಜಯ್ ಅವರ ಹೊಸ ಚಿತ್ರ ಜಿಲ್ಲಾ ಇತ್ತೀಚಿಗೆ ಬಿಡುಗಡೆ ಕಂಡಿತು. ಈ ಚಿತ್ರದಲ್ಲಿ ಮಲೆಯಾಳಂ ಹಿರಿಯ ನಟ ಮೋಹನ್ ಲಾಲ್ ಮತ್ತು ನಟಿ ಕಾಜಲ್ ಅಗರ ವಾಲ್ ಇವರ ಜೊತೆಯಾಗಿದ್ದರು. ಇತ್ತೀಚಿಗೆ ಚಿತ್ರಕ್ಕೆ ಸಂಬಂಧಿಸಿದ ಪತ್ರಿಕಾ ಗೋಷ್ಠಿ ಕರೆದಿದ್ದ ನಟ ವಿಜಯ್ ತಮ್ಮ ಚಿತ್ರಕ್ಕೆ ಬೆಂಬಲ ನೀಡಿದ ಎಲ್ಲರಿಗು ಧನ್ಯವಾದ ಅರ್ಪಿಸಿದರು. ಈ ಚಿತ್ರದಲ್ಲಿ ಸೂರಿ ಹಾಸ್ಯ ಪಾತ್ರದಲ್ಲಿ ಮಿಂಚಿದ್ದಾರೆ.

ನನ್ನ ಚಿತ್ರಕ್ಕೆ ಉತ್ತಮ ಸ್ವಾಗತ ತೋರಿದ ತಮಗೆಲ್ಲರಿಗೂ ಧನ್ಯವಾದಗಳು ಎಂದು ತಮ್ಮ ಫ್ಯಾನ್ಸ್ ಗಳಿಗೆ ಥ್ಯಾಂಕ್ಸ್ ಹೇಳಿದರು ನಟ ವಿಜಯ್ ಈ ಸಂದರ್ಭದಲ್ಲಿ. ತನ್ನ ಫ್ಯಾನ್ಗಳು ಜಿಲ್ಲಾ ಸಿನಿಮಾದ ಸಂಭ್ರಮವನ್ನು ಆಚರಿಸುತ್ತಿರುವುದನ್ನು ತಾನು ವಿಡಿಯೋದಲ್ಲಿ ನೋಡಿದೆ ಎಂದು ಈ ಸಮಯದಲ್ಲ್ಕಿ ಹೇಳಿದರು ವಿಜಯ್. ಅಜಿತ್ ಅವರ ವೀರಮ್ ಸಹ ಅತ್ಯದ್ಭುತವಾದ ಯಶಸ್ಸು ಪಡೆದಿರುವುದು ಕಾಲಿವುಡ್ ಚಿತ್ರರಂಗಕ್ಕೆ ಒಳ್ಳೆಯ ಸಂಗತಿ ಎಂದು ಈ ಸಮಯದಲ್ಲಿ ಪ್ರಶಂಸೆ ಮಾಡಿದರು ನಟ ವಿಜಯ್.

ಚೆನ್ನೈ ನಗರ ಒಂದರಲ್ಲಿ ಅದು ಒಂದು ದಿನದಲ್ಲಿ ಒಂದೂವರೆ ಕೋಟಿಯಷ್ಟು ಮೊತ್ತ ಮೂರು ದಿನದಲ್ಲಿ ಗಳಿಕೆ ಮಾಡಿತ್ತು. ಇಡಿ ರಾಜ್ಯದಲ್ಲಿ ಸಿಕ್ಕಾಪಟ್ಟೆ ಯಶಸ್ಸು ಸಾಧಿಸಿರುವ ಜಿಲ್ಲಾ ದ ಗಳಿಕೆ ಮತ್ತು ಯಶಸ್ಸು ಅವರ ತುಪ್ಪಾಕ್ಕಿ ಚಿತ್ರ ಗಳಿಕೆಯನ್ನು ಬ್ರೇಕ್ ಮಾಡಿದೆ.

Share this Story:

Follow Webdunia kannada