Article Bollywood Gossips %e0%b2%b0%e0%b2%be%e0%b2%a3%e0%b2%bf %e0%b2%b8%e0%b3%88%e0%b2%ab%e0%b3%8d %e0%b2%b9%e0%b2%b0%e0%b2%9f%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf %e0%b2%95%e0%b2%b0%e0%b3%80%e0%b2%a8%e0%b2%be %e0%b2%aa%e0%b3%81%e0%b2%b0%e0%b2%be%e0%b2%a3 108010400035_1.htm

Daily Horoscope

Select Your Language

Notifications

webdunia
webdunia
webdunia
webdunia

ರಾಣಿ-ಸೈಫ್ ಹರಟೆಯಲ್ಲಿ ಕರೀನಾ ಪುರಾಣ

ರಾಣಿ-ಸೈಫ್ ಹರಟೆಯಲ್ಲಿ ಕರೀನಾ ಪುರಾಣ
ಹಮ್ ತುಮ್, ತರಾ ರಮ್ ಪಮ್ ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ ನಂತರ ಸೈಫ್ ಅಲಿಖಾನ್- ರಾಣಿ ಮುಖರ್ಜಿ ನಡುವೆ ಯಾವುದೋ ಒಂದು ರೀತಿಯ ಪ್ರೆಂಡ್‌ಶಿಪ್ ಬೆಳೆದು ಬಿಟ್ಟಿದೆ. ಈಗ ಅದು ಎಲ್ಲಿಯವರೆಗೆ ಹೋಗಿದೆ ಎಂದರೆ ಸೈಫ್ ನೇರಾ ನೇರವಾಗಿ ರಾಣಿ ಬಗ್ಗೆ ರೈಲು ಬಿಡುತ್ತಿದ್ದಾನಂತೆ ಅಂದರೆ ಹೊಗಳುತ್ತಿದ್ದಾನಂತೆ.

ಏನಾಗಿದೆ ಅಂದರೆ ಕುನಾಲ್ ಕೋಹ್ಲಿಯ ಇನ್ನೂ ಹೆಸರಿಡದ ಚಿತ್ರದಲ್ಲಿ ರಾಣಿ ಮತ್ತು ಸೈಫ್ ನಟಿಸುತ್ತಿದ್ದಾರೆ. ಚಿತ್ರೀಕರಣಕ್ಕೆ ಎಂದು ತಂಡ ಬ್ಯಾಂಕಾಕ್‌ಗೆ ಹೋಗಿತ್ತು. ರಾಣಿಯದು ಆ ಚಿತ್ರದಲ್ಲಿ ಸಹ ನಟಿಯ ಪಾತ್ರ ಅಂದರೆ ಸೈಫ್ ಅಲಿಖಾನ್‌ನ ಮಕ್ಕಳ ಜವಾಬ್ದಾರಿ ನೋಡಿಕೊಳ್ಳುವ ಪಾತ್ರ. ಹೋಗಲಿ ಬಿಡಿ.

ಚಿತ್ರೀಕರಣದಲ್ಲಿ ರಾಣಿಗಂತೂ ಪದೇ ಪದೇ ಡ್ರೆಸ್ ಬದಲಿಸುವ ಗೋಡವೆ ಇಲ್ಲ. ಇದೇ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡ ಸೈಫ್ ಅವಳ ಹತ್ತಿರ ತನ್ನ ಗರ್ಲ್ ಪ್ರೆಂಡ್ ಕರೀನಾ ಬಗ್ಗೆ ರೈಲು ಬಿಟ್ಟಿದ್ದೆ ಬಿಟ್ಟಿದ್ದು. ಕೇಳಿ ಕೇಳಿ ಸುಸ್ತಾಗುವುದು ರಾಣಿಗೆ ಬಾಕಿ ಇತ್ತು. ಆದರೂ ಸಹನೆ ತೆಗೆದುಕೊಂಡು ಕರೀನಾ ಅದ್ಭುತ ಹುಡುಗಿ ಹಾಗೇ ಹೀಗೆ ಎಂದು ರೈಲು ಹತ್ತಿಸಿದಳು.

ಸಂಶಯ ಏನು ಅಂದರೆ ರಾಣಿಯನ್ನು ಕಂಡರೆ ಕರೀನಾಗೆ ಆಗುವುದಿಲ್ಲ. ಕರೀನಾಗಂತೂ ರಾಣಿಯ ಮುಖ ನೋಡಿದರೆ ಉಬ್ಬಿಸಿಕೊಂಡು ಇರುತ್ತಾಳೆ ಪರಿಸ್ಥಿತಿ ಹೀಗೆ ಇದ್ದ ಮೇಲೆ ಸೈಫ್ ಭುಜದ ಮೇಲೆ ತಲೆ ಇಟ್ಟು ಅದು ಹಾಗಲ್ಲ ಹೀಗೆ ಎಂದು ಕರೀನಾಗೆ ಮೇಲೆ ಆ ಪರಿ ಪ್ರೀತಿ ಉಕ್ಕಿ ಹರಿಯಲು ಕಾರಣ ಏನು ?

Share this Story:

Follow Webdunia kannada