ರಾಮ್‌ಚರಣ್ ಬಗ್ಗೆ ಸಿಟ್ಟಾದ ಪ್ರಿಯಾಂಕಾ ಚೋಪ್ರಾ
Publish Date: Tue, 03 Sep 2013 (10:10 IST)
Updated Date: Tue, 03 Sep 2013 (10:10 IST)
ಪ್ರಿಯಾಂಕಾ ಚೋಪ್ರಾ ಇತ್ತೀಚಿನ ದಿನಗಳಲ್ಲಿ ಸಖತ್ ಬ್ಯುಸಿ ಆಗಿಬಿಟ್ಟಿದ್ದಾರೆ. ಕೈತುಂಬಾ ಚಿತ್ರಗಳಿವೆ. ಅದರೊಂದಿಗೆ ಐಟಂ ಹಾಡುಗಳು, ಅತಿಥಿ ಪಾತ್ರಗಳ ನಿರ್ವಹಣೆಯ ಹೊಣೆಯೂ ಇದೆ. ಹೀಗಾಗಿ ಪ್ರತಿದಿನದ ಶೆಡ್ಯೂಲ್ ತಯಾರಿಸಿಕೊಂಡು ಕೆಲಸ ಮಾಡಬೇಕಿದೆಯಂತೆ. ಈ ಮಧ್ಯೆ ಅಪೂರ್ವ ಲಖಿಯಾ ನಿರ್ದೇಶನದ ಝಂಜೀರ್ ಚಿತ್ರದಲ್ಲೂ ನಟಿಸಿದ್ದಾರೆ. ರಾಮ್‌ಚರಣ್ ಚಿತ್ರದ ನಾಯಕ್. ಈಗ ಪ್ರಮೋಷನ್ ಕಾರ್ಯದಲ್ಲೂ ಪಿಗ್ಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅವರನ್ನು ಕಾಯಿಸಿ ಅವರ ಮೂಡ್ ಕೆಡಿಸುತ್ತಿರುವುದು ನಾಯಕ ರಾಮ್ಚರಣ್ ಅಂತೆ.ಪ್ರತಿ ಕಾರ್ಯಕ್ರಮಗಳಿಗೂ ರಾಮ್ಚರಣ್ ತಡವಾಗಿ ಆಗಮಿಸುವುದು ಪಿಗ್ಗಿ ಕೋಪ ಹೆಚ್ಚಿಸಿದೆ. ಅವರಿಗಾಗಿ ಸಮಯವೆಲ್ಲಾ ವ್ಯರ್ಥ ಮಾಡುವ ವ್ಯವಧಾನ ನನಗಿಲ್ಲ ಎಂದು ರೇಗಿದ್ದಾರೆ. ಇದು ಒಂದೆರಡು ಕಾರ್ಯಕ್ರಮಗಳಲ್ಲಾದರೆ ಅದನ್ನು ಕ್ಷಮಿಸಬಹುದು, ಆದರೆ ಪ್ರತಿಯೊಂದು ಕಾರ್ಯಕ್ರಮಕ್ಕೂ ಉದ್ದೇಶಪೂರ್ವಕವಾಗಿ ತಡವಾಗಿ ಬರುತ್ತಾರೆ ಎಂದು ಪ್ರಿಯಾಂಕ ಸಿಟ್ಟಾಗಿದ್ದಾರೆ. ಅವರಿಗೆ ಟೈಮ್ಸೆನ್ಸ್ ಇಲ್ಲವೇ ಎಂದು ಕೂಗಾಡಿದ್ದಾರೆ. ಹೇಳಿಕೇಳಿ ರಾಮ್ಚರಣ್ ಚಿರಂಜೀವಿ ಅವರ ಪುತ್ರ. ವೃತ್ತಿಗಾಂಭೀರ್ಯ ಇಲ್ಲದವರು ಬಾಲಿವುಡ್ನಲ್ಲಿ ನೆಲವೂರಲು ಸಾಧ್ಯವೇ ಎಂಬುದಾಗಿ ಜನ ಪ್ರಶ್ನಿಸುತ್ತಿದ್ದಾರಂತೆ. ಅದೇನೇ ಇರಲಿ ರಾಮ್ಚರಣ್ ಮೇಲೆ ಪ್ರಿಯಾಂಕಾ ಸಿಟ್ಟಾಗಿರುವುದಂತೂ ನಿಜ.