ರೇಸು ಗುರ್ರಂ ಆಡಿಯೋ ರೈಟ್ಸ್ ಎಷ್ಟು ಗೊತ್ತೇ?
, ಶನಿವಾರ, 8 ಮಾರ್ಚ್ 2014 (10:15 IST)
ಮೆಗಾ ಹೀರೋ ಅಲ್ಲೂ ಅರ್ಜುನ್ ಅವರ ಹೊಸ ಚಿತ್ರ ರೇಸು ಗುರ್ರಂ . ಈ ಚಿತ್ರದ ಕೆಲಸಗಳು ಭಾಗಶಃ ಪೂರ್ಣ ಆಗಿದೆ ಎಂದೇ ಹೇಳ ಬಹುದಾಗಿದೆ. ಈ ಸಿನಿಮಾದ ಆಡಿಯೋ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಇದಕ್ಕೆ ಸಂಬಂಧಪಟ್ಟ ಸಂಗತಿಯು ಈಗ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ಈ ಚಿತ್ರದ ಹಾಡಿನ ರೈಟ್ಸ್ ಭಾರಿ ಮೊತ್ತದಲ್ಲಿ ಮಾರಾಟ ಆಗಿದೆಯಂತೆ. ಇದನ್ನು ಲಹರಿ ಸಂಸ್ಥೆಯವರು ಭಾರಿ ಮೊತ್ತ ಕೊಟ್ಟು ಪಡೆದಿದ್ದಾರಂತೆ. ಇದು ಟಾಲಿವುಡ್ ಸಿನಿಮಾ ಇಂಡಸ್ಟ್ರಿ ಯಲ್ಲಿ ಅತಿ ಹೆಚ್ಚಿನ ಸದ್ದು ಮಾಡುತ್ತಿದೆ.
ರೇಸು ಗುರ್ರಂ ಆಡಿಯೋ ರೈಟ್ಸ್ ಲಹರಿ ಸಂಸ್ಥೆ 55 ಲಕ್ಷಕ್ಕೆ ಪಡೆದು ಕೊಂಡಿದೆಯಂತೆ. ಹಿಂದೆ ವನ್ ಚಿತ್ರದ ಆಡಿಯೋ ರೈಟ್ಸ್ 72 ಲಕ್ಷಕ್ಕೆ ಕೊಂಡಿತ್ತು ಲಹರಿ. ಅದಾದ ಬಳಿಕ ಇಂತಹ ಹೈಪ್ ಈಗ ರೇಸು ಗುರ್ರಂ ಗೆ ಸಿಕ್ಕಿದೆ. ಅಲ್ಲದೆ ನಂದಮೂರಿ ಬಾಲಕೃಷ್ಣ ಅವರು ನಟಿಸಿರುವ ಲೆಜೆಂಡ್ ಚಿತ್ರದ ಆಡಿಯೋ ರೈಟ್ಸ್ ಸಹ ಲಹರಿಯ ಕೈವಶ ಆಗಿದೆಯಂತೆ. ರೇಸು ಗುರ್ರಂ ಆಡಿಯೋ ಬಿಡುಗಡೆಯ ಸಮಯದಲ್ಲಿ ಶ್ರುತಿ ಹಾಸನ್ ಸ್ಟೇಜ್ ಪರ್ಫಾರ್ಮೆನ್ಸ್ ನೀಡುತ್ತಿದ್ದಾಳಂತೆ.