ರಾಮ್ಲೀಲಾ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ
Publish Date: Thu, 19 Sep 2013 (11:58 IST)
Updated Date: Thu, 19 Sep 2013 (11:57 IST)
ರಾಮ್ಲೀಲಾ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಗ್ರ್ಯಾಂಡ್ ಆಗಿ ಇತ್ತೀಚೆಗೆ ನಡೆಯಿತು. ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಸಿಂಗ್ ಜೊತೆಯಾಗಿ ವೇದಿಕೆಮೇಲೆ ಕಾಣಿಸಿಕೊಂಡರು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ ಚಿತ್ರಕ್ಕೆ ಅವರೇ ನಿರ್ಮಾಪಕರು, ಸಂಗೀತ ನಿರ್ದೇಶಕರು ಹಾಗೂ ಚಿತ್ರಕಥೆ ಬರೆದವರು. ಹೀಗೆ ಚಿತ್ರದ ಮುಕ್ಕಾಲು ಭಾಗ ಜವಾಬ್ದಾರಿಯನ್ನು ಬನ್ಸಾಲಿ ಹೊತ್ತಿದ್ದಾರೆ. ಮುಂಬೈನಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಶೇಕ್ಸ್ಪಿಯರ್ ಹಾಗೂ ರೋಮಿಯೋ ಜೂಲಿಯೆಟ್ ಪಾತ್ರಗಳು ಎಷ್ಟು ಜನಪ್ರಿಯವಾದುವೋ ಅದರಂತೆ ರಾಮ್ಲೀಲಾ ಚಿತ್ರವೂ ಜನಪ್ರಿಯವಾಗಲಿದೆ ಎಂದರು ಸಂಜಯ್ ಬನ್ಸಾಲಿ.ನಮ್ಮಿಬ್ಬರ ಮಧ್ಯದ ಆನ್ಸ್ಕ್ರೀನ್ ರೊಮಾನ್ಸ್ ಹೈರೇಂಜ್ನಲ್ಲಿದೆ. ಈ ಚಿತ್ರ ಅತಿದೊಡ್ಡ ಚಿತ್ರವಾಗಿ ಹೊರಹೊಮ್ಮಲಿದ್ದಾರೆ ಎಂದು ಭರವಸೆ ನೀಡಿದ್ದಾರೆ ರಣವೀರ್ ಸಿಂಗ್. ನವೆಂಬರ್ 15ರಂದು ಚಿತ್ರ ಬಿಡುಗಡೆಯಾಗುತ್ತಿದೆ. ವೇದಿಕೆ ಮೇಲೆ ಗನ್ ತೋರಿಸಿ ದೀಪಿಕಾ ಪಡುಕೋಣೆ ಚುಂಬಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಒಂದು ಕೆನ್ನೆಗೆ ರಣವೀರ್ ಸಿಂಗ್ ಇನ್ನೊಂದು ಕೆನ್ನೆಗೆ ದೀಪಿಕಾ ಚುಂಬಿಸಿದರು. ದೀಪಿಕಾ ಚುಂಬನದ ಲಿಪ್ಸ್ಟಿಕ್ ಗುರುತು ಬನ್ಸಾಲಿ ಕೆನ್ನೆ ಮೇಲೆ ಉಳಿಯಿತು. ರಣವೀರ್ ಸಿಂಗ್ ಎದೆಗೆ ಗುರಿಯಿಟ್ಟು ಕಣ್ಣಲ್ಲಿ ಕಣ್ಣು ನೆಟ್ಟು ದೀಪಿಕಾ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಮೊದಲು ಎದೆಗೆ ಗುರಿಯಿಟ್ಟ ದೀಪಿಕಾ ಗನ್ ತೋರಿಸಿ ವೇದಿಕೆ ಮೇಲೆ ಎಲ್ಲರ ಗಮನಸೆಳೆದರು. ವೇದಿಕೆ ಮೇಲೆ ಚೆಲ್ಲಾಟವಾಡಿ ಎಲ್ಲರನ್ನೂ ನಕ್ಕು ನಗಿಸಿದುವುದರೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.