ರಿವಾಲ್ವರ್ ರಾಣಿಗೆ ಉಷಾ ಉತ್ತೂಪ್ ಕಂಠದಾನ
, ಗುರುವಾರ, 3 ಏಪ್ರಿಲ್ 2014 (11:21 IST)
ಭಾರತದ ಭಿನ್ನ ಕಂಠದ ಗಾಯಕಿ ಉಷಾ ಉತ್ತುಪ್. ಅವರ ವಿಶೇಷ ಧ್ವನಿ ಮಾತ್ರವಲ್ಲ, ಹಣೆಗೆ ಕಾಸಿನಗಲದ ಕುಂಕುಮ, ಲವಲವಿಕೆಯ ನಗು, ತಲೆ ತುಂಬಾ ಇರುವ ಪ್ಲಾಸ್ಟಿಕ್ ಹೂ ಇವೆಲ್ಲವೂ ಸದಾ ನೆನಪಲ್ಲಿ ಉಳಿಯುವಂತಹ ಸಂಗತಿಗಳಾಗಿವೆ.ಉಷಾ ಅವರು ಕನ್ನಡ , ಹಿಂದಿ ಭಾಷೆ ಸೇರಿದಂತೆ ಸುಮಾರು 24ಭಾಷೆಗಳಲ್ಲಿ ತಮ್ಮ ಕಂಠ ಸಿರಿಯನ್ನು ಉಣ ಬಡಿಸಿದ್ದಾರೆ. ಈಗ ಉಷಾ ಉತ್ತೂಪ್ ಅವರು ಕಂಗನಾ ರನೌಟ್ ಹೊಸ ಚಿತ್ರ ರಿವಾಲ್ವರ್ ರಾಣಿಯಲ್ಲಿ ಸಹ ತಮ್ಮ ಕೊಡುಗೆ ನೀಡುತ್ತಿದ್ದಾರೆ.
ನೀವು ತಿಳಿದಂತೆ ಇಲ್ಲಿ ಅವರು ಕೇವಲ ಹಾಡುತ್ತಿಲ್ಲ, ಜೊತೆಗೆ ಕಂಠ ದಾನ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಅವರು ಕೇವಲ ಹಾಡುತ್ತಿದ್ದರು, ಮೊಟ್ಟಮೊದಲ ಬಾರಿಗೆ ಕಂಠ ದಾನ ಮಾಡಿ ತಾವು ಭಿನ್ನ ರೀತಿಯಲ್ಲಿ ಜನರ ಮುಂದೆ ಬರುತ್ತಿದ್ದಾರೆ. ಈ ಚಿತ್ರದ ಟೈಟಲ್ ಸಾಂಗ್ ಸಹ ಉಷಾ ಮೇಡಂ ಹಾಡಿದ್ದಾರಂತೆ. ಈ ಚಿತ್ರಕ್ಕೆ ಉಷಾ ಅವರ ಧ್ವನಿಗಿಂತ ಬೇರೆ ಇನ್ಯಾವುದೇ ಧ್ವನಿಯು ಸಹ ಸೂಟ್ ಆಗಲ್ಲ ಎನ್ನುವ ಕಾರಣದಿಂದ ಆಯ್ಕೆ ಮಾಡಿದ್ದಾರೆ. ಈಗ ಈ ಚಿತ್ರಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳು ಪೂರ್ಣ ಆಗಿದೆ ಈ ಚಿತ್ರವೂ ಇದೆ ತಿಂಗಳು 25ಕ್ಕೆ ಬಿಡುಗಡೆ ಆಗಲಿದೆ.