ರಾಣಿಗೆ ಫೆ.10ರಂದು ಮದುವೆ ಯೋಚನೆ ಇಲ್ಲವಂತೆ
Publish Date: Mon, 22 Oct 2007 (13:49 IST)
Updated Date: Mon, 22 Oct 2007 (13:49 IST)
ಮುಂಬರುವ ಫೆ.10ರಂದು ತನ್ನ ಮದುವೆಯಾಗುತ್ತದೆ ಎಂಬ ವರದಿಗಳ ಕುರಿತು ಬಾಲಿವುಡ್ ನಟಿ ರಾಣಿ ಮುಖರ್ಜಿ ಅಚ್ಚರಿ ವ್ಯಕ್ತಪಡಿಸಿದ್ದಾರೆಮದುವೆ ನಿಗದಿಯಾಗಿರುವ ದಿನದಂದು, ರಾಣಿ ಮುಖರ್ಜಿ ಕುನಾಲ್ ಕೋಹ್ಲಿ ಅವರ ಚಿತ್ರಕ್ಕಾಗಿ ಶೂಟಿಂಗ್‌ನಲ್ಲಿರುತ್ತಾರೆ. ಈ ಮೊದಲು ಕೋಹ್ಲಿಯವರ ಈ ಚಿತ್ರವು ಡಿಸೆಂಬರ್ ತಿಂಗಳಲ್ಲಿ ಕೊನೆಗೊಳ್ಳುತ್ತದೆ ಎಂಬ ವರದಿಗಳಿದ್ದರೂ, ಅದೀಗ ಫೆಬ್ರವರಿವರೆಗೆ ನಡೆಯಲಿದೆ.ಇದೀಗ ರಾಣಿಯ ವಿವಾಹ ದಿನವನ್ನು ಬದಲಾಯಿಸಬೇಕಾಗಿದೆ. ಈಗಾಗಲೇ ಹಲವಾರು ಬಾರಿ ನಿಶ್ಚಿತಾರ್ಥ, ವಿವಾಹ ಕುರಿತಾದ ಊಹಾಪೋಹಗಳನ್ನು ಕೇಳಿದ್ದ ರಾಣಿಗೆ ಇದೇನೂ ಹೊಸತಲ್ಲ. ಆದಿತ್ಯ ಚೋಪ್ರಾ ಜತೆಗೆ ನಿಶ್ಚಿತಾರ್ಥವಾಗಿದೆ ಎಂಬುದನ್ನು ರಾಣಿ ಅಲ್ಲಗಳೆಯುತ್ತಿದ್ದರೂ ಆಕೆಯ ಆತ್ಮೀಯರು ಆಗಿದೆ ಎನ್ನುತ್ತಿದ್ದಾರೆ. ಈ ಚಿತ್ರ ಹಿಟ್ ಆಗಬೇಕೆಂಬ ಕಾರಣಕ್ಕಾಗಿ ಆಕೆ ಮೌನ ವಹಿಸುತ್ತಿದ್ದಾಳೆ ಎಂಬುದು ಅವರ ಅಭಿಪ್ರಾಯ.