ರವಿವರ್ಮ ಬಾಲಿವುಡ್ ಸಾಹಸ ನಾಯಕ
Publish Date: Fri, 08 Nov 2013 (11:45 IST)
Updated Date: Fri, 08 Nov 2013 (11:39 IST)
ಕನ್ನಡದ ಅನೇಕಾನೇಕ ಪ್ರತಿಭೆಗಳು ಕನ್ನಡಕ್ಕಿಂತ ಹೆಚ್ಚಾಗಿ ಬೇರೆ ಭಾಷೆಗಳಲ್ಲಿ ಬೆಳೆದದ್ದೇ ಹೆಚ್ಚು ಹೆಚ್ಚು. ಕಾರಣ ಅನೇಕವು ಇರ ಬಹುದಾದರು ನಮ್ಮ ಮನೆಯ ಅಂಗಳದ ಹೂಗಳು ಬೇರೆ ಆಲಯದ ದೇವನ ಪೂಜೆಗೆ ಸಂದಿವೆ ಅನ್ನೋದು ಸತ್ಯ. ಅಂತಹ ಪ್ರತಿಭೆಗಳಲ್ಲಿ ಕನ್ನಡದ ಸಾಹಸ ನಿರ್ದೇಶಕ ರವಿ ವರ್ಮ ಸಹ ಒಬ್ಬರು. ಆದರೆ ಇವರಿಗೆ ಕನ್ನಡದಲ್ಲೂ ಒಳ್ಳೆಯ ಅವಕಾಶಗಳಿವೆ. ಅದೇ ರೀತಿ ಇತ್ತೀಚಿಗೆ ಅವರು ಬಾಲಿವುಡ್ ನಲ್ಲೂ ತಮ್ಮ ಪ್ರತಿಭೆಯ ಘಮಲು ಹರಡೋಕೆ ಆರಂಭಿಸಿದ್ದಾರೆ. ಸಲ್ಮಾನ್ ಖಾನ್ ಜೈ ಹೊ ಬಳಿಕ , ಶಾಹಿದ್ ಕಪೂರ್ ರಾಂಬೋ ರಾಜ್ ಕುಮಾರ್ ಚಿತ್ರದ ನಂತರ ಈಗ ಅವರು ಶಾರುಖ್ ಖಾನ್ ಅವರು ಹ್ಯಾಪಿ ನ್ಯೂ ಇಯರ್ ಚಿತ್ರಕ್ಕೆ ಮತ್ತು ಅಜಯ್ ದೇವಗನ್ ಚಿತ್ರ ಆಕ್ಷನ್ ಜಾಕ್ಸನ್ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಧೃವ ಸರ್ಜಾ ಹೊಸ ಚಿತ್ರ ಬಹದ್ದೂರ್ ಚಿತ್ರದ ಪ್ರೆಸ್ ಮೀಟ್ ನಲ್ಲಿ ರವಿವರ್ಮ ಈ ಸಂಗತಿಯನ್ನು ಹೊರ ಹಾಕಿದರು. ಸಾಮಾನ್ಯವಾಗಿ ಬಾಲಿವುಡ್ ಮಂದಿ ದಕ್ಷಿಣ ಪ್ರತಿಭೆಗಳಿಗೆ ಮಾನ್ಯತೆ ನೀಡುತ್ತಾರೆ. ನಾನು ನನ್ನ ಹಿಂದಿ ಚಿತ್ರಗಲ್ಲಿ ಹೆಸರಿನ ಜೊತೆ ಬೆಂಗಳೂರು ಹೆಸರನ್ನು ಸೇರಿಸಲು ಕೇಳಿದೆ ಅವರು ಅದಕ್ಕೆ ಸಮ್ಮತಿಸಿದರು ಎಂದು ಹೇಳಿದ್ದಾರೆ ರವಿ ವರ್ಮ. ಧೃವ ಸರ್ಜಾ ಪೊಗರು ರವಿ ವರ್ಮ ಅವರ ಬ್ಯುಸಿ ಶೆಡ್ಯೂಲ್ ಕಾರಣದಿಂದ ಸದ್ಯಕ್ಕೆ ಮುಂದೂಡಿದೆ.. ಬೆಳವಣಿಗೆ ಅಂದ್ರ ಹೀಂಗಾ ಹೌದಲ್ರಿ !