Publish Date: Fri, 04 Apr 2008 (15:27 IST)
Updated Date: Fri, 04 Apr 2008 (15:27 IST)
ಪರಿಣಿತ ಅಭಿನೇತ್ರಿ ವಹಿದಾ ರೆಹಮಾನ್ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಈ ಬಾರಿಯ ಎನ್‌ಟಿಆರ್ ಪ್ರಶಸ್ತಿ ಘೋಷಿಸಲಾಗಿದೆ.
ತೆಲುಗಿನ ಹೆಸರಾಂತ ನಟ ಮತ್ತು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಹೆಸರಿನ ಈ ಪ್ರಶಸ್ತಿ, 5 ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ಕೆ.ಬಿ.ತಿಲಕ್, ಜಯಸುಧಾ ಮತ್ತು ಸೂರ್ಯನಾರಾಯಣರನ್ನು ಒಳಗೊಂಡ ಮೂರು ಮಂದಿ ಸದಸ್ಯರ ಸಮಿತಿಯೊಂದು ಪ್ರಶಸ್ತಿಗಾಗಿ ವಹೀದಾ ರೆಹಮಾನ್‌ರ ಹೆಸರನ್ನು ಸೂಚಿಸಿದೆ.
ವಹೀದಾ ರೆಹೆಮಾನ್ ಹೈದರಾಬಾದ್‌ನಲ್ಲಿ ಮೇ 14,1936ರಂದು ಜನಿಸಿದರು. 1955ರಲ್ಲಿ ಜೈಸಿಂಹ ಚಿತ್ರದ ಮೂಲಕ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ ಅವರು ನಂತರ ರೋಜುಲು ಮಾರಾಯಿ ಚಿತ್ರದಲ್ಲಿ ಅಭಿನಯಿಸಿದ್ದರು.
ಆ ನಂತರ ಹಿಂದಿ ಚಿತ್ರ ರಂಗಕ್ಕೆ ಸಾಗಿದ ಅವರು, ಅತ್ಯಂತ ಜನಪ್ರಿಯರಾದರು. ಅವರು ಅಲ್ಲಿ ಪ್ಯಾಸಾ, ಕಾಗಜ್ ಕೆ ಫೂಲ್, ಚೌದಾವೀ ಕಾ ಚಾಂದ್, ಸಾಹಿಬ್ ಬೀಬಿ ಔರ್ ಗುಲಾಮ್, ಗೈಡ್ ಮತ್ತು ನೀಲ್ ಕಮಲ್ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದರು.
ಅವರು ಗೈಡ್ ಮತ್ತು ನೀಲ್ ಕಮಲ್ ಚಿತ್ರಗಳಿಗಾಗಿ ಎರಡು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದರು. ಜೀವಮಾನದ ಸಾಧನೆ ಪ್ರಶಸ್ತಿಯನ್ನು ಅವರು 1994ರಲ್ಲಿ ಪಡೆದಿರುವರು.