Article Bollywood Gossips %e0%b2%b0%e0%b2%bf%e0%b2%af%e0%b2%b2%e0%b3%8d %e0%b2%b2%e0%b3%88%e0%b2%ab%e0%b3%8d%e2%80%8c%e0%b2%a8%e0%b2%b2%e0%b3%8d%e0%b2%b2%e0%b3%82 %e0%b2%b9%e0%b3%80%e0%b2%b0%e0%b3%8b %e0%b2%86%e0%b2%a6 %e0%b2%a8%e0%b2%9f%e0%b2%bf %e0%b2%95%e0%b3%87%e0%b2%9f%e0%b3%8d 111082400039_1.htm

Daily Horoscope

Select Your Language

Notifications

webdunia
webdunia
webdunia
webdunia

ರಿಯಲ್ ಲೈಫ್‌ನಲ್ಲೂ ಹೀರೋ ಆದ ನಟಿ 'ಕೇಟ್'

ಕೇಟ್ ವಿನ್ಸ್ಲೆಟ್
WD
90 ವರ್ಷದ ವೃದ್ಧೆಯೊಬ್ಬರನ್ನು ಬೆಂಕಿಯಿಂದ ಪಾರು ಮಾಡುವ ಮೂಲಕ ಚಿತ್ರನಟಿ ಕೇಟ್‌ ವಿನ್‌ಸ್ಲೆಟ್‌ ನಿಜ ಜೀವನದಲ್ಲೂ ನಾಯಕಿಯಾಗಿ ಮೆರೆದಿದ್ದಾಳೆ. ನೆಕರ್‌ ಐಲ್ಯಾಂಡ್‌ನಲ್ಲಿ ಏರ್ಪಡಿಸಿದ್ದ ಸಮಾರಂಭವೊಂದರಲ್ಲಿ ಟೈಟಾನಿಕ್‌ ಹೀರೋಯಿನ್‌ ಕೇಟ್‌, ಆಕೆಯ ಇಬ್ಬರು ಮಕ್ಕಳು ಹಾಗೂ ಪ್ರಿಯಕರ ಲೂಯಿಸ್‌ ಸೇರಿದಂತೆ 20 ಮಂದಿ ಅತಿಥಿಗಳು ಪಾಲ್ಗೊಂಡಿದ್ದರು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಬ್ರಾಸನ್‌ ಹಾಗೂ ಅವರ ಪತ್ನಿ ಮತ್ತು ಪುತ್ರ ಸ್ಯಾಂ ಟಿಂಬರ್‌ ಗ್ರೇಟ್‌ ಹೌಸ್‌ ಸಮೀಪದ ಮನೆಯಲ್ಲಿ ನಿದ್ರಿಸುತ್ತಿದ್ದರು. ಆಗಸ್ಟ್‌ 22ರ ಬೆಳಗ್ಗೆ 4 ಗಂಟೆಯ ಸಮಯದಲ್ಲಿ ಚಂಡಮಾರುತದಿಂದ ಉಂಟಾದ ಸಿಡಿಲಿನಿಂದಾಗಿ ಟಿಂಬರ್ ಹೌಸ್‌ಗೆ ಬೆಂಕಿ ಹತ್ತಿಕೊಂಡಿತು. ಈ ಸಂದರ್ಭದಲ್ಲಿ ದಟ್ಟ ಹೊಗೆಯ ನಡುವೆ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ ಕೇಟ್‌ 90 ವರ್ಷದ ವೃದ್ಧೆಯನ್ನು ಎತ್ತಿಕೊಂಡು ಬಂದು ಬೆಂಕಿಯಿಂದ ಪಾರು ಮಾಡಿದ್ದಾರೆ.

ತಮ್ಮ ತಾಯಿಯನ್ನು ಉಳಿಸಿದ್ದಕ್ಕೆ ಧನ್ಯವಾದ ಹೇಳಿರುವ ಬ್ರಾಸನ್‌, 90 ವರ್ಷದ ತಮ್ಮ ತಾಯಿಗೆ ಓಡಾಡಲು ಸಾಧ್ಯವಿಲ್ಲ. ಬೆಂಕಿಯ ಬಲೆಯಲ್ಲಿ ಸಿಲುಕಿದ್ದ ತಮ್ಮ ತಾಯಿಯನ್ನು ಕೇಟ್‌ ತಮ್ಮ ಕೈಗಳಲ್ಲಿ ಎತ್ತಿಕೊಂಡು ಬಂದು ರಕ್ಷಿಸಿದ್ದಾರೆ. ಚಿತ್ರೀಕರಣದ ಸಂದರ್ಭದಲ್ಲಿ ಹಾಕಿದ್ದ ಸೆಟ್‌ ಮಾದರಿಯಲ್ಲೇ ಇದು ನಡೆಯಿತು ಆದರೆ ಚಿತ್ರೀಕರಣ ಮುಗಿದ ನಂತರ ಹೇಳುವ ಕಟ್‌ ಎಂದು ಹೇಳುವ ಸಂದೇಶಕ್ಕಾಗಿ ಕಾಯುವಂತಿರಲಿಲ್ಲ. ಇದು ತಮ್ಮ ನಿಜ ಜೀವನದಲ್ಲಿ ಇಂತಹಾ ಸನ್ನಿವೇಶ ಅತಿವಾಸ್ತವವಾಗಿದೆ ಎಂದು ಕೇಟ್‌ ತಿಳಿಸಿದ್ದಾರೆ ಎಂದು ಬ್ರಾಸನ್‌ ಹೇಳಿದ್ದಾರೆ.

ಬ್ರಾಸನ್‌ ಅವರು 28ವರ್ಷದವರಾಗಿದ್ದಾಗ 180,000 ಪೌಂಡ್‌ಗೆ ಈ ಮನೆಯನ್ನು ಖರೀದಿಸಿದ್ದರು. ಅಗ್ನಿ ಆಕಸ್ಮಿಕದಿಂದ ಹಾಳಾಗಿರುವ ಈ ಮನೆಯನ್ನು ಆದಷ್ಟು ಬೇಗ ಪುನರ್‌ ನಿರ್ಮಿಸುವುದಾಗಿ ಹೇಳಿದ್ದಾರೆ.

Share this Story:

Follow Webdunia kannada