Publish Date: Thu, 28 Jun 2007 (12:22 IST)
Updated Date: Thu, 28 Jun 2007 (12:21 IST)
ಬಾಲಿವುಡ್ ಬೆಡಗಿಯರೆಲ್ಲಾ ಈಗ ವಿದೇಶದಲ್ಲಿ ಸುದ್ದಿಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಇಂಗ್ಲೆಂಡ್ ಇವರ ಆಡುಂಬೊಲವಾಗಿದೆ.
ಇದೀಗ ಲಭಿಸಿದ ಮಾಹಿತಿಯಂತೆ ಬಾಲಿವುಡ್ ನಟಿ ಲಾರಾದತ್ತಾ , ಇಂಗ್ಲೆಂಡ್‌ನ ಸಂಸತ್ತು ಹೌಸ್ ಆಫ್ ಕಾಮನ್ಸ್‌ನಲ್ಲಿ ಉಪನ್ಯಾಸ ನೀಡಲು ಆಹ್ವಾನಿತರಾಗಿದ್ದಾರೆ. 'ಮಾನವ ಅಕ್ರಮಸಾಗಣೆ' ಉಪನ್ಯಾಸದ ವಿಷಯ.
ಇಂಗ್ಲೆಂಡ್‌ಗೆ ತೆರಳಲಿರುವ ಲಾರಾ ಅಲ್ಲಿನ ವೈದ್ಯ ನೆರವು ಸಂಘಟನೆಯ ಅತಿಥಿಯಾಗಿರುವರು. ಇವರೇ ಪ್ರಸ್ತುತ ಉಪನ್ಯಾಸಕ್ಕೆ ಅವಾಶ ನೀಡಿದ್ದಾರೆ.
ಅಲ್ಲಿನ ಕ್ವೀನ್ಸ್ ಗೇಟ್ ವೀಕ್ಷಣೆ, ಸಚಿವರು ರಾಜಕಾರಣಿಗಳ ಸಮಕ್ಷಣ ಭಾಷಣ ನೀಡುವ ಅವಕಾಶ ಲಭಿಸಿರುವುದು ತನಗೆ ಒದಗಿದ ಉತ್ತಮ ಅವಕಾಶ ಎನ್ನುವುದು ಲಾರಾ ಹೇಳಿಕೆ.
ಮಾನವ ಅಕ್ರಮ ಸಾಗಣೆಯನ್ನು ವಿರೋಧಿಸುವ ಆಂದೋಲನದಲ್ಲಿ ಸಕ್ರಿಯವಾಗಿರಲು ಲಾರಾ ನಿರ್ಧರಿಸಿ, ತನ್ನ ವರ್ಚಸ್ಸು ಇಂತಹ ಉದಾತ್ತ ವಿಷಯಗಳಿಗೆ ಬಳಕೆಯಾಗುವುದಿದ್ದರೆ ಉತ್ತಮ ಎಂದಿದ್ದಾರೆ.
ಲಾರಾ ಇಂತಹ ಉದಾತ್ತ ಕೆಲಸಗಳಿಗಾಗಿ ಆಯ್ಕೆಯಾಗಿರುವುದು ಇದೇ ಮೊದಲಲ್ಲ. ವಿಶ್ವ ಸಂಸ್ಥೆಯ ಜಾಗತಿಕ ಕಾರ್ಯಕ್ರಮಗಳಲ್ಲೂ ಸಹವರ್ತಿಯಾಗಿದ್ದರು.