Publish Date: Mon, 06 Aug 2007 (10:54 IST)
Updated Date: Mon, 06 Aug 2007 (10:53 IST)
ಬಾಲಿವುಡ್ ಖಂಡಾಲ ಬೆಡಗಿ ರಾಣಿ ಮುಖರ್ಜಿ ಸಮಾಜಮುಖಿಯಾಗಿದ್ದಾರೆ. ಅವರೀಗ ಧೂಮಪಾನದ ದುಷ್ಪರಿಣಾಮದ ವಿರುದ್ಧ ಆಂದೋಲನದಲ್ಲಿ ಸಕ್ರಿಯವಾಗಿದ್ದಾರೆ.
ರಾಣಿ ಮುಖರ್ಜಿ ಇದೀಗ ಹೊಗೆ ಬತ್ತಿ- ಸಿಗರೇಟ್ ಸೇದುವುದರ ವಿರುದ್ಧ ಆಂದೋಲನ ಆರಂಭಿಸಿದ್ದಾರೆ. ಇದಕ್ಕೊಂದು ಕಾರಣವಿದೆ. ಅದೆಂದರೆ ರಾಣಿ ಸಿಗರೇಟ್ ಸೇದುತ್ತಾಳೆ ಎಂಬ ಅಪಪ್ರಚಾರ ಕಾರಣವಿರಲೂ ಬಹುದು ಎಂದು ಆಕೆಯ ಮಿತ್ರವೃಂದ ಹೇಳುತ್ತಿದೆ.
ರಾಣಿ ಮುಖರ್ಜಿ 'ಬಿಚ್ಚೂ' ಹಾಗೂ ' ಬಂಟಿ ಔರ್ ಬಬ್ಲಿ' ಚಿತ್ರಗಳ ಕೆಲವು ದೃಶ್ಯಗಳಲ್ಲಿ ಸಿಗರೇಟ್‌ಗೆ ತುಟಿ ಜೋಡಿಸಿದ್ದರು. ಆದರೆ ನಿಜ ಜೀವನದಲ್ಲೂ ಆಕೆ ಧೂಮಪಾನಿಯೇ? ಹೌದು ಎಂಬ ಅಪಪ್ರಚಾರ ನಡೆದಿತ್ತು. ಆಕೆ ಮೌನ ವಹಿಸಿದ್ದರು. ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು.
ಆದರೆ ಆಕೆಯ ಮೌನವನ್ನು ಅನೇಕರು ದುರುಪಯೋಗ ಮಾಡುವ ಸಾಧ್ಯತೆ ಇರುವುದರಿಂದ ರಾಣಿ ಮೌನ ಮುರಿದಿದ್ದಾರೆ. ಇದೀಗ ಸಕ್ರಿಯವಾಗಿದ್ದಾರೆ. ಟೀಕಾಕಾರರಿಗೆ ಹೊಸ ರೀತಿಯ ಉತ್ತರ.ಅದೇನೆಂದರೆ ಧೂಮಪಾನ ವಿರೋಧಿ ಆಂದೋಲನದಲ್ಲಿ ಆಕೆ ಪಾಲ್ಗೊಳ್ಳುತ್ತಿದ್ದಾರೆ.
ರಾಣಿ ಮುಖರ್ಜಿಯ ಮಿತ್ರರೆಲ್ಲಾ ಧೂಮಪಾನಿಗಳಂತೆ. ಆದರೆ ಆಕೆ ಮಾತ್ರ ಬಳಸುವುದಿಲ್ಲ ಎಂಬ ಮಾತಿದೆ. ಇದೇ ರೀತಿಯ ಕಥಾನಕಕ್ಕೆ ಆಕೆ ಜೀವ ತುಂಬಲಿದ್ದಾರೆ.