Publish Date: Sat, 04 Aug 2007 (16:13 IST)
Updated Date: Sat, 04 Aug 2007 (16:02 IST)
ಸ್ವಾತಂತ್ರ್ಯದಿನೋತ್ಸವ ಭಾರತ-ಪಾಕ್ ದೇಶಗಳ ಗಡಿಬಾಗಿಲು ಎಂದೇ ಕರೆಯಲಾಗುವ ವಾಘಾಗೇಟ್‌ನಲ್ಲಿ ವಿಶೇಷ ಸಡಗರದಿಂದ ಜರುಗುತ್ತಿದ್ದು, ಈ ಬಾರಿ ಪಾಕ್ ಹಾಗೂ ಬಾಲಿವುಡ್ ತಾರೆಯರು ಅಲ್ಲಿ ಮಿಂಚಲಿದ್ದಾರೆ.
ವಾಘಾ ಗೇಟ್‌ನಲ್ಲಿ ಸ್ವಾತಂತ್ರ್ಯದ ವಜ್ರಮಹೋತ್ಸವ(60ವರ್ಷ)ಆಚರಣೆ ಬಾಲಿವುಡ್ ತಾರಾಹೊಳಪಿನಿಂದ ಕೂಡಿರುತ್ತದೆ ಎಂಬುದು ಲಭ್ಯಮಾಹಿತಿ.
ಭಾರತದ ಕಲಾವಿದರು ಹಾಗೂ ಪಾಕಿಸ್ತಾನಿ ಕಲಾವಿದರು ಆಗಸ್ಟ್ 14ರ ರಾತ್ರಿ ಇಲ್ಲಿ ವೇದಿಕೆ ಹಂಚೆಕೊಳ್ಳಲಿದ್ದಾರೆ. ಬಾಲಿವುಡ್ ಸಂಗೀತಕಾರ ಎ ಆರ್ ರೆಹ್ಮಾನ್ , ರಾಹತ್ ಫಟಾಹ್ ಆಲಿ ಖಾನ್, ಆಟಿಫ್ ಅಸ್ಲಾಂ ಹಾಗೂ ಶಾಫ್ಕತ್ ಮುಂತಾದ ಸಂಗೀತಜ್ಞರು ಭಾಗವಹಿಸುವರು.
ಬಾಲಿವುಡ್ ತಾರೆಯರಾದ ಶಾರೂಕ್ ಖಾನ್, ಜೂಹಿ ಚಾವ್ಲಾ, ಪಾಕ್ ಮಾಜಿ ಕ್ರಿಕೆಟಿಗ ವಾಸಿಂ ಅಕ್ತರ್, ಪಾಕ್ ಡಿಸೈನರ್ ಶಾಯಾನೆ ಮಲಿಕ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.