ರಾಮ್ಲೀಲಾ ಚಿತ್ರ ಅಮ್ಮನಿಗೆ ಅರ್ಪಣೆ: ಬನ್ಸಾಲಿ
Publish Date: Thu, 03 Oct 2013 (10:43 IST)
Updated Date: Thu, 03 Oct 2013 (10:39 IST)
ದೀಪಿಕಾ ಪಡುಕೋಣೆ ಅಭಿನಯದ ರಾಮ್ಲೀಲಾ ಚಿತ್ರ ಮತ್ತೆ ಸುದ್ದಿಯಲ್ಲಿದೆ. ಕೆಲ ದಿನಗಳ ಹಿಂದೆ ಶೂಟಿಂಗ್ ಮುಗಿಸಿರುವ ಚಿತ್ರದ ಹಾಡುಗಳು ಟಿವಿ ಚಾನೆಲ್ನಲ್ಲಿ ಈಗಾಗಲೇ ಹಿಟ್ ಎನಿಸಿಕೊಂಡಿವೆ. ಚಿತ್ರೀಕರಣ ಮುಗಿಯುತ್ತಲೇ ಎಲ್ಲರ ಶ್ರಮವನ್ನು ಶ್ಲಾಘಿಸಿರುವ ನಿರ್ದೇಶಕ ಬನ್ಸಾಲಿ ದೀಪಿಕಾ ಪಾತ್ರವನ್ನು ಮನಸಾರೆ ಕೊಂಡಾಡಿದ್ದಾರೆ. ಅದಕ್ಕೆ ಕಾರಣ ಈ ಚಿತ್ರವನ್ನು ಸಂಜಯ್ ತನ್ನ ತಾಯಿ ಲೀಲಾಗೆ ಅರ್ಪಿಸುತ್ತಿದ್ದಾರೆ.ಹೀಗಾಗಿ ದೀಪಿಕಾಗೂ ಹ್ಯಾಟ್ಸಾಫ್ ಹೇಳಿರುವ ಬನ್ಸಾಲಿ ದೀಪಿಕಾ ಪಾತ್ರದ ಬಗ್ಗೆ ತುಂಬಾನೇ ಹೊಗಳಿದ್ದಾರೆ. ತಾಯಿಯನ್ನು ಭಾವನಾತ್ಮಕವಾಗಿ ತುಂಬಾ ಹಚ್ಚಿಕೊಂಡಿರುವ ಸಂಜಯ್ ನನ್ನನ್ನು ಅವರ ತಾಯಿ ಸ್ಥಾನದಲ್ಲಿ ಇಟ್ಟಿದ್ದಾರೆ. ಅವರ ಮನಸ್ಸಿನ ಪ್ರೀತಿ ನನಗೂ ಅರ್ಥವಾಗುತ್ತದೆ. ಅದಕ್ಕೆ ತಕ್ಕಂತೆ ನನ್ನಿಂದ ಕೆಲಸ ತೆಗೆದಿದ್ದಾರೆ. ಅವರಿಗೆ ನಾನೆಂದೂ ಋಣಿಯಾಗಿದ್ದೇನೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಿದ ಅರಿವೂ ನನಗಿದೆ ಎಂದಿದ್ದಾರೆ ದೀಪಿಕಾ. ಒಟ್ಟಿನಲ್ಲಿ ರಣವೀರ್ ಹಾಗೂ ದೀಪಿಕಾ ಜೋಡಿ ಮಧ್ಯೆ ಹರಿಯುತ್ತಿರುವ ಗಾಸಿಪ್, ಹಿಟ್ ಆಗಿರುವ ಹಾಡುಗಳು, ಲಕ್ಷಾಂತರ ಹಿಟ್ ಪಡೆದಿರುವ ಚಿತ್ರದ ಪ್ರೊಮೊ ಇವೆಲ್ಲಾ ರಾಮ್ಲೀಲಾ ಖ್ಯಾತಿಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿವೆ. ಸಂಜಯ್ ಕಳೆದ ಹಲವು ವರ್ಷಗಳಿಂದ ಉತ್ತಮ ಚಿತ್ರ ಮಾಡುತ್ತಿದ್ದರೂ ಅದ್ಯಾಕೋ ಕಮಶರ್ಿಯಲ್ ಹಿಟ್ ಆಗುತ್ತಿಲ್ಲ ಎಂಬುದು ಮಾತ್ರ ಕಟು ಸತ್ಯ.