Article Bollywood Gossips %e0%b2%b0%e0%b2%be%e0%b2%a3%e0%b2%be %e0%b2%ae%e0%b3%81%e0%b2%b9%e0%b3%82%e0%b2%b0%e0%b3%8d%e0%b2%a4%e0%b2%a6%e0%b2%82%e0%b2%a6%e0%b3%87 %e0%b2%b0%e0%b2%9c%e0%b2%a8%e0%b3%80%e0%b2%95%e0%b2%be%e0%b2%82%e0%b2%a4%e0%b3%8d %e0%b2%85%e0%b2%b8%e0%b3%8d%e0%b2%b5%e0%b2%b8%e0%b3%8d%e0%b2%a5 111042900032_1.htm

Daily Horoscope

Select Your Language

Notifications

webdunia
webdunia
webdunia
webdunia

ರಾಣಾ ಮುಹೂರ್ತದಂದೇ ರಜನೀಕಾಂತ್ ಅಸ್ವಸ್ಥ

ರಜನೀಕಾಂತ್ ಅಸ್ವಸ್ಥ
PR
ಖ್ಯಾತ ಚಿತ್ರನಟ ರಜನೀಕಾಂತ್ ಶುಕ್ರವಾರ ಅಸೌಖ್ಯದಿಂದ ಬಳಲಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿರುವುದು, ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತು.

ವಡಪಳನಿಯ ಎವಿಎಂ ಸ್ಟುಡಿಯೋದಲ್ಲಿ ರಾಣಾ ಚಿತ್ರದ ಚಿತ್ರೀಕರಣ ಮಹೂರ್ತ ನಡೆಯುತ್ತಿತ್ತು. ಮಧ್ಯಾಹ್ನ ರಜನೀಕಾಂತ್‌ ಅವರಿಗೆ ರಕ್ತದ ಒತ್ತಡ ಮತ್ತು ಬಳಲಿಕೆಯಿಂದಾಗಿ ಅಸ್ವಸ್ಥರಾಗಿದ್ದರಿಂದ ಅವರನ್ನು ಕೂಡಲೇ ಮೈಲಾಪುರದ ಇಸಬೆಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ, ಮನೆಗೆ ಪಾಪಸ್‌ ಕರೆತರಲಾಗಿದೆ. ಈ ಸಂದರ್ಭದಲ್ಲಿ ಅವರ ಪುತ್ರಿಯರಾದ ಐಶ್ವರ್ಯ ಮತ್ತು ಸೌಂದರ್ಯ ಹಾಜರಿದ್ದರು. ರಜನಿ ಅವರಿಗೆ ಮನೆಯಲ್ಲೇ ಚಿಕಿತ್ಸೆ ಮುಂದುವರಿದಿದ್ದು, ರಾಣಾ ಚಿತ್ರೀಕರಣವನ್ನು ಒಂದು ವಾರ ಮುಂದೂಡಲಾಗಿದೆ.

ಕೆ.ಎಸ್‌.ರವಿಕುಮಾರ್‌ ನಿರ್ದೇಶನದ ರಾಣಾ ಚಿತ್ರದಲ್ಲಿ ರಜನೀಕಾಂತ್‌ ತ್ರಿಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಲಿದ್ದಾರೆ. ಸೋನು ಸೂದ್ ಹಾಗೂ ಇಲಿಯಾನಾ ಡಿಕ್ರೂಸ್‌ ಸಹ ಪ್ರಮುಖ ತಾರಾಂಗಣದಲ್ಲಿದ್ದಾರೆ. ರಜನೀ ಕಾಂತ್‌ ಅವರ ಮರಾಠಾ ಸಮುದಾಯದೊಂದಿಗೆ ಹೆಣೆದಿರುವ ಕಥಾವಸ್ತುವನ್ನೊಳಗೊಂಡ ಚಿತ್ರ ಭಾರತೀಯ ನಿನೆಮಾ ರಂಗದಲ್ಲೇ ವಿಶಿಷ್ಟವಾಗಲಿದೆ.

ಎ.ಆರ್‌.ರೆಹಮಾನ್‌ ಚಿತ್ರಕ್ಕೆ ಸಂಗೀತ ನೀಡಲಿದ್ದು, ರತ್ನವೇಲು ಅವರ ಛಾಯಾಗ್ರಹಣ ಹಾಗೂ ಆಂಟನಿ ಅವರು ಸಂಕಲನ ಮಾಡಲಿದ್ದಾರೆ. ರೋಬೋ ಚಿತ್ರದ ಮಾದರಿಯಲ್ಲೇ ವಿಷ್ಯುಯಲ್‌ ಎಫೆಕ್ಟ್‌ ಇರುವ ಈ ಚಿತ್ರ 2012ರಲ್ಲಿ ತಮಿಳು, ಹಿಂದಿ ಮತ್ತು ತೆಲುಗಿನಸಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಇದಕ್ಕೆ ಮೊದಲು ಐಶ್ವರ್ಯಾ ಬಚ್ಚನ್‌ ಅವರು ನಾಯಕಿಯಾಗಿ ರಜನೀಕಾಂತ್‌ ಅವರೊಂದಿಗೆ ನಟಿಸಿದ್ದ ರೋಬೋ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ನಿರ್ಮಿಸಿತ್ತು.

Share this Story:

Follow Webdunia kannada