Article Bollywood Gossips %e0%b2%b0%e0%b2%be%e0%b2%af%e0%b2%b2%e0%b3%8d %e0%b2%aa%e0%b3%8d%e0%b2%b0%e0%b2%bf%e0%b2%b8%e0%b2%a8%e0%b2%b0%e0%b3%8d %e0%b2%b8%e0%b2%82%e0%b2%9c%e0%b2%af%e0%b3%8d %e0%b2%a6%e0%b2%a4%e0%b3%8d %e0%b2%ae%e0%b2%b0%e0%b2%b3%e0%b2%bf %e0%b2%ae%e0%b2%a8%e0%b3%86%e0%b2%97%e0%b3%86 113120700011_1.htm

Daily Horoscope

Select Your Language

Notifications

webdunia
webdunia
webdunia
webdunia

ರಾಯಲ್ ಪ್ರಿಸನರ್ ಸಂಜಯ್ ದತ್ ಮರಳಿ ಮನೆಗೆ!

ಸಂಜಯ್ ದತ್
PR
ನನ್ನ ಹೆಂಡತಿಗೆ ಹುಷಾರಿಲ್ಲ ನಾನು ಮನೆಗೆ ಹೋಗ ಬೇಕು ಎಂದು ನಟ ಸಂಜಯ್ ದತ್ ಮನವಿಯನ್ನು ಪೂನಾ ಯರವಾಡ ಜೈಲಿನವರು ಒಪ್ಪಿ ಮತ್ತೆ ಒಂದು ತಿಂಗಳ ಕಾಲ ಮನೆಗೆ ಕಳುಹಿಸಿದ್ದಾರೆ. ಮುಂಬೈ ಬ್ಲಾಸ್ಟ್ ಗೆ ಸಂಬಂಧಪಟ್ಟಂತೆ ಟಾಡಾ ಕಾಯ್ದೆ ಅಡಿಯಲ್ಲಿ ಬಂಧಿತರಾಗಿರುವ ಸಂಜಯ್ ದತ್ ಅಕ್ಟೋಬರ್ ತಿಂಗಳಲ್ಲಿ ತಮ್ಮ ಮನೆಗೆ ಹೋಗಿದ್ದು ಎರಡುವಾರಗಳ ರಜೆಯಲ್ಲಿ . ಆದರೆ ಅವರು ಪೂರಾ ಒಂದು ತಿಂಗಳ ಕಾಲ ಮನೆಯಲ್ಲಿ ರೆಸ್ಟ್ ತೆಗೆದುಕೊಂಡರು. ಈ ರಾಯಲ್ ಖೈದಿ ನವೆಂಬರ್ ನಲ್ಲಿ ಘರ್ ವಾಪಸಾದರೂ ಈಗ ಮತ್ತೇ ರಜೆ ತಗೊಂಡಿದ್ದಾರೆ, ಅದಕ್ಕೆ ಕಾರಣ ಅವರ ಹೆಂಡತಿ ಮಾನ್ಯತಾಗೆ ಹುಷಾರಿಲ್ಲದೆ ಇರುವುದಾಗಿದೆ.

ಇಂತಹ ಅವಕಾಶ ಸಾಮಾನ್ಯ ಖೈದಿಗಳಿಗೆ ಇದೆಯೇ ಎನ್ನುವುದೇ ಈಗ ಜನಜನಿತವಾಗಿ ಹರಡಿರುವ ಸಂಶಯ!a53 ವರ್ಷದ ಈ ನಟ 42 ತಿಂಗಳ ಶಿಕ್ಷೆ ಅನುಭವಿಸುತ್ತಿದ್ದಾರೆ. 1993ರ ಮುಂಬೈ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಜೈಲುಶಿಕ್ಷೆ ಎದುರಿಸುತ್ತಿರುವ ಸಂಜಯ್ ಗೆ 5 ವರ್ಷ ಜೈಲಾಗಿತ್ತು.

ಆದರೆ ಈಗ ಅನೇಕ ತಿಂಗಳುಗ ಶಿಕ್ಷೆ ಮಾತ್ರ ಉಳಿದಿದ್ದು ಅದನ್ನು ಪೂರೈಸಲು ಇನ್ನೂ ಜೈಲಿನಲ್ಲಿ ಇರಬೇಕಾಗಿದೆ. ಎಮರ್ಜೆನ್ಸಿ ಸಮಯದಲ್ಲಿ ಖೈದಿಗಳಿಗೆ ರಜೆ ನೀಡುವ ಪರಿಪಾಠ ಇದೆ.. ಈಗ ಸಂಜಯ್ ದತ್ ಕುಟುಂಬದ ಹೋಂ ಮಿನಿಸ್ಟರ್ ಸಿಕ್ಕಾಪಟ್ಟೆ ಹುಷಾರು ತಪ್ಪಿರುವುದರಿಂದ ಮಿಯಾ ಮನೆಗೆ ಹೋಗಲೇ ಬೇಕಾಗಿದೆ. ಅದಕ್ಕೆ ಅವರಿಗೆ ರಜ ಸಿಕ್ಕಿದೆ. ಎಷ್ಟಾದರೂ ಅವರು ರಾಯಲ್ ಪ್ರಿಸನರ್..!

Share this Story:

Follow Webdunia kannada