Publish Date: Wed, 18 Jul 2007 (11:57 IST)
Updated Date: Wed, 18 Jul 2007 (11:55 IST)
ನೂತನ ಶೋಲೆ ಚಿತ್ರಕ್ಕೆ ನ್ಯಾಯಾಲಯ ಕ್ಲೀನ್‌ಚಿಟ್ ನೀಡಿದೆ. ರಾಮ್ ಗೋಪಾಲ್‌ವರ್ಮ ಖುಶ್ ಆಗಿದ್ದಾರೆ. ಹೊಸ ಹೆಸರಿನಲ್ಲಿ 'ರಾಮ್ ಗೋಪಾಲ್ ವರ್ಮ ಕಿ ಆಗ್' ಹೆಸರಲ್ಲಿ ಈ ಚಿತ್ರ ತೆರೆಕಾಣಲಿದೆ.
ಶೋಲೆ ಚಿತ್ರದ ರಿಮೇಕ್ ಆಗಿರುವ ಈ ಚಿತ್ರವನ್ನು ಹೊಸ ಹೆಸರಿನಲ್ಲಿ ವೀಕ್ಷಕರಿಗೆ ಪ್ರದರ್ಶಿಸುವ ಕಾರ್ಯಕ್ಕೆ ದೆಹಲಿ ಹೈಕೋರ್ಟ್ ಅನುಮತಿ ನೀಡಿದ್ದಾರೆ. ರಮೇಶ್ ಸಿಪ್ಪಿ ಅವರ ಮೂಲ ಶೋಲೆಯನ್ನು ಶೀರ್ಷಿಕೆ ಹಾಗೂ ಪಾತ್ರಗಳ ಹೆಸರು ಬದಲಿಸಿ ಹೊಸ ನಿರ್ಮಾಣದಲ್ಲಿ ಸಿನಿಮಾ ತಯಾರಾಗಿದೆ.
ಹೆಸರಷ್ಟೇ ಅಲ್ಲ ಹೊಸ ಚಿತ್ರದಲ್ಲಿ ಹಳೆ ಚಿತ್ರದ ಹೆಸರಗಳೂ ಬಹುತೇಕ ಬದಲಾಗ ಬೇಕಿದೆ. ಶೀರ್ಷಿಕೆಯಷ್ಟೇ ಅಲ್ಲ ವರ್ಮ ಅವರ ಸಿನಿಮಾದಲ್ಲಿರುವ ಎಲ್ಲಾ ಹಳೆ ಶೋಲೆಯ ಹೆಸರುಗಳನ್ನೂ ಬದಲಾಯಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಚಿತ್ರದ ಪ್ರಖ್ಯಾತ ಕಥಾ ಪಾತ್ರಗಳಾದ ಗಬ್ಬರ್ ಸಿಂಗ್ ಹೆಸರನ್ನು ಬಬ್ಬಾನ್ ಸಿಂಗ್ ಎಂದು ಬದಲಿಸಿದ್ದರೆ, ಬಸಂತಿಯನ್ನು ಗುಂಗೂ , ವೀರು ವನ್ನು ವೀರೇಂದ್ರ ಚೌವ್ಹಾಣ್, ರಾಧಾಳನ್ನು ದೇವಿ, ಜೈಯನ್ನು ಜೈ ರಾನಡೆ ಎಂದು ಮರುನಾಮಕರಣ ಮಾಡಲಾಗಿದೆ. ಮೂಲಸಿನಿಮಾದಲ್ಲಿದ್ದ ಸೂರ್ಮಾ ಹಾಗೂ ಸಾಂಬಾರನ್ನು ರಂಬಾಬಾಯ್ ಹಾಗೂ ತಾಂಬೆ ಎಂದು ಬದಲಿಸಲಾಗಿದೆ.
ಮೂಲ ಶೋಲೆಯ ನಿರ್ಮಾಪಕ ಜಿ.ಪಿ. ಸಿಪ್ಪಿ ಅವರ ಮೊಮ್ಮಕ್ಕಳಾದ ಸಚ್ಚಾ ಸಿಪ್ಪಿ ಹಾಗೂ ಶಾನ್ ಉತ್ತಮ್ ಸಿಂಗ್ ನ್ಯಾಯಾಲಯದಲ್ಲಿ ಹೂಡಿದ ದಾೆಯಲ್ಲಿ ವರ್ಮ ಅವರ ಹೊಸ ಶೋಲೆಯನ್ನು ಶಾಶ್ವತವಾಗಿ ಪ್ರದರ್ಶಿಸದಂತೆ ತಡೆಯಬೇಕೆಂದು ವಿನಂತಿಸಿದ್ದರು.
ಆದರೆ ಹೊಸ ಚಿತ್ರ ವೀಕ್ಷಣೆಯ ಬಳಿಕ ತಮ್ಮ ಬೇಡಿಕೆಳನ್ನು ನ್ಯಾಯಾಲಯ ಕಾನೂನುಕ್ರಮದ ಮೂಲಕ ಮುಂದುವರಿಸಿ ಎಂಬುದಾಗಿ ನ್ಯಾಯಾಲಯ ಫಿರ್ಯಾಧಿದಾರರಿಗೆ ಸಲಹೆ ನೀಡಿದೆ.