Article Bollywood Gossips %e0%b2%b5%e0%b2%82%e0%b2%b6%e0%b2%bf%e0%b2%97%e0%b3%86 %e0%b2%ae%e0%b2%a8%e0%b3%8b%e0%b2%ae%e0%b3%82%e0%b2%b0%e0%b3%8d%e0%b2%a4%e0%b2%bf %e0%b2%b8%e0%b2%82%e0%b2%97%e0%b3%80%e0%b2%a4%e0%b2%b5%e0%b2%bf%e0%b2%b2%e0%b3%8d%e0%b2%b2 108042500006_1.htm

Daily Horoscope

Select Your Language

Notifications

webdunia
webdunia
webdunia
webdunia

ವಂಶಿಗೆ ಮನೋಮೂರ್ತಿ ಸಂಗೀತವಿಲ್ಲ

ವಂಶಿ
ಕನ್ನಡ ಚಿತ್ರರಂಗದಲ್ಲಿ ಹಾಡುಗಳ ಸುಗ್ಗಿಗೆ ಮುಖ್ಯ ಕಾರಣೀಭೂತರಾದವರಲ್ಲಿ ಸಂಗೀತ ನಿರ್ದೇಶಕ ಮನೋಮೂರ್ತಿ ಕೂಡಾ ಒಬ್ಬರು ಎಂದರೆ ತಪ್ಪಾಗಲಾರದು. ಮುಂಗಾರು ಮಳೆ ಚಿತ್ರಕ್ಕೆ ಇವರು ನೀಡಿದ ಸಂಗೀತ ಇವತ್ತಿಗೂ ಎಲ್ಲರ ಬಾಯಲ್ಲೂ ಗುಂಯ್ ಗುಡುತ್ತಿದೆ. ಈ ಚಿತ್ರದ ನಂತರ ಇವರಿಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿತು.

ಇವರು ಸಂಗೀತ ನೀಡಿದ ಮಿಲನ ಹಾಗೂಗೆಳೆಯ ಚಿತ್ರದ ಹಾಡುಗಳು ಸೂಪರ್‌ಹಿಟ್ ಆಗಿವೆ. ಇದರಿಂದ ಮನೋಮೂರ್ತಿ ಸಂಗೀತ ನೀಡಿದರೆ ಹಾಡುಗಳು ಹಿಟ್ ಆಗುವುದರ ಜೊತೆಗೆ ಚಿತ್ರವೂ ಹಿಟ್ ಆಗುತ್ತದೆ ಎಂಬ ಭಾವನೆ ಬಂದು ಹೆಚ್ಚಿನ ಚಿತ್ರಗಳಿಗೆ ಇವರನ್ನೇ ಸಂಗೀತ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾರಂಭಿಸಿದರು.

ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿ ಪ್ರಕಾಶ್ ನಿರ್ದೇಶಿಸುತ್ತಿರುವ ಪುನೀತ್ ಅವರ ವಂಶಿ ಚಿತ್ರಕ್ಕೂ ಮನೋಮೂರ್ತಿಯವರೇ ಆಯ್ಕೆಯಾದರು. ಆದರೆ ಈಗ ಮನೋಮೂರ್ತಿ ಕಾರಣಾಂತರಗಳಿಂದ ವಂಶಿಯಿಂದ ಹೊರಬಂದಿದ್ದಾರೆ. ಅವರ ಸ್ಥಾನಕ್ಕೆ ಆರ್.ಪಿ. ಪಟ್ನಾಯಕ್ ಆಯ್ಕೆಯಾಗಿದ್ದಾರೆ.

ಇಲ್ಲಿ ಮನೋಮೂರ್ತಿ ಯಾವುದೇ ಕೋಪದಿಂದ ಹೊರಬಂದಿಲ್ಲ. ಬದಲಾಗಿ ಈಗ ಅವರ ಕೈಯಲ್ಲಿ ಹಾಗೇ ಸುಮ್ಮನೆ, ಒಲವೇ ಜೀವನ ಲೆಕ್ಕಾಚಾರ ಚಿತ್ರಗಳಿವೆ. ಎಲ್ಲ ಚಿತ್ರವನ್ನು ಒಪ್ಪಿಕೊಂಡರೆ ಯಾವುದಕ್ಕೂ ಸರಿಯಾಗಿ ಗಮನ ನೀಡಲಾಗುವುದಿಲ್ಲ ಎಂದು ಇವರು ವಂಶಿಯನ್ನು ನಯವಾಗಿಯೇ ನಿರಾಕರಿಸಿದ್ದಾರೆ.

Share this Story:

Follow Webdunia kannada