Article Bollywood Gossips %e0%b2%b2%e0%b2%b5%e0%b3%8d %e0%b2%b8%e0%b3%8d%e0%b2%9f%e0%b3%8b%e0%b2%b0%e0%b2%bf %e0%b2%ae%e0%b3%81%e0%b2%82%e0%b2%a6%e0%b2%bf%e0%b2%a8 %e0%b2%b5%e0%b2%b0%e0%b3%8d%e0%b2%b7 107101600030_1.htm

Select Your Language

Notifications

webdunia
webdunia
webdunia
webdunia

ಲವ್ ಸ್ಟೋರಿ ಮುಂದಿನ ವರ್ಷ

ಹರ್ಮನ್ ಬವೇಜಾ
IFM
ಹರ್ಮನ್ ಬವೇಜಾ ಅವರ ಚೊಚ್ಚಲ ಚಿತ್ರ ಲವ್ ಸ್ಟೋರಿ 2050ನ್ನು ಈ ವಾರ ಡಿಸೆಂಬರ್ 21ರಂದು ಬಿಡುಗಡೆ ಮಾಡಬೇಕಿತ್ತು. ಆದರೆ ದಿಢೀರನೆ ಅದರ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಇಟ್ಟುಕೊಳ್ಳಲಾಯಿತು.

ಮೂಲವೊಂದರ ಪ್ರಕಾರ, ಈ ವರ್ಷ ಅನೇಕ ಮಂದಿ ಭರವಸೆಯ ನಟರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮೇರಾ ಪೆಹ್ಲಾ ಪೆಹ್ಲಾ ಪ್ಯಾರ್‌ನಲ್ಲಿ ರಸ್ಲಾನ್ ಮಮ್ತಾಜ್, ಧೋಕಾ ಚಿತ್ರದಲ್ಲಿ ಮುಜಾಮಿಲ್ ಇಬ್ರಾಹಿಂ, ಜಾನಿ ಗದ್ದರ್‌ನಲ್ಲಿ ನೀಲ್ ಮುಖೇಶ್, ಸವಾರಿಯ ಚಿತ್ರದಲ್ಲಿ ರಣಬೀರ್ ಕಪೂರ್ ಹೀಗೆ ಹೊಸಮುಖಗಳ ಹಿಂಡೇ ಈ ವರ್ಷ ಚೊಚ್ಚಲ ಪ್ರವೇಶ ಮಾಡಿದ್ದಾರೆ.

ಇಂತಹ ವಿಶಿಷ್ಠ ಹೊಸಬರ ಗುಂಪಿನಲ್ಲಿ ಗೋವಿಂದ ಎನಿಸಿಕೊಳ್ಳುವುದು ಹರ್ಮನ್‌ಗೆ ಇಷ್ಟವಿಲ್ಲವಂತೆ. ಮುಂದಿನ ವರ್ಷ ಹೊಸಬರ ಸಂಖ್ಯೆ ತಗ್ಗುವುದೆಂದು ನಿರೀಕ್ಷಿಸಲಾಗಿದೆ. ಇದೇ ಕಾರಣಕ್ಕಾಗಿ ಅಶುತೋಷ್ ಗೌರೀಕರ್ ತಮ್ಮ ಮಹತ್ವಾಕಾಂಕ್ಷೆಯ ಜೋಧಾ ಅಕ್ಬರ್ ಚಿತ್ರವನ್ನು ಮುಂದಿನ ವರ್ಷಕ್ಕೆ ಮುಂದೂಡಿದ್ದಾರೆ.

ಸವಾರಿಯ, ಚಕ್ ದೆ ಇಂಡಿಯ ಮತ್ತು ತಾರೆ ಜಮೀನ್ ಈ ವರ್ಷ ಪ್ರಶಸ್ತಿ ಬಾಚಿಕೊಳ್ಳಬಹುದೆಂದು ನಿರೀಕ್ಷಿಸಿರುವಾಗ ಲವ್ ಸ್ಟೋರಿ 2050 ಚಿತ್ರವನ್ನು ಬಿಡುಗಡೆ ಮಾಡಿ ಪ್ರಶಸ್ತಿ ಕಳೆದುಕೊಳ್ಳಲು ಇಷ್ಟವಿಲ್ಲವಂತೆ.

Share this Story:

Follow Webdunia kannada