Article Bollywood Gossips %e0%b2%b5%e0%b2%a8%e0%b3%8d%e0%b2%af%e0%b2%9c%e0%b3%80%e0%b2%b5%e0%b2%bf %e0%b2%b8%e0%b2%82%e0%b2%b0%e0%b2%95%e0%b3%8d%e0%b2%b7%e0%b2%a3%e0%b3%86%e0%b2%97%e0%b3%86 %e0%b2%b6%e0%b2%be%e0%b2%b0%e0%b3%82%e0%b2%95%e0%b3%8d 107071700012_1.htm

Daily Horoscope

Select Your Language

Notifications

webdunia
webdunia
webdunia
webdunia

ವನ್ಯಜೀವಿ ಸಂರಕ್ಷಣೆಗೆ ಶಾರೂಕ್

ವನ್ಯಜೀವಿ
ಬಾಲಿವುಡ್‌ ಬಾದಶಹ ಶಾರೂಖ್ ಖಾನ್ ಇದೀಗ ಹೊಸತೊಂದು ಯೋಜನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವನ್ಯಜೀವಿ ಸಂರಕ್ಷಣೆಯ ಜನಜಾಗೃತಿ ಕಾರ್ಯಕ್ರಮದಲ್ಲಿ ಖಾನ್ ಪಾಲ್ಗೊಳ್ಳುತ್ತಿದ್ದಾರೆ ಎಂಬುದು ಹೊಸ ಸುದ್ದಿ.

ಪ್ರಸ್ತುತ ಕಾರ್ಯಕ್ರಮವನ್ನು ಶಂಕರ ಡೆವೆಲಪ್‌ಮೆಂಟ್ ಟ್ರಸ್ಟ್, ಏಷ್ಯಾ ಕನ್ಸರ್ವೇಷನ್ ಅವೇರ್‌ನೆಸ್ ಅಸೋಸಿಯೇಶನ್,ವನ್ಜೀವಿ ಸಂರಕ್ಷಣೆ ಮುಂತಾದ ಸಂಸ್ಥೆಗಳ ಸಹಯೋಗದಲ್ಲಿ ದೇಶವ್ಯಾಪಿಯಾಗಿ ಹಮ್ಮಿಕೊಳ್ಳಲಾಗಿದೆ.

ಪ್ರಸ್ತುತ ಜಾಗೃತಿ ಆಂದೋಲನದಲ್ಲಿ ಮಲ್ಟಿಮೀಡಿಯ ಅಳವಡಿಕೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವನ್ಯಜೀವಿ ಸಂರಕ್ಷಣಾ ಜನಜಾಗೃತಿ ಕಾರ್ಯಕ್ರಮ ಇದಾಗಿದ್ದು, ವಂಶನಾಶದ ಅಂಚಿನಲ್ಲಿರುವ ಹಲವು ಪ್ರಾಣಿಗಳ ಸಂರಕ್ಷಣೆಯೂ ಸೇರಿದಂತೆ ಅರಣ್ಯ ಜೀವಜಾಲ ಸಂರಕ್ಷಣೆಯ ಕುರಿತು ಜನಶಿಕ್ಷಣ ಕಾರ್ಯಕ್ರಮ ಇದಾಗಿರುತ್ತದೆ.

ಆಂದೋಲನಕ್ಕೆ ಭಾರತೀಯ ಪ್ರಸಾರ ಮಂಡಳಿ (ಐಬಿಎಫ್) ಸಹಕಾರದೊಂದಿಗೆ ದೂರದರ್ಶನವೂ ಸೇರಿ ಪ್ರಮುಖ ದೂರದರ್ಶನ ಜಾಲವನ್ನು ಪ್ರಚಾರ ಹಂದರವಾಗಿ ಬಳಸಲಾಗುತ್ತಿದೆ. ನೇಷನಲ್ ಜಾಗ್ರಫಿಕಲ್ , ಸಿಎನ್‌ಎನ್ಐಬಿಎನ್, ಡಿಸ್ಕವರಿ ಅನಿಮಲ್ ಪ್ಲಾನೆಟ್, ಎನ್ಡಿಟಿವಿ, ಇಂಡಿಯಾ ಟಿವಿ ಮುಂತಾದವುಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

ಯೋಜನೆಯಲ್ಲಿ ಶಾರೂಖ್ ಅವರು ವನ್ಯಜೀವಿಗಳ ಸಂರಕ್ಷಣೆಯಲ್ಲಿ ವನಪಾಲಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬೆಳಕುಚೆಲ್ಲಲಿದ್ದಾರೆ. ಭಾರತೀಯ ವನಪಾಲಕರೇ ನಿಜವಾದ ನಾಯಕರು ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಮುನ್ನಡೆಯಲಿದೆ.

Share this Story:

Follow Webdunia kannada