ರೂಪೇಶ್ ಗೆ ಟ್ವಿಟ್ಟರಿನಲ್ಲಿ ಹೋದ ಮಾನ ಏಳು ಲಕ್ಷದಿಂದ ವಾಪಾಸ್ ಸಿಗುತ್ತಾ ?
, ಗುರುವಾರ, 6 ಫೆಬ್ರವರಿ 2014 (10:11 IST)
ಅದ್ಯಾಕೋ ಕಾಮಸುತ್ರದ ಕಥೆ ಮುಗಿತಾನೆ ಇಲ್ಲ. ದಿನೇದಿನೇ ಹೊಸ ರೂಪ ಪಡೆಯುತ್ತಲೇ ಬಂದಿದೆ. ಇತ್ತೀಚೆಗಷ್ಟೇ ಕಾಮ ಸೂತ್ರ ತ್ರೀಡಿ ಚಿತ್ರದ ನಿರ್ದೇಶಕ ರೂಪೇಶ್ ಪೌಲ್ ಅವರ ಮೇಲೆ ಆ ಚಿತ್ರದ ನಟಿ ಶರ್ಲಿನ್ ಚೋಪ್ರ ಕೇಸ್ ಹಾಕಿದ್ದರ ಬಗ್ಗೆ ಬರೆದಿದ್ದೆವು. ಆ ವಿಷಯದಲ್ಲಿ ಅನೇಕ ಕಥೆಗಳು ಸಹ ಬಾಲಿವುಡ್ ನಲ್ಲಿ ಹೆಚ್ಚು ಸುದ್ದಿ ಮಾಡಿತ್ತು. ಈಗ ಅದರ ಮುಂದು ವರೆದ ಭಾಗ , ಕಾಮಸುತ್ರದ ನಿರ್ದೇಶಕ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಬಳಿಕ ಆತ ಸುಮ್ಮನೆ ಕೂರದೆ ಈಗ ಶರ್ಲಿನ್ ಮೇಲೆ ಕಿಡಿ ಕಾರಿದ್ದಾರೆ. ಅಂದರೆ ಕೇಸನ್ನು ಹಾಕುವ ಪಾಳಿ . ರೂಪೇಶ್ ನೀಡಿರುವ ದೂರಿನ ಅನ್ವಯ ಆತನಿಗೆ ಸಿಕಾಪಟ್ಟೆ ಬೇಜಾರಾಗಿದೆ. ಸೋಶಿಯಲ್ ನೆಟ್ ವರ್ಕ್ ನಲ್ಲಿ ಶರ್ಲಿನ್ ಆತನ ಮಾನ ಹರಾಜು ಮಾಡಿದ್ದಾಳೆ. ಅದಕ್ಕಾಗಿ ದುಃಖಗೊಂಡ ರೂಪೇಶ್ ಈಗ ತನ್ನ ಮಾನ ಹೋಗಿದೆ ಇವಳಿಂದ ಹೋದ ಮಾನವನ್ನು ಹಿಂದೆ ತರಕ್ಕೆ ಆಗಲ್ಲ ದುಡ್ಡಾದ್ರೂ ಕೊಡಿಸಿ ಎಂದು ದೂರು ದಾಖಲು ಮಾಡಿದ್ದಾರೆ. ಎರ್ನಾಕುಲಂ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಇವರು ಕೇಸ್ ಹಾಕಿದ್ದಾರೆ. ಟ್ವಿಟ್ಟರ್ ನಲ್ಲಿ ತನ್ನನ್ನು ಬೈದಿದ್ದಾಳೆ ಎನ್ನುವ ದೂರು ಆತನದ್ದಾಗಿದೆ. ಜನವರಿ 15ರಂದು ಆಕೆ ತನ್ನ ಟ್ವಿಟ್ಟರ್ ಅಕೌಂಟ್ ನಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಬೈದಿದ್ದಾಳೆ ಎನ್ನುವ ಆರೋಪ ಮಾಡಿದ್ದಾರೆ ರೂಪೇಶ್. ಅಲ್ಲದೆ ಅಸಹ್ಯಕರ ಮತ್ತು ಮನಸ್ಸಿಗೆ ಘಾಸಿ ಮಾಡುವಂತಹ ಮಾತುಗಳನ್ನು ಹೇಳಿದ್ದಾಳೆ ಆಕೆ ಅಲ್ಲಿ.. ಎನ್ನುವ ನೋವನ್ನು ಆತ ಕೋರ್ಟಿನ ಮುಂದೆ ಇಟ್ಟಿದ್ದಾರೆ. ಅದಕ್ಕಾಗಿ ಆಕೆ ಏಳು ಲಕ್ಷ ರೂಪಾಯಿಗಳನ್ನು ತನಗೆ ನೀಡ ಬೇಕು ಎನ್ನುವುದನ್ನು ಕೋರ್ಟಿನ ಮುಂದೆ ಇಟ್ಟಿದ್ದಾರೆ . ಟ್ವಿಟ್ವರಿನಲ್ಲಿ ಹೋದ ಮಾನ ಏಳು ಲಕ್ಷ ಕೊಟ್ಟಾಗ ಮತ್ತೆ ಬರೋದಿಲ್ಲ ಅಂದ್ರು ಸಹ ಕನಿಷ್ಠ ದುಡ್ಡಾದ್ರೂ ಸಿಗುತ್ತಲ್ಲ ಅನ್ನುವ ಸಮಾಧಾನ ರೂಪೇಶ್ ಗೆ ಇರ ಬಹುದು !