Article Bollywood Gossips %e0%b2%b0%e0%b2%be%e0%b2%96%e0%b2%bf %e0%b2%b8%e0%b2%be%e0%b2%b5%e0%b2%82%e0%b2%a4%e0%b3%8d %e0%b2%a8%e0%b2%be%e0%b2%af%e0%b2%95%e0%b2%bf 107090500020_1.htm

Select Your Language

Notifications

webdunia
webdunia
webdunia
webdunia

ರಾಖಿ ಸಾವಂತ್ ನಾಯಕಿ

ರಾಖಿ ಸಾವಂತ್ ಮಿಂಚಲಿದ್ದಾಳೆ
ಶಮ್ಮಿಕಪೂರ್ ಪುತ್ರ ಆದಿತ್ಯರಾಜ್ ಕಪೂರ್ ಅವರ ಮುಂದಿನ ಚಿತ್ರ ಬಾಲ್ತಿದೇವಿಯಲ್ಲಿ ರಾಖಿ ಸಾವಂತ್ ನಾಯಕಿ ಪಾತ್ರದಲ್ಲಿ ಮಿಂಚಲಿದ್ದಾಳೆ. ಸಾಂಪ್ರದಾಯಿಕ ಚಿತ್ರಗಳ ತಯಾರಿಕೆಗೆ ಹೆಸರಾದ ಆದಿತ್ಯ ರಾಜ್ ಕಪೂ‌ರ್‌ಗೆ ಸಾವಂತ್ ವ್ಯಕ್ತಿತ್ವ ಕಂಡರೆ ಖುಷಿ.

ತಮ್ಮ ಚಿತ್ರಕ್ಕೆ ಸಾವಂತ್ ತಕ್ಕವಳು ಎನ್ನುತ್ತಾರೆ. ಸೌತ್ ಹಾಲ್‌ನಲ್ಲಿ ಮಹಿಳೆಯೊಬ್ಬಳು ಚಿಂದಿಯಿಂದ ಶ್ರೀಮಂತಿಕೆಗೆ ಏರುವ ಕತೆಯ ಸುತ್ತ ಈ ಚಿತ್ರ ತಿರುಗುತ್ತದೆ. ಸಾವಂತ್ ಆ ಪಾತ್ರಕ್ಕೆ ನ್ಯಾಯ ಒದಗಿಸುತ್ತಾಳೆಂಬ ವಿಶ್ವಾಸ ಕಪೂರ್‌ಗಿದೆ.

ರಾಖಿ ಸಾವಂತ್ ಸದ್ಯಕ್ಕೆ ಕ್ಲೌಡ್ 9 ಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ. ಕಪೂರ್ ಜತೆ ಕೆಲಸ ಮಾಡುವುದು ನನ್ನ ಅದೃಷ್ಟ ಎನ್ನುತ್ತಾಳೆ. ಚಿತ್ರದಲ್ಲಿ ಮೈ ಎಕ್ಸ್‌ಪೋಸ್ ಮಾಡುವುದಿಲ್ಲ ಎಂದೂ ಹೇಳುತ್ತಾಳೆ.

ನಾಯಕಿ ಪಾತ್ರಗಳು ಸಿಗುತ್ತಿದ್ದರೂ, ಐಟಂ ಗರ್ಲ್ ಎಂದು ಸ್ವತಃ ಕರೆದುಕೊಳ್ಳಲು ಆಕೆಗೆ ಮುಜುಗರವೇನೂ ಇಲ್ಲವಂತೆ.

Share this Story:

Follow Webdunia kannada