Publish Date: Fri, 07 Mar 2008 (13:40 IST)
Updated Date: Fri, 07 Mar 2008 (13:39 IST)
ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಲಂಡನ್‌ನಲ್ಲಿ ಬ್ರಿಟನ್ ಏಷಿಯಾ ಮೂಲದವರಿಗಾಗಿ ನಟನಾ ಶಾಲೆಯೊಂದನ್ನು ಆರಂಭಿಸಿದ್ದಾರೆ.
ಬ್ರಿಟನ್ ಮತ್ತು ಏಷಿಯಾಮೂಲದವರಿಗಾಗಿ ನಟನಾ ತರಬೇತಿಯನ್ನು ಪಡೆಯಲು ಉತ್ತಮ ಅವಕಾಶವನ್ನು ಕಲ್ಪಿಸಿದಂತಾಗಿದೆ ಎಂದು ಹಿತ್ರೋ ಸಿಟಿ ಪಾರ್ಟನರ್‌ಶಿಪ್‌ನ ಕಾರ್ಯನಿರ್ವಾಹಕ ಅಧಿಕಾರಿ ಆಶ್ ವರ್ಮಾ ತಿಳಿಸಿದ್ದಾರೆ
ಅನುಪಮ್ ಖೇರ್ 2005ರಲ್ಲಿ ಮುಂಬೈನಲ್ಲಿ ನಟನಾ ತರಬೇತಿ ಶಾಲೆಯನ್ನು ತೆರೆದಿದ್ದು,ಲಂಡನ್‌ನಲ್ಲಿ ಅದರ ಶಾಖೆಯನ್ನು ತೆರೆಯಲಾಗಿದೆ. ಆರಂಭದಲ್ಲಿ 60 ಮಂದಿಗೆ ಸ್ಥಳಾವಕಾಶವಿದ್ದು ಪ್ರತಿಯೊಬ್ಬರಿಗೆ 6ಸಾವಿರ್ ಪೌಂಡ್ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.
ಏಷಿಯಾದವರಿಗಾಗಿ ಹಾಗೂ ಭಾರತದ ಪ್ರತಿಭಾವಂತ ಯುವಕರಿಗಾಗಿ ಭಾರತ ಮತ್ತು ಇಂಗ್ಲೆಂಡ್ ಮಿಶ್ರಿತ ತರಬೇತಿಯನ್ನು ನೀಡು ಯುವಕ ಹಾಗು ಯುವತಿಯರಲ್ಲಿರುವ ಪ್ರತಿಭೆಯನ್ನು ಹೊರತೆಗೆದು ಉತ್ತಮ ನಟರಾಗಲು ಅವಕಾಶ ಕಲ್ಪಿಸಲಾಗಿದೆ ಎಂದು ವರ್ಮಾ ತಿಳಿಸಿದ್ದಾರೆ.
ವೆಸ್ಟ್ ಲಂಡನ್ ಕಾಲೇಜ್‌ನ ಹಿತ್ರೋಸಿಟಿ ಪಾರ್ಟನರ್‌ಶಿಪ್ ಸಂಸ್ಥೆಯೊಂದಿಗೆ ಬಾಲಿವುಡ್ ಅನುಪಮ್ ಖೇರ್ ಒಪ್ಪಂದ ಮಾಡಿಕೊಂಡಿದ್ದಾರೆ.