ಲವ್ವರ್ಸ್ ಡೇ ಯಂದು ಶ್ರುತಿ ಹಾಸನ್ ಮಾಡುವುದು ಏನು ಗೊತ್ತೇ?
, ಮಂಗಳವಾರ, 11 ಫೆಬ್ರವರಿ 2014 (09:37 IST)
ಟಾಲಿವುಡ್ ಮಾತ್ರವಲ್ಲ ಕಾಲಿವುಡ್, ಬಾಲಿವುಡ್ ಚಿತ್ರರಂಗದ ಯಶಸ್ವಿ ನಟಿ ಆಗಿದ್ದಾರೆ ಶ್ರುತಿ ಹಾಸನ್.ಆಕೆಯ ಸ್ಟಾರ್ ಡಂತುಂಬಾ ಚೆನ್ನಾಗಿದೆ ಈಗ. ಆದರೆ ಈಗ ಬರುತ್ತಿರುವ ಪ್ರೇಮಿಗಳ ದಿನದಂದು ಆಕೆಯ ಶೆಡ್ಯೂಲ್ ಕೇಳಿರುವ ಬಾಲಿವುಡ್ ಮಂದಿ ಆಶ್ಚರ್ಯ ಚಕಿತರಾಗಿದ್ದಾರೆ.ಈ ಶ್ರುತಿಗೆ ಏನಾಗಿದೆ ಎನ್ನುವ ಮಾತನ್ನು ಆಡುತ್ತಿದ್ದಾರೆ ಅವರು. ಶ್ರುತಿ ಹಾಸನ್ ಅದಕ್ಕಾಗಿ ಅಂದರೆ ಪ್ರೇಮಿಗಳ ದಿನಕ್ಕೆಂದು ಎರಡು ದಿನಗಳ ಶೂಟಿಂಗ್ ಗೆ ರಜೆ ಹಾಕಿದ್ದಾಳೆ. ಅಲ್ಲದೆ ಎಲ್ಲರು ಒಂದು ದಿನ ಪ್ರೇಮಿಗಳ ದಿನ ಆಚರಿಸಿದರೆ, ಆಕೆ ಬರೋಬ್ಬರಿ ಎರಡು ದಿನಗಳ ಕಾಲ ಈ ದಿನವನ್ನು ಆಚರಿಸುತ್ತಾಳಂತೆ. ಅಂದರೆ 13 ಮತ್ತು 14 ತಾರೀಖು.ಮುಂಬೈ ನ ಬಾಂದ್ರ ಏರಿಯಾದಲ್ಲಿ ಇರುವ ತನ್ನ ಮನೆಯಲ್ಲಿ ಆಕೆ ಈ ಸಂಭ್ರಮಾಚರಣೆಯನ್ನು ವಿಜೃಂಭಣೆಯಿಂದ ಮಾಡುತ್ತಾಳಂತೆ. ತನ್ನ ಚಿಕ್ಕಂದಿನ ಸ್ನೇಹಿತರು, ಅದರಲ್ಲೂ ತನ್ನನ್ನು ಪ್ರಪೋಸ್ ಮಾಡಿದಾರನ್ನು ಅಂದು ಕರೆಯುತ್ತಾಳಂತೆ. ಈಗಾಗಲೇ ಅವರುಗಳ ಹೆಸರಿನ ಪಟ್ಟಿ ಸಿದ್ಧವಾಗಿದ್ದು, ಎಲ್ಲರಿಗು ವಿಷಯ ತಿಳಿಸಿದ್ದಾಳೆ. ಹದಿಮೂರರ ರಾತ್ರಿ ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಾಳಂತೆ. ಆ ಪಾರ್ಟಿಯಲ್ಲಿ ಬಿಟೌನ್ ಹೀರೋಗಳು ಸಹ ಇರುತ್ತಾರಂತೆ. ಇವರಲ್ಲಿ ಶ್ರುತಿ ಹಾಸನ್ ಆಪ್ತರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೆ ಮೊಟ್ಟ ಮೊದಲು ತನಗೆ ಪ್ರಪೋಸ್ ಮಾಡಿದ ಬಾಯ್ ಫ್ರೆಂಡ್ ಜೊತೆ ಆಕೆ ಎಂಜಾಯ್ ಮಾಡ್ತಾಳಂತೆ. ಅದೇ ಈಗ ಶ್ರುತಿ ಹಾಸನ್ ಬಗ್ಗೆ ಬಿ ಟೌನ್ ನಲ್ಲಿ ಇರುವ ಸ್ಪೈಸಿ ನ್ಯೂಸ್ ! ಇವಳಿಗೇನು ತಲೆಗಿಲೆ ಕೆಟ್ಟಿದೆಯಾ ಎನ್ನುತ್ತಿದ್ದಾರೆ ಬಿ ಟೌನ್ ಮಂದಿ!