ಬಾಲಿವುಡ್ನ ಸದ್ಯದ ಡಿಮಾಂಡ್ ತಾರೆ ಸೋನಾಕ್ಷಿ ಸಿನ್ಹ ಯಾವ ರೀತಿ ತಮ್ಮ ರಕ್ಷಾಬಂಧನ ಹಬ್ಬ ಆಚರಿಸಿಕೊಳ್ಳುತ್ತಾರೆ ಎಂಬ ಕುತೂಹಲವೇ. ಇಲ್ಲಿದೆ ಅದಕ್ಕೆ ಉತ್ತರ. ಅವರಿಗೆ ಲವ ಕುಶ ಎಂಬ ಇಬ್ಬರು ಸಹೋದರರಿದ್ದಾರೆ. ಅವರಿಬ್ಬರಿಗೂ ರಾಖಿ ಕಟ್ಟಿ ಉತ್ತಮ ಗಿಫ್ಟ್ ಪಡೆಯುವ ಪ್ಲಾನ್ ಮಾಡಿಕೊಂಡಿದ್ದಾರೆ ಸೋನಾಕ್ಷಿ.
ಅವರಿಬ್ಬರು ಬೋರ್ಡಿಂಗ್ ಶಾಲೆಯಲ್ಲಿ ಓದಿದವರಂತೆ. ಪ್ರತಿ ವರ್ಷ ಸೋನಾಕ್ಷಿ ಅವರಿಬ್ಬರಿಗೆ ರಾಖಿ ಮತ್ತು ಚಾಕೊಲೇಟ್ ಕಳಿಸುತ್ತಿದ್ದರಂತೆ. ಆಗ ಸಹೋದರರ ಬಳಿ ಹಣ ಇರುತ್ತಿರಲಿಲ್ಲವಲ್ಲ. ಹೀಗಾಗಿ ಉಡುಗೊರೆ ವಸೂಲಿ ಮಾಡುವುದು ಇವರಿಗೂ ಸಾಧ್ಯವಾಗುತ್ತಿರಲಿಲ್ಲ.
ಈಗ ಎಲ್ಲವೂ ಬದಲಾಗಿದೆ. ಲವ ಸಾದಿಯಾನ ಚಿತ್ರದಲ್ಲಿ ನಾಯಕನಾಗಿ ಹೆಸರು ಮಾಡಿದ್ದರೆ, ಕುಶ ನಿರ್ದೇಶಕರಾಗಲು ಓಡಾಡುತ್ತಿದ್ದಾರೆ. ಇಬ್ಬರೂ ಕೈತುಂಬಾ ದುಡ್ಡು ಸಂಪಾದಿಸಿದ್ದಾರೆ. ಈ ಬಾರಿ ರಾಖಿ ಹಬ್ಬಕ್ಕೆ ಅವರಿಬ್ಬರಿಂದ ಸಖತ್ ಕಾಣಿಕೆ ಪಡೆಯುತ್ತೇನೆ ಎನ್ನುತ್ತಾರೆ ಸೋನಾಕ್ಷಿ. ಅಂದ ಹಾಗೆ ಆ ದಿನ ಎಲ್ಲರೂ ಮನೆಯಲ್ಲೇ ಇರುತ್ತಾರಂತೆ. ಅಮ್ಮ ಮಾಡಿದ ತಿಂಡಿ ಇತ್ಯಾದಿಗಳನ್ನು ತಿಂದು ಸಿನೆಮಾಗೆ ಹೋಗುವುದೋ ಇಲ್ಲ, ಶಾಪಿಂಗ್ಗೆ ಹೋಗುವುದೋ ಮಾಡುತ್ತಾರಂತೆ. ನನಗಿದು ವಿಶೇಷವಾದ ದಿನ. ಅಣ್ಣ ತಮ್ಮನ ಜತೆ ಇರುವುದು ನನಗೆ ಎಲ್ಲಾ ಕೆಲಸಗಳಿಂದ ಮುಖ್ಯ. ಈ ದಿನ ಬರುವುದೋ ವರ್ಷಕ್ಕೊಮ್ಮೆ. ಹೀಗಾಗಿ ಯಾವುದೇ ಶೂಟಿಂಗ್ ಇದ್ದರೂ ಕ್ಯಾನ್ಸಲ್ ಮಾಡಿ ಅಣ್ಣಂದಿರ ಜೊತೆ ದಿನ ಕಳೆಯುತ್ತೇನೆ ಎಂದಿದ್ದಾರೆ ಸೋನಾಕ್ಷಿ.