Article Bollywood Gossips %e0%b2%b0%e0%b2%be%e0%b2%ae %e0%b2%b0%e0%b2%be%e0%b2%ae %e0%b2%95%e0%b3%8d%e0%b2%af%e0%b2%be %e0%b2%b9%e0%b3%88 %e0%b2%af%e0%b3%86 %e0%b2%a1%e0%b3%8d%e0%b2%b0%e0%b2%be%e0%b2%ae%e0%b2%be 107063000024_1.htm

Daily Horoscope

Select Your Language

Notifications

webdunia
webdunia
webdunia
webdunia

ರಾಮ ರಾಮ ಕ್ಯಾ ಹೈ ಯೆ ಡ್ರಾಮಾ

ಕುಚ್ ಲವ್ ಕುಚ್ ಡ್ರಾಮ
ಖ್ಯಾತ ಗಾಯಕ ಮತ್ತು ಸಂಗೀತಗಾರ ಅದ್ನಾನ್ ಸಾಮಿ, ಚಿತ್ರ ತಯಾರಕರಾದ ಚಂದ್ರಕಾಂತ್ ಸಿಂಗ್‌ರ ಮುಂಬರುವ ಚಿತ್ರವಾದ ಕುಚ್ ಲವ್ ಕುಚ್ ಡ್ರಾಮದ ಹೆಸರನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುರೇಂದ್ರ ಭಾಟಿಯಾರಿಂದ ನಿರ್ಮಿಸಲ್ಪಡುತ್ತಿರುವ ಈ ಚಿತ್ರದ ಹೆಸರನ್ನು ಈಗ ರಾಮ ರಾಮ ಕ್ಯಾ ಹೈ ಯೆ ಡ್ರಾಮ ಎಂಬ ಹೆಸರಿನಿಂದ ಬದಲಾಯಿಸಲಾಗಿದೆ.

ನಿರ್ಮಾಪಕ ಹೇಳುವ ಪ್ರಕಾರ, ಈ ಚಿತ್ರಕ್ಕಾಗಿ ಅದ್ನಾನ್ ಸಾಮಿ ಎರಡು ಹಾಡುಗಳನ್ನು ಹಾಡಿದ್ದಾರೆ. ಅದರಲ್ಲಿ ಒಂದು ಹಾಡು ತಮಾಷೆಯಿಂದ ಕೂಡಿದ್ದು ಚಿತ್ರಕಥೆಯ ಜತೆಯಲ್ಲೇ ಸಾಗುತ್ತದೆ ಮತ್ತು ಚಿತ್ರದ ಹೆಸರಿಗೆ ಯೋಗ್ಯವಾಗಿದೆ.

ಈ ಕಾರಣದಿಂದ ಅದ್ನಾನ್ ಸಾಮಿ ನಿರ್ಮಾಪಕ ಮತ್ತು ನಿರ್ಧೇಶಕರಿಗೆ ಚಿತ್ರದ ಹೆಸರನ್ನು ರಾಮ ರಾಮ ಕ್ಯಾ ಹೈ ಎ ಡ್ರಾಮ ಎಂದು ಬದಲಾಯಿಸಲು ಸಲಹೆ ನೀಡಿದರು.

ಈ ಹಾಡಿನಿಂದಲೇ ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸುವ ಯೋಜನೆ ಇದ್ದು ಈ ಹೆಸರು ಚಿತ್ರದ ಪರವಾಗಿ ಕೆಲಸಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಾಡಿನ ಬಗ್ಗೆ ಬಾರಿ ವಿಶ್ವಾಸದಲ್ಲಿರುವ ಅದ್ನಾನ್ ಇದು ಹಿಟ್ ಆಗಲಿದೆ ಎಂದು ಹೇಳಿದ್ದಾರೆ. ಈ ಚಿತ್ರದಲ್ಲಿ ಅಮೃತ ಅರೋರ, ನೆಹಾ ದುಪಿಯಾ ಮತ್ತು ಅಶಿಶ್ ಚಾಧರಿ ಪ್ರಮುಖ ಪಾತ್ರವಹಿಸಲಿದ್ದಾರೆ. ಸಿದ್ದಾರ್ಥ್ ಸುಹಾಸ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Share this Story:

Follow Webdunia kannada