Article Bollywood Gossips %e0%b2%b0%e0%b2%be%e0%b2%96%e0%b2%bf %e0%b2%ae%e0%b2%a6%e0%b3%81%e0%b2%b5%e0%b3%86%e0%b2%af%e0%b2%be%e0%b2%97%e0%b2%b2%e0%b3%81 12 515 %e0%b2%85%e0%b2%aa%e0%b3%8d%e0%b2%b2%e0%b2%bf%e0%b2%95%e0%b3%87%e0%b2%b6%e0%b2%a8%e0%b3%8d 109043000059_1.htm

Daily Horoscope

Select Your Language

Notifications

webdunia
webdunia
webdunia
webdunia

ರಾಖಿ ಮದುವೆಯಾಗಲು 12,515 ಅಪ್ಲಿಕೇಶನ್!

ರಾಖಿ ಕಾ ಸ್ವಯಂವರ್
IFM
ರಾಖೀ ಸಾವಂತ್ ಸ್ವಯಂವರದ ಮೂಲಕ ಟಿವಿ ಚಾನಲ್ ರಿಯಾಲಿಟಿ ಶೋನಲ್ಲಿ ಮದುವೆಯಾಗುತ್ತೇನೆಂದು ಘೋಷಿಸಿದ್ದೇ ಘೋಷಿಸಿದ್ದು, ಆಕೆಯನ್ನು ಮದುವೆಯಾಗಲು ಗಂಡುಗಳು ಬರಗಾಲದಲ್ಲಿ ನೀರಿನ ಪೈಪಿನ ಮುಂದೆ ಸಾಲುಗಟ್ಟಿ ನಿಲ್ಲುವ ಕೊಡಪಾನಗಳಂತೆ ಕಾದು ಕುಳಿತಿದ್ದಾರೆ. ಅಪ್ಲಿಕೇಶನ್ ಫಾರ್ಮು ಪುಟಗಟ್ಟಲೆ ಇದ್ದರೂ ಲೆಕ್ಕಿಸದೆ ಅವೆಲ್ಲವನ್ನೂ ತಾಳ್ಮೆಯಿಂದ ಭರ್ತಿ ಮಾಡಿ ಈ ಐಟಂ ಸುಂದರಿ ಬಿಚ್ಚಮ್ಮ ರಾಖಿಯ ಕೊರಳಿಗೆ ಹಾರ ಹಾಕುವುದು ಇವರ ಪರಮ ಇಚ್ಛೆ.

ಇದೇನು ಸುಳ್ಳು ಕಥೆಯಲ್ಲ. ಉದ್ಯಮಿಗಳು, ವೈದ್ಯರು, ಮಾಡೆಲ್‌ಗಳು, ಎನ್‌ಆರ್ಐಗಳು... ಒಂದೇ ಎರಡೇ. ಬರೋಬ್ಬರಿ 12,515 ಅಪ್ಲಿಕೇಶನ್ ಕೇವಲ 20 ದಿನದಲ್ಲಿ!

ಅಬ್ಬಾ ರಾಖಿಯೇ.. ಅನ್ನದೆ ವಿಧಿಯಿಲ್ಲ. ಯಾವಾಗಲೂ ವಿವಾದವನ್ನೇ ತನ್ನ ಕೊರಳಲ್ಲಿ ಸುತ್ತಿಕೊಂಡು ಖುಷಿಪಡುವ ರಾಖಿ ಆಕೆಯೇ ಹೇಳಿಕೊಂಡಿರುವಂತೆ ನಂ.1 ಐಟಂ ಸುಂದರಿ. ಆಕೆಯನ್ನು ಮದುವೆಯಾಗಲು ಖಂಡಿತವಾಗಿಯೂ ಅದೃಷ್ಟ ಹೊಂದಿರಬೇಕಂತೆ.

webdunia
IFM
ಇದೀಗ ಎನ್‌ಡಿಟಿವಿ ಇಮ್ಯಾಜಿನ್ ಚಾನೆಲ್ಲಿನಲ್ಲಿ ಮುಂದಿನ ತಿಂಗಳಿನಿಂದ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಅರ್ಜಿ ಹಾಕಿದ ಸಾವಿರಾರು ಮಂದಿಯಿಂದ 15 ಮಂದಿಯ ಆಯ್ಕೆ ನಡೆಯುತ್ತದೆ. ಆ 15 ಮಂದಿಗೆ ರಿಯಾಲಿಟಿ ಶೋದಲ್ಲಿ ಭಾಗವಹಿಸಿ ರಾಖಿಯ ವಿಶೇಷ ಪ್ರಶ್ನಾವಳಿಗಳಿಗೆ ಉತ್ತರಿಸಬೇಕಾಗುತ್ತದೆ. ಅಂತಿಮವಾಗಿ ಒಬ್ಬನನ್ನು (ಖಡಾಖಂಡಿತವಾಗಿ ಒಬ್ಬನನ್ನೇ ಅಂತೆ!) ಆಯ್ಕೆ ಮಾಡುವ ರಾಖಿ ಅಲ್ಲೇ ಆತನ ಕೊರಳಿಗೆ ಹಾರ ಹಾಕುವ ಮೂಲಕ ಅದ್ದೂರಿಯಾಗಿ ಅಷ್ಟೇ ವಿಶಿಷ್ಟವಾಗಿ ಮದುವೆಯಾಗಲಿದ್ದಾಳಂತೆ.

ಆ ದಿಸೆಯಲ್ಲಿ ಬಂದಿರುವ ಅರ್ಜಿಗಳು 12,515. ಇನ್ನೂ ಅರ್ಜಿಯ ಅಂತಿಮ ದಿನಾಂಕ ಮುಗಿದಿಲ್ಲವಾದ್ದರಿಂದ ಇನ್ನಷ್ಟು ಅರ್ಜಿಗಳು ಬರಬಹುದು. ತನ್ನ ಈ ವಿಶಿಷ್ಟವಾದ ಪ್ರಯೋಗಕ್ಕೆ ರಾಖಿ ಹರ್ಷಚಿತ್ತಳಾಗಿ ಎಲ್ಲ 12,515 ಭಾವೀ ಪತಿಯರಿಗೆ ಧನ್ಯವಾದ ಹೇಳಿದ್ದಾಳೆ. ಆದರೆ ಅಂತಿಮವಾಗಿ ಒಬ್ಬ ಭಾವೀ ಪತಿ ಮಾತ್ರ ಪತಿಯಾಗಿ ಮಣೆ ಏರಲಿದ್ದಾನೆ.

ಅಂದಹಾಗೆ, ಅತೀ ಹೆಚ್ಚು ಅಪ್ಲಿಕೇಶನ್ ಬಂದಿದ್ದು ದೆಹಲಿಯಿಂದ. ದೆಹಲಿ ನಗರವೊಂದರಿಂದಲೇ 2,465 ಅರ್ಜಿಗಳು ಬಂದಿವೆಯಂತೆ. ನಂತರದ ಸ್ಥಾನ ಮುಂಬೈಗೆ. ಅಲ್ಲಿಂದ 1,980 ಅಪ್ಲಿಕೇಶನ್‌ಗಳನ್ನು ರಾಖಿ ಪಡೆದಿದ್ದಾಳೆ. ಬಹುತೇಕ ಎಲ್ಲ ಅರ್ಜಿಗಳ ಗಂಡುಗಳೂ 18ರಿಂದ 35 ವರ್ಷದ ಒಳಗಿನವರು ಅಂತ ರಾಖಿ ಹೇಳಿದ್ದಾಳೆ. ಈ ಎಲ್ಲ ಅರ್ಜಿಗಳೂ ಎನ್‌ಡಿಟಿವಿ ಇಮ್ಯಾಜಿನ್ ಚಾನಲ್ಲಿಗೆ ಇಮೇಲ್, ಅಂಚೆ, ಎಸ್‌ಎಂಎಸ್ ಹಾಗೂ ಫೋನ್‌ಗಳ ಮೂಲಕ ಬಂದಿವೆ. ಪ್ರತಿಯೊಬ್ಬರೂ ತಮ್ಮದೇ ಆದ ಭಾಷೆಗಳಲ್ಲಿ ಆಕೆಗೆ ತಾನು ಹೇಗೆ ಸೂಕ್ತ ಎಂಬುದನ್ನು ಬರೆದಿದ್ದಾರೆ. ಈ ಎಲ್ಲ ಪತ್ರಗಳ, ಎಸ್‌ಎಂಎಸ್‌ಗಳ ಅರ್ಜಿಗಳ ರಾಶಿಯನ್ನು ನೋಡಿ ಸ್ವತಃ ರಾಖಿಗೇ ಶಾಕ್ ಆಗಿದ್ಯಂತೆ.

ಏನೇ ಇರಲಿ, ಅಂದಹಾಗೆ ರಾಖಿಗೆ ಈ ಮೊದಲೇ ಮದ್ವೆಯೂ ಆಗಿದೆ ಎಂಬ ಗಾಳಿ ಸುದ್ದಿ ಹಿಂದಿನಿಂದಲೂ ಇತ್ತು. ಮೂರೇ ತಿಂಗಳಲ್ಲಿ ಆಕೆಯ ಮದುವೆ ಮುರಿದುಬಿತ್ತಂತೆ. ಅದೆಲ್ಲ ಹಳೇ ಕಥೆಯಾಗಿದ್ದು, ಈಗ ಅದರ ನೆನಪಲ್ಲಿ ಯಾರೂ ಇಲ್ಲ. ಏನೇ ಇರಲಿ, ದೊಡ್ಡವರ ವಿಷಯ! ಅಂದಹಾಗೆ, ಅರ್ಜಿ ಗುಜರಾಯಿಸಲು ಮೇ 5ರವರೆಗೂ ಇನ್ನೂ ಸಮಯವಕಾಶವಿದೆ. ನೀವೂ ಯಾಕೆ ಒಂದು ಕೈ ನೋಡಬಾರದು!?
webdunia
IFM

Share this Story:

Follow Webdunia kannada