ಲಂಡನ್‌ನಲ್ಲಿ ಬಾಲಿವುಡ್ ಜ್ವರ
Publish Date: Sat, 10 Nov 2007 (18:33 IST)
Updated Date: Sat, 10 Nov 2007 (18:31 IST)
ಬಾಲಿವುಡ್ ಜ್ವರ ಲೈಸೆಸ್ಟರ್ ಚೌಕಕ್ಕೂ ತಟ್ಟಿದೆ. ಓಂ ಶಾಂತಿ ಓಂ ಚಿತ್ರದ ಪ್ರೀಮಿಯರ್ ಶೋ ವೀಕ್ಷಣೆಗೆ ಲಂಡನ್ ವೆಸ್ಟ್ ಎಂಡ್ ತಟಸ್ಥವಾಯಿತು. ಹಿಂದಿ ಚಿತ್ರೋದ್ಯಮದ ದೊಡ್ಡ ಹೆಸರಾದ ಶಾರುಕ್ ಖಾನ್ ಲೈಸೆಸ್ಟರ್ ಚೌಕದಲ್ಲಿ ಸಂಚಾರವನ್ನು ಸ್ತಬ್ಧಗೊಳಿಸಿದರು.ಸಾವಿರಾರು ಅಭಿಮಾನಿಗಳು ಮತ್ತು ಚಿತ್ರವೀಕ್ಷಕರು ಕಿಂಗ್ ಖಾನ್ ಅವರ ದರ್ಶನ ಪಡೆಯಲು ವೆಸ್ಟ್‌ಎಂಡ್ ಚೌಕದಲ್ಲಿ ನೆರೆದಿದ್ದರು.ಬಾಲಿವುಡ್‌ಗೆ ಚೊಚ್ಚಲ ಪ್ರವೇಶ ಮಾಡಿರುವ ದೀಪಿಕಾ ಪಡುಕೋಣೆ, ಅರ್ಜುನ್ ರಾಮ್‌ಪಾಲ್ ಮತ್ತು ಬಹುಮುಖ ಪ್ರತಿಭೆಯ ಶ್ರೇಯಾಸ್ ತಲ್ಪಾಡೆ ಖಾನ್ ಜತೆಗಿದ್ದರು. ಸಮಗ್ರ ಮೀಡಿಯಾ ಕಂಪನಿ ಎರೋಸ್ ಇಂಟರ್‌ನ್ಯಾಶನಲ್ ಮೂಲಕ ಓಂ ಶಾಂತಿ ಓಂ ಬಿಡುಗಡೆಯು ಜಾಗತಿಕ ಬಾಕ್ಸ್ ಆಫೀಸ್ ಪ್ರಭುತ್ವ ಸಾಧಿಸುವ ಬಾಲಿವುಡ್ ಚಿತ್ರೋದ್ಯಮದ ಪ್ರಯತ್ನಕ್ಕೆ ಒಂದು ತಿರುವು ನೀಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾರುಕ್ ಖಾನ್ ಭಾರತದ ಚಿತ್ರವನ್ನು ಇಡೀ ಜಗತ್ತಿನ ಜನರು ವೀಕ್ಷಿಸಬೇಕೆಂಬುದು ನನ್ನ ಅಭಿಲಾಷೆಯಾಗಿತ್ತು. ಬ್ರಿಟನ್ ಸಂಸ್ಕೃತಿಗಳ ಸಂಗಮವಾಗಿದ್ದು, ಈ ಪ್ರೀಮಿಯರ್ ಪ್ರದರ್ಶನ ಮಹತ್ವದ್ದಾಗಿದೆ ಎಂದು ಅವರು ನುಡಿದರು.