ಲಂಡನ್‌ನಲ್ಲಿ ದುಬಾರಿ ಮನೆ ಮಾಡಿದ ಶಾರುಖ್!
ಬಾಲಿವುಡ್ ಬಾದ್‌ಶಾ ಕಿಂಗ್ ಖಾನ್ ಶಾರುಖ್ ಇದೀಗ ಲಂಡನ್‌ನಲ್ಲಿ ದೊಡ್ಡ ಅಪಾರ್ಟ್‌ಮೆಂಟ್ ಒಂದನ್ನು ಖರೀದಿಸಿದ್ದಾರೆ. ಇದಕ್ಕೆ ಇವರು ನೀಡಿದ ಮೊತ್ತ ಬರೋಬ್ಬರಿ 20 ಮಿಲಿಯನ್ ಪೌಂಡ್‌ಗಳು!ಶಾರುಖ್‌ಗೆ ಲಂಡನ್ ಎಂದರೆ ತುಂಬಾ ಇಷ್ಟ. ಪ್ರತಿ ಬಾರಿಯೂ ವಾರ್ಷಿಕ ರಜೆ ಬಂತೆಂದರೆ ಶಾರುಕ್ ಮಕ್ಕಳು ಹಾಗೂ ಹೆಂಡತಿ ಗೌರಿ ಜತೆ ಲಂಡನ್‌ಗೆ ಹೋಗಿ ಹಲವಾರು ದಿನ ಇದ್ದು ಬರುತ್ತಾರೆ. ಪ್ರತಿ ಬಾರಿ ಹೋದಾಗಲೂ ಲಂಡನ್‌ನ ದುಬಾರಿ ಬೆಲೆಯ ಪ್ರತಿಷ್ಠಿತ ಹೋಟೆಲ್‌ಗಳಲ್ಲೇ ತಂಗುತ್ತಾರೆ. ಆದರೆ ಈ ಬಾರಿ ಹೋದಾಗ ಪ್ರತಿ ಬಾರಿ ಹೋಟೆಲ್‌ನಲ್ಲಿ ತಂಗುವುದಕ್ಕೆ ಬದಲಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ ಈ ಬಾರಿ ಅಲ್ಲಿಂದ ಹಿಂತಿರುವಾಗ ಬರೋಬ್ಬರಿ 20 ಮಿಲಿಯನ್ ಪೌಂಡು ವೆಚ್ಚದ ಮನೆಯನ್ನೇ ಖರೀದಿ ಮಾಡಿದ್ದಾರೆ. ಇದು ಲಂಡನ್‌ನ ಕೇಂದ್ರ ಭಾಗದ ಪಾರ್ಕ್ ಲೇನ್ ಪ್ರದೇಶದ ಬಳಿ ಇದೆಯಂತೆ.ಶಾರುಖ್ ಆಪ್ತ ಮೂಲಗಳ ಪ್ರಕಾರ, ಶಾರುಖ್ ಈ ಬಾರಿ ರಜೆಯಲ್ಲಿ ಲಂಡನ್ ಪ್ರವಾಸ ಹೋಗಿದ್ದಾಗ ಆ ಮನೆ ಹಾಗೂ ಸುತ್ತಮುತ್ತಲ ಪರಿಸರ ಇಷ್ಟವಾಯಿತಂತೆ. ಹಾಗಾಗಿ ಅದನ್ನು ಖರೀದಿಸಲು ನಿರ್ಧರಿಸಿದರು. ಆದರೆ, ಅದು ತುಂಬ ದುಬಾರಿ ಮನೆಯಾಗಿದ್ದರಿಂದ ಅದ್ನನು ಖರೀದಿ ಮಾಡಲು ಸ್ವಲ್ಪ ವಿಳಂಬವಾಯಿತು ಎನ್ನುತ್ತಾರೆ.ಅಲ್ಲದೆ, ಶಾರುಖ್‌ಗೆ ಅರಬ್ ರಾಷ್ಟ್ರದಲ್ಲೂ ಆಸ್ತಿಯಿದೆ. ಲಂಡನ್‌ನಲ್ಲಿ ಮನೆ ಖರೀದಿಸುವ ಮೂಲಕ ಶಾರುಖ್ ಈಗ ಸೆಲೆಬ್ರಿಟಿಗಳ ಪೈಕಿ ವಿದೇಶದಲ್ಲಿ ಅತೀ ಹೆಚ್ಚು ಬೆಲೆಯ ಮನೆ ಖರೀದಿಸಿದವರಾಗಿದ್ದಾರೆ. ಈ ಹಿಂದೆ ಶಿಲ್ಪಾ ಶೆಟ್ಟಿ ತಮ್ಮ ಭಾವೀ ಗಂಡ ರಾಜ್ ಕುಂದ್ರಾ ಜತೆ ಸೇರಿ ಲಂಡನ್ನಲ್ಲಿ ಮನೆ ಮಾಡಿಕೊಂಡಿದ್ದರು. ಹಾಂ, ಅಂದಹಾಗೆ, ಲಂಡನ್‌ನಲ್ಲೇ ವಾಸವಾಗಿರಲು ಶಾರುಖ್ ಹೋಗೋದಿಲ್ಲ. ರಜೆಯಲ್ಲಿ ಸಮಯ ಕಳೆಯಲು ಆ ದುಬಾರಿ ಮನೆಯಂತೆ.